ETV Bharat / city

ರಾಜ್ಯದಲ್ಲಿಂದು ಕೊರೊನಾಗೆ 110 ಬಲಿ, 5,007 ಜನರಿಗೆ ಪಾಸಿಟಿವ್​: ಜಿಲ್ಲಾವಾರು ವರದಿ - ಕರ್ನಾಟಕ ಕೊರೊನಾ ವರದಿ

ಬಲಿ ಪಡೆಯಲೆಂದೇ ಸಿದ್ಧವಾದಂತಿರುವ ಕೋವಿಡ್​​ಗೆ ಇಂದು ಕೂಡಾ ರಾಜ್ಯದಲ್ಲಿ 110 ಜನರು ಮೃತಪಟ್ಟಿದ್ದಾರೆ. ಅಲ್ಲದೆ ಕಳೆದ 24 ಗಂಟೆಗಳಲ್ಲಿ 5007 ಸೋಂಕಿತರು ಪತ್ತೆಯಾಗಿದ್ದು, ಕೊರೊನಾ ಕಾಡಾಟ ಅಷ್ಟು ಬೇಗನೆ ನಿವಾರಣೆಯಾಗುವುದಿಲ್ಲ ಎಂಬ ಸತ್ಯಾಂಶವನ್ನು ಬಯಲಿಗೆ ಎಳೆದಂತಿದೆ..

karnataka-corona-updates
ರಾಜ್ಯದ ಕೋವಿಡ್​ ವರದಿ
author img

By

Published : Jul 24, 2020, 7:50 PM IST

Updated : Jul 24, 2020, 10:03 PM IST

ಬೆಂಗಳೂರು : ರಾಜ್ಯದಲ್ಲಿಂದು ಒಂದೇ ದಿನ 110 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಮೃತ ಸಂಖ್ಯೆ 1724ಕ್ಕೆ ಏರಿಕೆಯಾಗಿದೆ. 8 ಮಂದಿ ಇತಕಾರಣಗಳಿಂದ ಮೃತರಾಗಿದ್ದಾರೆ. ಇನ್ನು 24 ಗಂಟೆಯಲ್ಲಿ 5007 ಹೊಸ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 85,870 ಖಚಿತ ಪ್ರಕರಣ ವರದಿಯಾಗಿವೆ.

ಈವರೆಗೆ 31,347 ಜನ ಗುಣಮುಖರಾಗಿದ್ರೆ, 52,791 ಸಕ್ರಿಯ ಪ್ರಕರಣ ಬಾಕಿ ಇವೆ. 612 ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ಸಂಪರ್ಕದಲ್ಲಿನ 70,440, ದ್ವಿತೀಯ ಸಂಪರ್ಕದಲ್ಲಿದ್ದ 60,541 ಮಂದಿ ಒಟ್ಟಾರೆ 1,30,981 ನಿಗಾದಲ್ಲಿದ್ದಾರೆ.

ಬಳ್ಳಾರಿ : ಜಿಲ್ಲೆಯಲ್ಲಿಂದು ಹೊಸದಾಗಿ 136 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 3,245ಕ್ಕೇರಿದೆ. ಈವರೆಗೆ 1525 ಮಂದಿ ಗುಣಮುಖರಾಗಿದ್ದು, ಇಂದು ಇಬ್ಬರು ಸೇರಿ 69 ಮಂದಿ ಸಾವನ್ನಪ್ಪಿದ್ದಾರೆ. 1,651 ಸಕ್ರಿಯ ಪ್ರಕರಣಗಳಿವೆ, ಇಂದು 53 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಚಿಕ್ಕಮಗಳೂರು : ಜಿಲ್ಲೆಯಲ್ಲಿ 28 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 574ಕ್ಕೆ ಏರಿಕೆಯಾಗಿದೆ. ಆಸ್ಪತ್ರೆಯಿಂದ ಇಂದು 43 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೂ ಜಿಲ್ಲೆಯಲ್ಲಿ ಒಟ್ಟು 314 ಜನ ಸೋಂಕಿತರು ಗುಣಮುಖರಾಗಿದ್ದಾರೆ. ಚಿಕ್ಕಮಗಳೂರು 18, ಕಡೂರು 8, ಮೂಡಿಗೆರೆ ತಾಲೂಕಿನ ಇಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ ಮೂವರು ಸೋಂಕಿನಿಂದ ಸಾವನಪ್ಪಿದ್ದು, ಸಾವಿನ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 243 ಸಕ್ರಿಯ ಪ್ರಕರಣಗಳಿವೆ.

