ಬೆಂಗಳೂರು: ಮುಚ್ಚರಿಕೆ ದೃಷ್ಟಿಯಿಂದ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೋವಿಡ್ ವಾರಿಯರ್ಗಳಿಗೆ ಮತ್ತು 60 ವರ್ಷ ಮೇಲ್ಪಟ್ಟರಿಗೆ ಸೋಮವಾರದಿಂದ ನೀಡಲಾಗುತ್ತಿದೆ.
ದೇಶಾದ್ಯಂತ ಚಾಲನೆ ನೀಡಲಾಗಿರುವ ಬೂಸ್ಟರ್ ಡೋಸ್ ಅಭಿಯಾನದಲ್ಲಿ ಹೆಚ್ಚು ಲಸಿಕೆ ನೀಡಿದ ಟಾಪ್ 10 ರಾಜ್ಯಗಳಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಒಂದೇ ದಿನ 81,728 ಮಂದಿ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ.
ಮೊದಲ ಸ್ಥಾನದಲ್ಲಿ ಗುಜರಾತ್ (1,55,714) ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ (1,21,457), ರಾಜಸ್ಥಾನ (95,540), ಕರ್ನಾಟಕ (81,728), ಮಧ್ಯಪ್ರದೇಶ (64,901), ಬಿಹಾರ್ (64,061), ಉತ್ತರ ಪ್ರದೇಶ (58,669) , ಒಡಿಶಾ (55,305), ಮಹಾರಾಷ್ಟ್ರ (49,307) ಪಶ್ಚಿಮ ಬಂಗಾಳ(35,081) ರಾಜ್ಯಗಳಿವೆ.
ಇದನ್ನೂ ಓದಿ: ಚಂಪಾ ಅಂತ್ಯಕ್ರಿಯೆಗೆ ತೆರಳಿದ್ದ ಸಿಎಂ ಬೊಮ್ಮಾಯಿಗೆ ವಕ್ಕರಿಸಿತು ಕೊರೊನಾ!