ETV Bharat / city

ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ30 ರಷ್ಟು ಅರಣ್ಯ ಪ್ರದೇಶ ಹೆಚ್ಚಿಸುವ ಗುರಿ: ಸದ್ಯದ ಸ್ಥಿತಿಗತಿ ಹೇಗಿದೆ ನೋಡಿ? - ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆಗಳು

ವರ್ಷದಿಂದ ವರ್ಷಕ್ಕೆ ಕೆಲ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿದ್ದರೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಇಳಿಕೆ ಕಾಣುತ್ತಿದೆ. ಹೀಗಾಗಿ ಸಚಿವ ಉಮೇಶ್ ಕತ್ತಿ ರಾಜ್ಯದ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ರಾಜ್ಯದಲ್ಲಿ ಎಷ್ಟು ಪ್ರಮಾಣದ ಅರಣ್ಯವಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

forest
ಅರಣ್ಯ
author img

By

Published : Nov 29, 2021, 7:59 AM IST

ಬೆಂಗಳೂರು: ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ 30ರಷ್ಟು ಅರಣ್ಯ ನಿರ್ಮಾಣ ಮಾಡುವಂತೆ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ ಪ್ರತಿವರ್ಷ ರಾಜ್ಯದಲ್ಲಿ ಅರಣ್ಯ ಪ್ರದೇಶ ಕಡಿಮೆಯಾಗುತ್ತಿರುವುದು ಆತಂಕಕಾರಿ ವಿಚಾರ.

ವರ್ಷದಿಂದ ವರ್ಷಕ್ಕೆ ಕೆಲ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿದ್ದರೆ, ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಇಳಿಕೆ ಕಾಣುತ್ತಿದೆ. ಹೀಗಾಗಿ ಸಚಿವ ಉಮೇಶ್ ಕತ್ತಿ ರಾಜ್ಯದ ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಶೇ 30ರಷ್ಟು ಅರಣ್ಯ ಪ್ರದೇಶ ಇರಬೇಕು ಎಂದು ತಾಕೀತು ಮಾಡಿದ್ದಾರೆ.

ಇದನ್ನೂ ಓದಿ: Explaner: ಹೊಸ ಕೋವಿಡ್​ ರೂಪಾಂತರದ ಬಗ್ಗೆ ನಿಮಗೆಷ್ಟು ಗೊತ್ತು.. ಏನಿದು ಒಮಿಕ್ರೋನ್?​

ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಶೇ 70ರಷ್ಟು ಅರಣ್ಯ ಇದ್ದರೆ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶೇ 10 ಕ್ಕಿಂತ ಕಡಿಮೆ ಅರಣ್ಯ ಭೂಮಿ ಇರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಅದಲ್ಲದೇ, 2019-20 ಕ್ಕೆ ಹೋಲಿಸಿದರೆ 2020-21 ಸಾಲಿನಲ್ಲಿ ರಾಜ್ಯದ ಅರಣ್ಯ ಪ್ರದೇಶದಲ್ಲಿ ಕಡಿತವಾಗಿರುವುದು ಆತಂಕಕಾರಿ ವಿಚಾರವಾಗಿದೆ. ಹಲವು ಜಿಲ್ಲೆಗಳಲ್ಲಿ ಗಣನೀಯವಾಗಿ ಅರಣ್ಯ ಪ್ರದೇಶದಲ್ಲಿ ಇಳಿಕೆಯಾಗುತ್ತಿರುವುದು ಆತಂಕ ಮೂಡಿಸಿದೆ. ಹೀಗಾಗಿ, ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ 30ರಷ್ಟು ಅರಣ್ಯ ಪ್ರದೇಶ ಇರುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ.