ರಾಯಚೂರು: ಜಿಲ್ಲೆಯಲ್ಲಿ 107 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ 1,502ಕ್ಕೆ ತಲುಪಿದೆ. ರಾಯಚೂರು ತಾಲೂಕಿನ 74, ಸಿಂಧನೂರು 4, ಮಾನವಿ 6, ದೇವದುರ್ಗ 10, ಲಿಂಗಸೂಗೂರು ತಾಲೂಕಿನಲ್ಲಿ 13 ಪ್ರಕರಣ ಪತ್ತೆಯಾಗಿವೆ. ಈವರೆಗೆ 798 ಜನ ಸೋಂಕಿನಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 686 ಪ್ರಕರಣ ಸಕ್ರಿಯವಾಗಿವೆ. ಸೋಂಕಿನಿಂದ ಈವರೆಗೆ 18 ಜನ ಮೃತಪಟ್ಟಿದ್ದಾರೆ.

ಧಾರವಾಡ: ಜಿಲ್ಲೆಯಲ್ಲಿ ಇಂದು 174 ಜನರಿಗೆ ಕೊರೊನಾ ಸೋಂಕು ಕಾಣಿಸಿದೆ. ಸೋಂಕಿತರ ಸಂಖ್ಯೆ 2,842ಕ್ಕೇರಿದೆ. ಕೊರೊನಾಗೆ ಐವರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಮೃತರ ಸಂಖ್ಯೆ 85ಕ್ಕೇರಿದೆ. ಇಂದು ಕೂಡ 52 ಜನ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೂ 973 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1784 ಸಕ್ರಿಯ ಪ್ರಕರಣಗಳಿವೆ.

ಬೆಳಗಾವಿ: ಇಂದು ಮತ್ತೊಂದು ಬಲಿಯಾಗಿದ್ದು, ಮೃತರ ಸಂಖ್ಯೆ 35ಕ್ಕೆ ಏರಿದೆ. 116 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 1645ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 426 ಜನ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, 1,184 ಸಕ್ರಿಯ ಪ್ರಕರಣಗಳಿವೆ.

ಮೈಸೂರು : ಜಿಲ್ಲೆಯಲ್ಲಿ ಇಂದು 281 ಮಂದಿಗೆ ಸೋಂಕು ಧೃಡಪಟ್ಟಿವೆ. ಅಲ್ಲದೆ 6 ಮಂದಿ ಬಲಿಯಾಗಿದ್ದಾರೆ. ಆಸ್ಪತ್ರೆಯಿಂದ 18 ಜನ ಡಿಸ್ಚಾರ್ಜ್ ಆಗಿದ್ದು , 6 ಮಂದಿ ಸಾವನ್ನಪ್ಪಿದ್ದಾರೆ. ಈವರೆಗೆ ಒಟ್ಟು 2450 ಜನರಿಗೆ ಸೋಂಕು ತಗುಲಿದ್ದು, ಇಂದು 18 ಮಂದಿ ಸೇರಿ ಒಟ್ಟು 749 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 1,602 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಒಟ್ಟು 99 ಮಂದಿ ಸಾವನ್ನಪ್ಪಿದ್ದಾರೆ.

