ಬೆಂಗಳೂರು : ರಾಜ್ಯದಲ್ಲಿಂದು 16,068 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 26,69,514ಕ್ಕೆ ಏರಿಕೆ ಆಗಿದೆ.
ಇಂದು 22,316 ಮಂದಿ ಡಿಸ್ಚಾರ್ಜ್ ಆಗಿದ್ದು, 23,58,412 ಜನರು ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 2,80,186 ರಷ್ಟಿವೆ. ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 10.66ರಷ್ಟಿದೆ. ಸಾವಿನ ಶೇಕಡವಾರು ಪ್ರಮಾಣ 2.26ರಷ್ಟು ಇದೆ.
ಕೋವಿಡ್ಗೆ 364 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 30,895ಕ್ಕೆ ಏರಿದೆ. ಇನ್ನು, ವಿಮಾನ ನಿಲ್ದಾಣದಿಂದ 100 ಮಂದಿ ಆಗಮಿಸಿದ್ದು, ಕೋವಿಡ್ ತಪಾಸಣೆ ಮಾಡಲಾಗಿದೆ.