ಬೆಂಗಳೂರು: ರಾಜ್ಯದಲ್ಲಿಂದು 96,838 ಮಂದಿಗೆ ಕೋವಿಡ್ (Karnataka Covid) ಪರೀಕ್ಷೆ ನಡೆಸಲಾಗಿದೆ. ಇದರಲ್ಲಿ 236 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,91,850ಕ್ಕೆ ಏರಿದೆ. 264 ಮಂದಿ ಡಿಸ್ಚಾರ್ಜ್ ಆಗಿದ್ದು, ಒಟ್ಟು 29,45,679 ಮಂದಿ ಗುಣಮುಖರಾಗಿದ್ದಾರೆ.
ಇಬ್ಬರು ಸೋಂಕಿತರು ಇಂದು ಮೃತರಾಗಿದ್ದು (Covid death), ಸಾವಿನ ಸಂಖ್ಯೆ 38,145 ಕ್ಕೆ ಏರಿಕೆ ಆಗಿದೆ. ಸದ್ಯ ಸಕ್ರಿಯ ಪ್ರಕರಣಗಳು 7,997 ರಷ್ಟಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.24 ರಷ್ಟಿದ್ದರೆ ಸಾವಿನ ಪ್ರಮಾಣ ಶೇ.0.84 ರಷ್ಟಿದೆ.
ರಾಜಧಾನಿ ಬೆಂಗಳೂರಲ್ಲಿ 152 ಮಂದಿಗೆ ಸೋಂಕು (Bengaluru Corona) ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 12,53,975ಕ್ಕೆ ಏರಿದೆ. 187 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 12,31,062 ಜನ ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 16,312ಕ್ಕೆ ಹೆಚ್ಚಿದೆ. ಸದ್ಯ 6600 ಸಕ್ರಿಯ ಪ್ರಕರಣಗಳು ಇವೆ.
ರೂಪಾಂತರಿ ಅಪಡೇಟ್:
ಅಲ್ಫಾ - 155
ಬೇಟಾ - 08
ಡೆಲ್ಟಾ - 1698
ಡೆಲ್ಟಾ ಸಬ್ ಲೈನ್ಏಜ್ - 300
ಕಪ್ಪಾ - 160
ಈಟಾ - 01
ಇಳಿಕೆಯತ್ತ ಸಾವಿನ ಸಂಖ್ಯೆ- ಬೆಂಗಳೂರು ಬಿಟ್ಟು ಇಂದು ಎಲ್ಲ ಜಿಲ್ಲೆಗಳಲ್ಲೂ ಶೂನ್ಯ ಸಾವು :
ಕಳೆದೊಂದು ವಾರದಿಂದ ಕೋವಿಡ್ನಿಂದಾಗಿ ಮೃತಪಡುವವರ ಸಂಖ್ಯೆ ಇಳಿಕೆಯಾಗಿದ್ದು, ಶೇಕಡವಾರು ಪ್ರಮಾಣವೂ ತಗ್ಗಿದೆ. ಬೆರಳೆಣಿಕೆಯಷ್ಟು ಮಾತ್ರ ಸಾವಿನ ವರದಿಯಾಗಿದ್ದು, ಇಂದು ಬೆಂಗಳೂರು ಬಿಟ್ಟು ಉಳಿದ ಎಲ್ಲ ಜಿಲ್ಲೆಗಳಲ್ಲೂ ಶೂನ್ಯ ಸಾವು ಪ್ರಕರಣ ವರದಿಯಾಗಿದೆ.
ದಿನಾಂಕ - ಸಾವಿನ ಪ್ರಮಾಣ
ಡಿ.7 - 5 ಸೋಂಕಿತರು (2.09)
ಡಿ.8 - 6 ಸೋಂಕಿತರು(1.12%)
ಡಿ.9 - 4 ಸೋಂಕಿತರು(1.36%)
ಡಿ.10 - 9 ಸೋಂಕಿತರು(2.74%)
ಡಿ.11 - 7 ಸೋಂಕಿತರು (2.44%)
ಡಿ.12 - 2 ಸೋಂಕಿತರು (0.88%)
ಡಿ.13 - 3 ಸೋಂಕಿತರು (1.22%)
ಡಿ.14 - 2 ಸೋಂಕಿತರು (0.84%)