ETV Bharat / city

ಚಾಮರಾಜನಗರ ಆಕ್ಸಿಜನ್​ ದುರಂತ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ: ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ - ಕರ್ನಾಟಕ ಕರ್ಫ್ಯೂ

ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಜೀವ ಉಳಿಸಲು ಆಕ್ಸಿಜನ್ ಸಕಾಲದಲ್ಲಿ ಸರಬರಾಜು ಮಾಡುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಆಸ್ಪತ್ರೆಗಳಿಗೆ ಆಕ್ಸಿಜನ್ ಸುಗಮ ಪೂರೈಕೆ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

ಆಕ್ಸಿಜನ್​ ದುರಂತ
ಆಕ್ಸಿಜನ್​ ದುರಂತ
author img

By

Published : May 4, 2021, 12:09 AM IST

ಸುಗಮ ಆಕ್ಸಿಜನ್ ಸರಬರಾಜು, ಪೂರೈಕೆ, ನಿರ್ವಹಣೆ: ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ ಸರ್ಕಾರ

ಬೆಂಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾದ 23 ಮಂದಿ ಮೃತಪಟ್ಟ ಘಟನೆಯ ಹಿನ್ನೆಲೆ ಸರ್ಕಾರ ಇದೀಗ ಆಕ್ಸಿಜನ್ ಪೂರೈಕೆ, ಸಾಗಾಟ, ನಿರ್ವಹಣೆ ಸಂಬಂಧ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದೆ.

ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ಸೋಂಕಿತರ ಜೀವ ಉಳಿಸಲು ಆಕ್ಸಿಜನ್ ಸಕಾಲದಲ್ಲಿ ಸರಬರಾಜು ಮಾಡುವುದು ಅತ್ಯವಶ್ಯಕವಾಗಿದೆ. ಹೀಗಾಗಿ ಆಕ್ಸಿಜನ್ ಉತ್ಪಾದಕರಿಂದ ಹಿಡಿದು ಸರಬರಾಜುದಾರರು, ರಿಫಿಲ್ಲರ್ಸ್​ನಿಂದ ಆಸ್ಪತ್ರೆಗಳಿಗೆ ಆಕ್ಸಿಜನ್ ಸುಗಮ ಪೂರೈಕೆ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಪ್ರಕಟಿಸಿದೆ.

- ರಾಜ್ಯದಲ್ಲಿರುವ ಎಲ್ಲಾ ಆಕ್ಸಿಜನ್ ರಿಫಿಲ್ಲಿಂಗ್ ಏಜೆನ್ಸಿಗಳು ಪ್ರತಿದಿನ ಪಡೆದಿರುವ ಆಕ್ಸಿಜನ್, ಸರಬರಾಜು ಮತ್ತು ಉಳಿದಿರುವ ಆಕ್ಸಿಜನ್ ದಾಸ್ತಾನು ಬಗ್ಗೆ ವಿವರಗಳನ್ನು ಬಿಬಿಎಂಪಿ ಮತ್ತು ಜಿಲ್ಲಾಧಿಕಾರಿಗಳಿಗೆ ನೀಡಬೇಕು.

- ಎಲ್ಲಾ ಆಕ್ಸಿಜನ್ ರಿಫಿಲ್ಲಿಂಗ್ ಏಜೆನ್ಸಿಗಳು ಪ್ರತಿದಿನ ಆಸ್ಪತ್ರೆಗಳಿಗೆ ಹಾಗೂ ಇತರ ಸಂಸ್ಥೆಗಳಿಗೆ ಪೂರೈಕೆ ಮಾಡಿದ ಆಕ್ಸಿಜನ್, ಯಾರಿಗೆ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. ಸರಬರಾಜು ಮಾಡಿದ ಆಕ್ಸಿಜನ್ ಪ್ರಮಾಣದ ನಿಖರ, ಸವಿವರ ಮಾಹಿತಿ ನೀಡಬೇಕು. ಈ ಮಾಹಿತಿ ನಿತ್ಯದ ಒಟ್ಟು ಸರಬರಾಜಿನ ಅಂಕಿ-ಅಂಶಕ್ಕೆ ತಾಳೆಯಾಗಬೇಕು.

- ಆಕ್ಸಿಜನ್ ರಿಫಿಲ್ಲರ್ಸ್​ನಿಂದ ಪಡೆದ ಆ ಮಾಹಿತಿಯನ್ನು ಪ್ರತಿದಿನ ಬಿಬಿಎಂಪಿ, ಜಿಲ್ಲಾಡಳಿತ ವೆಬ್​ಸೈಟ್, ಮಾಧ್ಯಮಗಳಲ್ಲಿ ಬಿತ್ತರಿಸಬೇಕು.

- ತಹಶೀಲ್ದಾರ್ ಶ್ರೇಣಿಯ ಅಧಿಕಾರಿಯನ್ನು ರಿಫಿಲ್ಲಿಂಗ್ ಸ್ಟೇಷನ್​​ನಲ್ಲಿ ನಿಯೋಜಿಸಬೇಕು. ಅವರು ರಿಫಿಲ್ಲಿಂಗ್ ಸ್ಟೇಷನ್​​ನಲ್ಲಿ ಇದ್ದು, ಆಕ್ಸಿಜನ್ ಉದ್ದೇಶಿತ ಆಸ್ಪತ್ರೆಗಳಿಗೆ ಸುಗಮವಾಗಿ ಪೂರೈಕೆಯಾಗುತ್ತಿದೆಯೇ ಎಂದು ನಿಗಾ ವಹಿಸಬೇಕು.

- ಜಿಲ್ಲಾ ಹೆಚ್ಚುವರಿ ಡಿಸಿಗಳು ಹಾಗೂ ಬಿಬಿಎಂಪಿಯ ವಿಶೇಷ ಆಯುಕ್ತರು ಆಕ್ಸಿಜನ್ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು. ಅವರು ಸರ್ಕಾರದ ಮಾರ್ಗಸೂಚಿಯಂತೆ ಆಕ್ಸಿಜನ್ ಸರಬರಾಜು ಆಗುತ್ತಿದೆಯಾ, ಆದೇಶವನ್ನು ಪಾಲಿಸಲಾಗುತ್ತಿದೆಯಾ ಎಂಬುದನ್ನು ಖಚಿತಪಡಿಸಬೇಕು.

- ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಡಿಸಿಗಳು ಅಗತ್ಯ ಅಧಿಕಾರಿಗಳನ್ನು ಕೂಡಲೇ ನಿಯೋಜಿಸಿ, ಆದೇಶ ಜಾರಿಯಾಗುವುದನ್ನು ಖಚಿತ ಪಡಿಸಿಕೊಳ್ಳಬೇಕು.

- ಈ ನಿಯಮಗಳನ್ನು ಉಲ್ಲಂಘಿಸುವ ರಿಫಿಲ್ಲಿಂಗ್ ಏಜೆನ್ಸಿಗಳ ಮಾಲೀಕರು, ಸಿಇಒಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.

(ಇದನ್ನೂ ಓದಿ: ಚಾಮರಾಜನಗರ ದುರಂತ.. ಮುಸ್ಲಿಂ ಯುವಕರಿಂದ 18 ಮಂದಿ ಸೋಂಕಿತರ ಅಂತ್ಯಕ್ರಿಯೆ..)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.