ಕಡಿಮೆ ಅರಣ್ಯ ಪ್ರದೇಶ ಇರುವ ಜಿಲ್ಲೆಗಳು ಯಾವುವು?:

ರಾಜ್ಯದಲ್ಲಿ ಸದ್ಯ 42,19.63 ಚದರ ಕಿಲೋಮೀಟರ್ ಅರಣ್ಯ ಪ್ರದೇಶ ‌ಇದೆ. ಈ ಪೈಕಿ ಕೆಲ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶದ ಪ್ರಮಾಣ ಶೇ 5ಕ್ಕಿಂತಲೂ ಕಡಿಮೆ‌ ಇದೆ. ವಿಜಯಪುರದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಇದೆ. ಕೇವಲ ಶೇ 0.85ರಷ್ಟು ಮಾತ್ರ ಅರಣ್ಯ ಇದೆ. ರಾಯಚೂರಿನಲ್ಲಿ ಶೇ 4.01, ಬೆಳಗಾವಿ ಶೇ 4.72, ಕಲಬುರ್ಗಿಯಲ್ಲಿ ಶೇ.2.99ರಷ್ಟು ಅರಣ್ಯ ಪ್ರದೇಶ ಇದೆ. ಇನ್ನು ಯಾದಗಿರಿಯಲ್ಲಿ ಶೇ 5.99, ಕೊಪ್ಪಳದಲ್ಲಿಶೇ. 6.93, ಬೀದರ್ ನಲ್ಲಿ ಶೇ. 6.35ರಷ್ಟು ಅರಣ್ಯ ಪ್ರದೇಶ ಇದೆ.

ಇದನ್ನೂ ಓದಿ: ಮಾತು ತಪ್ಪಿದ ಸರ್ಕಾರ.. ಇಂದು ಕರ್ನಾಟಕ ನಿವಾಸಿ ವೈದ್ಯರ ಸಂಘದಿಂದ ಪ್ರತಿಭಟನೆ

ಬೆಂಗಳೂರು ನಗರ ಜಿಲ್ಲೆಯಲ್ಲಿ ಶೇ 8.89ರಷ್ಟು, ಬೆಂಗಳೂರು ಗ್ರಾಮಾಂತರದಲ್ಲಿ ಶೇ 9.08, ದಾವಣಗೆರೆ ಶೇ 10.29, ಕೋಲಾರ ಶೇ 11.23, ಮಂಡ್ಯ ಶೇ 15.4, ಚಿಕ್ಕಬಳ್ಳಾಪುರ ಶೇ 15.30, ಚಿತ್ರದುರ್ಗ ಶೇ 14.63, ರಾಮನಗರ ಶೇ 19.84, ತುಮಕೂರು ಶೇ 11.74, ಹಾಸನ ಶೇ 12.90, ಮೈಸೂರು ಶೇ 8.95, ಧಾರವಾಡ ಶೇ 9.28, ಬಾಗಲಕೋಟೆ 13.14, ಹಾವೇರಿ ಶೇ 11.23, ಗದಗ ಶೇ 8.27, ಬಳ್ಳಾರಿ ಶೇ 8.52 ಅರಣ್ಯ ಇದೆ‌.

ಅರಣ್ಯ ಪ್ರದೇಶ
ಅರಣ್ಯ ಪ್ರದೇಶ

ಶೇ 30 ಅರಣ್ಯವಿರುವ ಜಿಲ್ಲೆಗಳು ಯಾವುವು?:

ಬಹುತೇಕ ಕರವಾಳಿ ಕರ್ನಾಟಕ ಹಾಗೂ ಮಲೆನಾಡು ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅರಣ್ಯ ಪ್ರದೇಶ ಶೇ. 30ಗಿಂತ ಹೆಚ್ಚಿದೆ. ಶಿವಮೊಗ್ಗದಲ್ಲಿ 38.45, ಚಿಕ್ಕಮಗಳೂರು 47.80, ದ‌.ಕನ್ನಡದಲ್ಲಿ ಶೇ. 34.86, ಉಡುಪಿಯಲ್ಲಿ ಶೇ. 55.23, ಕೊಡಗಿನಲ್ಲಿ ಶೇ 62.09, ಚಾಮರಾಜನಗರ ಶೇ. 28.47, ಉತ್ತರ ಕನ್ನಡದಲ್ಲಿ ಶೇ 75.27 ಅರಣ್ಯ ಪ್ರದೇಶ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.