ಹಾಸನ: ಇಂದು 117 ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಒಟ್ಟು 39 ಜನರು ಇಲ್ಲಿವರೆಗೂ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ. ಇದುವರೆಗೆ 711 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 606 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 39 ಮಂದಿ ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದರು. ಇಂದು ಹಾಸನ 38, ಅರಸೀಕೆರೆ 27, ಬೇಲೂರು 17, ಹೊಳೆನರಸೀಪುರ 12, ಆಲೂರು 9, ಚನ್ನರಾಯಪಟ್ಟಣ 8, ಸಕಲೇಶಪುರ 4, ಅರಕಲಗೂಡು ತಾಲೂಕಿನಲ್ಲಿ 2 ಪಾಸಿಟಿವ್ ಪ್ರಕರಣ ಕಂಡುಬಂದಿವೆ

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಮತ್ತೆ 33 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 672ಕ್ಕೆ ಏರಿಕೆಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು, ಗಂಗಾವತಿ 18, ಕೊಪ್ಪಳ 14 ಹಾಗೂ ಯಲಬುರ್ಗಾ ತಾಲೂಕಿನ ಒಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಐವರು ಸೋಂಕಿನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಈವರೆಗೆ ಒಟ್ಟು 18 ಜನರು ಸಾವನ್ನಪ್ಪಿದ್ದಾರೆ. ಇಂದು 34 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು 429 ಜನರು ಗುಣಮುಖರಾದಂತಾಗಿದೆ. 201 ಸಕ್ರೀಯ ಪ್ರಕರಣಗಳಿಗೆ ನಿಗದಿತ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಗದಗ: ಜಿಲ್ಲೆಯಲ್ಲಿ ಇಂದು 108 ಕೊರೊನಾ ಕೇಸ್ ಪತ್ತೆಯಾಗಿದೆ. ಈ ಮೂಲಕ ಕೊರೊನಾ ಸೋಂಕಿತರ ಸಂಖ್ಯೆ 882ಕ್ಕೆ ಏರಿಕೆಯಾಗಿದೆ. ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ19ಕ್ಕೆ ಏರಿಕೆಯಾಗಿದೆ. 11 ಜನ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜೊತೆಗೆ ಈವರೆಗೆ 300 ಜನ ಕೊರೊನಾದಿಂದ ಗುಣಮುಖರಾಗಿದ್ದಾರೆ. 563ಕ್ಕೆ ಸಕ್ರಿಯ ಪ್ರಕರಣಗಳಿದ್ದು, ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ದಾವಣಗೆರೆ: ಕೊರೊನಾಕ್ಕೆ ಜಿಲ್ಲೆಯಲ್ಲಿ ಮತ್ತಿಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 34ಕ್ಕೇರಿದೆ. 77 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ 1,255 ಸೋಂಕಿತರಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ 21 ವರ್ಷದ ಯುವಕ ಹಾಗೂ ಅಧಿಕ ರಕ್ತದೊತ್ತಡ, ಇತರೆ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹರಿಹರ ತಾಲೂಕಿನ ಮಲೆಬೆನ್ನೂರಿನ 55 ವರ್ಷದ ಪುರುಷ ಜುಲೈ 22ರಂದು ಕೊರೊನಾಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ದಾವಣಗೆರೆಯಲ್ಲಿ 47, ಹರಿಹರ 16, ಜಗಳೂರು 6, ಚನ್ನಗಿರಿ 5 ಹಾಗೂ ಹೊರ ಜಿಲ್ಲೆಗಳಿಂದ ಬಂದಿದ್ದ ಮೂವರಲ್ಲಿ ಸೋಂಕು ಇರುವುದು ಖಚಿತವಾಗಿದೆ. ಜಿಲ್ಲೆಯಲ್ಲಿ ಒಟ್ಟು 84 ಮಂದಿ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದುವರೆಗೆ 751 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 470 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

