ETV Bharat / city

ಇಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ: ಅಭ್ಯರ್ಥಿಗಳ ಎದೆಯಲ್ಲಿ ಢವ-ಢವ

author img

By

Published : Nov 14, 2019, 4:11 AM IST

ರಾಜ್ಯದ ಕನಕಪುರ, ಕೋಲಾರ, ಮುಳಬಾಗಿಲು, ಕೆಜಿಎಫ್‌/ರಾಬರ್ಟ್ಸನ್‌ಪೇಟೆ, ಗೌರಿಬಿದನೂರು ಮತ್ತು ಚಿಂತಾಮಣಿ ನಗರಸಭೆಗಳು, ಮಾಗಡಿ, ಬೀರೂರು ಮತ್ತು ಕಂಪ್ಲಿ ಪುರಸಭೆಗಳು ಹಾಗೂ ಜೋಗ್‌–ಕಾರ್ಗಲ್‌, ಕುಂದಗೋಳ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯಿತಿಗಳಲ್ಲಿ ಮತದಾನ ನಡೆದಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ. ಚುನಾವಣೆಯ ಸಂಕ್ಷಿಪ್ತ ವಿವರ ಇಲ್ಲಿದೆ.

ಸ್ಥಳೀಯ ಸಂಸ್ಥೆಗಳ ಚುನಾವಣೆ

ಬೆಂಗಳೂರು: ಮಂಗಳೂರು ಮತ್ತು ದಾವಣಗೆರೆ ಮಹಾನಗರ ಪಾಲಿಕೆಗಳ ಸಹಿತ ಹಲವು ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲ್ಲಿದ್ದು, ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುರುವಾಗಿದೆ.

ಕನಕಪುರ, ಕೋಲಾರ, ಮುಳಬಾಗಿಲು, ಕೆಜಿಎಫ್‌/ರಾಬರ್ಟ್ಸನ್‌ಪೇಟೆ, ಗೌರಿಬಿದನೂರು ಮತ್ತು ಚಿಂತಾಮಣಿ ನಗರಸಭೆಗಳು, ಮಾಗಡಿ, ಬೀರೂರು ಮತ್ತು ಕಂಪ್ಲಿ ಪುರಸಭೆಗಳು ಹಾಗೂ ಜೋಗ್‌–ಕಾರ್ಗಲ್‌, ಕುಂದಗೋಳ ಮತ್ತು ಕೂಡ್ಲಿಗಿ ಪಟ್ಟಣ ಪಂಚಾಯಿತಿಗಳಲ್ಲಿ ಮತದಾನ ನಡೆದಿದ್ದು, ಇಂದು ಮಧ್ಯಾಹ್ನದ ವೇಳೆಗೆ ಸಂಪೂರ್ಣ ಫಲಿತಾಂಶ ಹೊರಬೀಳಲಿದೆ. ಜಿಲ್ಲಾ ಹಾಗೂ ತಾಲೂಕು ಚುನಾವಣಾ ಅಧಿಕಾರಿಗಳು ಫಲಿತಾಂಶ ನೀಡಲು ಸಕಲ ರೀತಿಯಲ್ಲಿ ಸನ್ನದ್ಧವಾಗಿದ್ದು, ಚುನಾವಣೆಯ ಹೈಲೈಟ್ಸ್​ ಇಲ್ಲಿದೆ.

Karnataka Urban, Local Body Election Results
ಸ್ಥಳೀಯ ಸಂಸ್ಥೆಗಳ ಚುನಾವಣಾ

ದಾವಣಗೆರೆ ಮಹಾನಗರ ಪಾಲಿಕೆಗೆ ಶೇ 56.31, ಮಂಗಳೂರು ಮಹಾನಗರ ಪಾಲಿಕೆಗೆ ಶೇ 59.57ರಷ್ಟು ಮತದಾನವಾಗಿದ್ದು, ನಗರಸಭೆಗಳಾದ ಕನಕಪುರ ಶೇ 69.71ರಷ್ಟು, ಕೋಲಾರ ಶೇ 68.15 ರಷ್ಟು, ಮುಳಬಾಗಿಲು ಶೇ 74.28ರಷ್ಟು, ರಾಬರ್ಟ್‍ಸನ್‍ಪೇಟೆ ಶೇ 56.51ರಷ್ಟು, ಗೌರಿಬಿದನೂರು ಶೇ 75.31ರಷ್ಟು ಹಾಗೂ ಚಿಂತಾಮಣಿ ಶೇ 65.31ರಷ್ಟು ಮತದಾನವಾಗಿತ್ತು.

