ಬೆಂಗಳೂರು: ಕೊರೊನಾ ನಿರ್ಬಂಧಗಳಿಗೆ ಪರ- ವಿರೋಧದ ಮಧ್ಯೆಯೇ ರಾಜ್ಯದಲ್ಲಿ ಇಂದು 5031 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ 4324 ಕೇಸ್ಗಳು ರಾಜಧಾನಿ ಬೆಂಗಳೂರಿನಲ್ಲೇ ದಾಖಲಾಗಿವೆ. ಈ ಮೂಲಕ ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ 7.5 ರಷ್ಟು ಹೆಚ್ಚಿದೆ.
ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇರುವ ಕೊರೊನಾ ಪ್ರಕರಣಗಳು ನಿನ್ನೆ 4 ಸಾವಿರದಷ್ಟಿದ್ದರೆ ಇಂದು ಏಕಾಏಕಿ 5 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಒಟ್ಟಾರೆ ಪಾಸಿಟಿವಿಟಿ ದರ 3.5 ರಷ್ಟಿದೆ. ವಿಶ್ವಾದ್ಯಂತ ಭೀತಿ ಹುಟ್ಟಿಸಿರುವ ಹೊಸ ರೂಪಾಂತರಿ ಒಮಿಕ್ರಾನ್ ಕೇಸ್ ಇಂದು ದಾಖಲಾಗಿಲ್ಲ.
ಇದಲ್ಲದೇ ಬೆಂಗಳೂರಿನಲ್ಲಿ ಕೊರೊನಾಗೆ ಒಬ್ಬರು ಬಲಿಯಾಗಿದ್ದಾರೆ. ಇಂದು 1,27,194 ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ.
ಇದನ್ನೂ ಓದಿ: ದೇಶಾದ್ಯಂತ ಸಾವಿರಕ್ಕೂ ಹೆಚ್ಚು ವೈದ್ಯರಿಗೆ ಕೋವಿಡ್ ಸೋಂಕು