ಬೆಂಗಳೂರು : ರಾಜ್ಯದಲ್ಲಿಂದು 1,65,010 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದ್ದು, ಇದರಲ್ಲಿ 4,272 ಮಂದಿಗೆ ಕೋವಿಡ್ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 28,31,026ಕ್ಕೆ ಏರಿಕೆಯಾಗಿದೆ. ಸದ್ಯ ಪಾಸಿಟಿವಿಟಿ ದರ ಶೇ. 2.58ರಷ್ಟಿದೆ.
6,126 ಸೋಂಕಿತರು ಗುಣಮುಖರಾಗಿದ್ದಾರೆ. ಈತನಕ 26,91,123 ಜನರು ಡಿಸ್ಜಾರ್ಜ್ ಆಗಿದ್ದಾರೆ. 1,05,226 ಕೋವಿಡ್ ಸಕ್ರಿಯ ಪ್ರಕರಣಗಳಿವೆ. ವೈರಸ್ಗೆ 115 ಸೋಂಕಿತರು ಬಲಿಯಾಗಿದ್ದು, ಸಾವಿನ ಸಂಖ್ಯೆ 34,654ಕ್ಕೆ ಏರಿದೆ. ಸಾವಿನ ಶೇಕಡಾವಾರು ಪ್ರಮಾಣ ಮತ್ತೆ 2.69%ರಷ್ಟಿದೆ.
ಇದನ್ನೂ ಓದಿ:ಕೋವಿಡ್ಗಿಂತ ಹೆಚ್ಚು ಅಪಾಯಕಾರಿ ಡೆಲ್ಟಾ ಪ್ಲಸ್.. ಇದ್ರಿಂದ ಬಚಾವ್ ಆಗ್ಬೇಕಿದ್ರೇ ಇಷ್ಟು ಮಾಡಿ ಸಾಕು..
ಯುಕೆಯ ರೂಪಾಂತರಿ ವೈರಸ್ ಆಲ್ಪಾ(Alpha/B.1.1.7) 127 ಜನರಲ್ಲಿ ಕಾಣಿಸಿದ್ದರೆ, ಇತ್ತ ಸೌತ್ ಆಫ್ರಿಕಾದ ಬೇಟಾ ವೈರಸ್ (BETA/B.1.351) 6 ಜನರಲ್ಲಿ ಪತ್ತೆಯಾಗಿದೆ. ಹಾಗೇ ಭಾರತದ ರೂಪಾಂತರಿ ( Delta/B.617.2) ಡೆಲ್ಟಾ 318 ಜನರಿಗೆ, ಕಪ್ಪಾ (Kappa/B.1.617) 112 ಸೋಂಕು ಕಾಣಿಸಿದೆ. ಇದೀಗ ಡೆಲ್ಟಾ ಪ್ಲಸ್( Delta plus/ B.1.617.2.1(AY.1) ಇಬ್ಬರಲ್ಲಿ ಕಾಣಿಸಿದ್ದು, ಎಚ್ಚರಿಕೆ ವಹಿಸುವ ಅಗತ್ಯವಿದೆ.