ಬೆಂಗಳೂರು: ಲಾಕ್ಡೌನ್ನಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಟೂರಿಸಂ ಸೊಸೈಟಿ ಸೆಕ್ರೆಟರಿ ಮಹಾಲಿಂಗಯ್ಯ ವಿಡಿಯೋ ಮೂಲಕ ಸರಕಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಪತ್ರದ ಮೂಲಕವೂ ಸಿಎಂಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಲಾಕ್ಡೌನ್ನಿಂದ ಪ್ರವಾಸೋದ್ಯಮ ಆದಾಯ ಕುಸಿತವಾಗಿದೆ. ಆಸ್ತಿ ತೆರಿಗೆಯನ್ನು ಮೇ 31 ರೊಳಗಾಗಿ ಕಟ್ಟಬೇಕಾಗಿದೆ. ಆದರೆ ಲಾಕ್ಡೌನ್ನಿಂದಾಗಿ ನಮ್ಮ ಇಂಡಸ್ಟ್ರೀ ಪೂರ್ತಿ ಲಾಸ್ ನಲ್ಲಿದೆ. ಹಾಗಾಗಿ ಎರಡು ಕಂತಿನಲ್ಲಿ ಕಟ್ಟಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮೊದಲ ಕಂತನ್ನು ಅಕ್ಟೋಬರ್ 31ರೊಳಗೆ ಕಟ್ಟಲು ಪ್ರಯತ್ನ ಮಾಡುತ್ತೇವೆ. ಎರಡನೇ ಕಂತನ್ನು , 2022ರ ಮಾರ್ಚ್ 31 ರವರೆಗೆ ಕಟ್ಟಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಬಾರ್ ಲೈಸನ್ಸನ್ನು ಜೂನ್ ನಲ್ಲಿ ಪೂರ್ಣ ಪಾವತಿ ಮಾಡಿ ರಿನೀವಲ್ಗೆ ಅರ್ಜಿ ಸಲ್ಲಿಸಬೇಕು. ಜೂನ್ ತಿಂಗಳಲ್ಲಿ ಶೇ.50 ರಷ್ಟು ಪೇಮೆಂಟ್ ಮಾಡುತ್ತೇವೆ. ಉಳಿದ ಶೇ.50 ರಷ್ಟನ್ನು ಡಿಸೆಂಬರ್ 31ರಮೇಲೆ ಕಟ್ಟುತ್ತೇವೆ ಎಂದು ಮನವಿ ಮಾಡಿದರು.
ಲಾಕ್ಡೌನ್ ಇರುವುದರಿಂದ ಹೊಟೇಲ್ಗಳ ಎಲೆಕ್ಟ್ರಿಸಿಟಿ ಬಿಲ್ ಮಾತ್ರ ಕಟ್ಟುವುದಕ್ಕೆ ಅವಕಾಶ ನೀಡಿ. ಆದರೆ ಮಿನಿಯಮ್ ಡಿಮ್ಯಾಂಡ್ ಚಾರ್ಜ್ ಕಡಿತಗೊಳಿಸಲು ಮನವಿ ಮಾಡಿದರು. ಸರ್ಕಾರಕ್ಕೆ ಆರು ಅಂಶಗಳ ಮನವಿ ಪತ್ರವನ್ನು ಕರ್ನಾಟಕ ಟೂರಿಸಂ ಸೊಸೈಟಿ ಸಲ್ಲಿಸಿದೆ ಎಂದು ಹೇಳಿದರು.