ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ರೂಪಾಂತರಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಏರಿಕೆ ಆಗಿದೆ. ಇನ್ನು 299 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂದು ಇಬ್ಬರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದು, 318 ಮಂದಿ ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7,117 ಇದೆ. ಈವರೆಗೆ ಒಟ್ಟು 29,58,117 ಮಂದಿ ಬಿಡುಗಡೆಯಾಗಿದ್ದಾರೆ. ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 30,03,564 ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 38,301 ಕ್ಕೆ ಏರಿಕೆಯಾಗಿದೆ.
(ಇದನ್ನೂ ಓದಿ: ಯಲ್ಲಾಪುರದ ಮರ ಕೆತ್ತನೆ ದೇಶ, ವಿದೇಶಗಳಲ್ಲೂ ಪ್ರಖ್ಯಾತಿ.. ಅಮೆರಿಕದ ದೇವಾಲಯಕ್ಕೆ ಬಾಗಿಲು ಮಾಡಿಕೊಟ್ಟ ಹೆಗ್ಗಳಿಕೆ)
ಬೆಂಗಳೂರು ವರದಿ:
ಬೆಂಗಳೂರಲ್ಲಿ 210 ಮಂದಿಯಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ, ಒಬ್ಬರು ಮೃತಪಟ್ಟಿದ್ದಾರೆ. 5,742 ಸಕ್ರಿಯ ಪ್ರಕರಣಗಳಿವೆ.
(ಇದನ್ನೂ ಓದಿ: ರಾಜ್ಯದಲ್ಲಿ 12 ಹೊಸ ಒಮಿಕ್ರಾನ್ ಪ್ರಕರಣ ದೃಢ,ಹೊಸ ತಳಿ ಸೋಂಕಿತರ ಸಂಖ್ಯೆ 31 ಕ್ಕೇರಿಕೆ)