ಪುರಸಭೆಗಳಾದ ಮಾಗಡಿ ಶೇ 81.42ರಷ್ಟು, ಬೀರೂರು ಶೇ 77.84ರಷ್ಟು, ಕಂಪ್ಲಿ ಶೇ 69.36ರಷ್ಟು ಮತದಾನವಾಗಿತ್ತು. ಪಟ್ಟಣ ಪಂಚಾಯಿತಿಗಳಾದ ಜೋಗ್-ಕಾರ್ಗಲ್ ಶೇ 73.80ರಷ್ಟು, ಕುಂದಗೋಳ ಶೇ 72.48ರಷ್ಟು, ಕೂಡ್ಲಗಿ ಶೇ 75.71ರಷ್ಟು ಮತದಾನ ನಡೆದಿತ್ತು.

ದಾವಣಗೆರೆ ಪಾಲಿಕೆ ವ್ಯಾಪ್ತಿಯ ಒಟ್ಟು 45 ವಾರ್ಡ್ ಗಳಿಂದ ಒಟ್ಟು 208 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್​ಗಳಿಗೆ ನಡೆದ ಚುನಾವಣೆಯಲ್ಲಿ ಅಂದಾಜು ಶೇ 59.67 ರಷ್ಟು ಮತದಾನವಾಗಿದೆ. 180 ಅಭ್ಯರ್ಥಿಗಳು ಕಣದಲ್ಲಿದ್ದರು.

ಕೋಲಾರ ಜಿಲ್ಲೆಯ 3 ನಗರ ಸಭೆಗಳಿಗೆ ಚುನಾವಣೆ ನಡೆದಿದೆ. ಕೋಲಾರದ 35 ವಾರ್ಡ್, ಮುಳಬಾಗಿಲಿನ 31 ವಾರ್ಡ್ ಹಾಗೂ ಕೆಜಿಎಫ್​ನ 35 ವಾರ್ಡ್‍ಗಳಿಗೆ ಮತದಾನ ನಡೆದಿದೆ.

ಮತದಾನ ನಡೆದ 409 ವಾರ್ಡ್‍ಗಳ ಪೈಕಿ ಕಾಂಗ್ರೆಸ್- 386, ಬಿಜೆಪಿ- 363, ಜೆಡಿಎಸ್- 233 ಅಭ್ಯರ್ಥಿಗಳನ್ನು ಕಣಕಿಳಿಸಿದೆ. 475 ಪಕ್ಷೇತರರು ಸೇರಿದಂತೆ ಒಟ್ಟು 1587 ಅಭ್ಯರ್ಥಿಗಳ ಭವಿಷ್ಯ ಇಂದು ಹೊರಬೀಳಲಿದೆ. 14 ನಗರ ಸ್ಥಳೀಯ ಸಂಸ್ಥೆಗಳ 418 ವಾರ್ಡ್‍ಗಳ ಪೈಕಿ ಕನಕಪುರ ನಗರಸಭೆಯ 7, ಬೀರೂರು ಪುರಸಭೆಯ 1 ಮತ್ತು ಕೂಡ್ಲಗಿ ಪಟ್ಟಣ ಪಂಚಾಯಿತಿಯ 1 ಸ್ಥಾನ ಸೇರಿದಂತೆ ಒಟ್ಟು 9 ವಾರ್ಡ್‍ಗಳಿಗೆ ಅವಿರೋಧ ಆಯ್ಕೆಯಾಗಿದೆ.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.