ಹಾವೇರಿ: ಜಿಲ್ಲೆಯಲ್ಲಿ ಶುಕ್ರವಾರ 58 ಜನರಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 660 ಕ್ಕೇರಿದೆ. ರಾಣೆಬೆನ್ನೂರು 17,ಹಾನಗಲ್ 12,ಹಾವೇರಿ 10 ಸವಣೂರು ಮತ್ತು ಬ್ಯಾಡಗಿ ತಾಲೂಕುಗಳಲ್ಲಿ ತಲಾ 7 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಶಿಗ್ಗಾವಿ ನಾಲ್ಕು ಮತ್ತು ಹಿರೇಕೆರೂರು ತಾಲೂಕಿನಲ್ಲಿ 1 ಪ್ರಕರಣ ದೃಢಪಟ್ಟಿದೆ. ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಿಂದ ಶುಕ್ರವಾರ 26 ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಶುಕ್ರವಾರ 65 ವರ್ಷದ ವ್ಯಕ್ತಿ ಮೃತಪಟ್ಟಿದ್ದು ಅವರಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. 388 ಸೋಂಕಿತರು ಗುಣಮುಖರಾಗಿ ಮನೆ ಸೇರಿದ್ದಾರೆ. 251 ಜನರಲ್ಲಿ ಸೋಂಕು ಸಕ್ರಿಯವಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಅದರಲ್ಲಿ ನಾಲ್ಕು ಜನರನ್ನ ತೀವ್ರ ನಿಗಾ ಘಟಕಲ್ಲಿರಿಸಲಾಗಿದೆ . ಜಿಲ್ಲೆಯಲ್ಲಿ ಇದುವರೆಗೆ ಕೊರೊನಾದಿಂದ 21 ಸೋಂಕಿತರು ಮೃತಪಟ್ಟಿದ್ದಾರೆ.

ಶಿವಮೊಗ್ಗ: ಜಿಲ್ಲೆಯಲ್ಲಿಂದು 61 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಇದರಿಂದ ಸೊಂಕಿತರ ಸಂಖ್ಯೆ‌1,206ಕ್ಕೆ ಏರಿಕೆಯಾಗಿದೆ. ಇಂದು ಆಸ್ಪತ್ರೆಯಿಂದ 19 ಜನ ಬಿಡುಗಡೆಯಾಗಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 608 ಜನ ಸೊಂಕಿನಿಂದ ಗುಣಮುಖರಾಗಿದ್ದಾರೆ. ಇಂದು ಜಿಲ್ಲೆಯಲ್ಲಿ 65 ವರ್ಷದ ವೃದ್ದರೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಸೊಂಕಿನಿಂದ 21 ಜನ ಸಾವನ್ನಪ್ಪಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ 575 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ 307 ಕಂಟೈನ್ಮೆಂಟ್ ಜೋನ್ ನಿರ್ಮಾಣ ಮಾಡಲಾಗಿದೆ. ಇದರಲ್ಲಿ 58 ಜೋನ್ ಅನ್ನು ಮರು ನೋಟಿಫೈ ಮಾಡಲಾಗಿದೆ.

ತುಮಕೂರು: ಜಿಲ್ಲೆಯಲ್ಲಿ ಇಂದು 35 ಮಂದಿ ಸೋಂಕಿತರು ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರಲ್ಲಿ ಕುಣಿಗಲ್ ಮತ್ತು ತಿಪಟೂರು ತಾಲೂಕಿನ ತಲಾ 11 ಮಂದಿ, ತುರುವೇಕೆರೆ ತಾಲೂಕಿನ 7 , ಕೊರಟಗೆರೆ ತಾಲೂಕಿನ ಇಬ್ಬರು ಗುಣಮುಖರಾದವರಲ್ಲಿ ಸೇರಿದ್ದಾರೆ. ಇದುವರೆಗೂ ತುಮಕೂರು ಜಿಲ್ಲೆಯಲ್ಲಿ 523 ಮಂದಿ ಸೋಂಕಿನಿಂದ ಪಾರಾಗಿದ್ದಾರೆ. ಇಂದು 59 ಮಂದಿಯಲ್ಲಿ ಸೋಂಕು ಕಂಡು ಬಂದಿದ್ದು, ಸೋಂಕಿತರ ಸಂಖ್ಯೆ 991ಕ್ಕೆ ಏರಿಕೆಯಾಗಿದೆ. ಇನ್ನು 430 ಮಂದಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿನಿಂದ ಇಂದು ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 38ಕ್ಕೆ ಏರಿಕೆ ಆದಂತಾಗಿದೆ.

ಬಾಗಲಕೋಟೆ: ಜಿಲ್ಲೆಯಲ್ಲಿ 184 ಕೋವಿಡ್ ಪ್ರಕರಣಗಳು ದೃಡ ಪತ್ತೆಯಾಗಿದೆ.ಇದರಿಂದ ಸೋಂಕಿತರ ಸಂಖ್ಯೆ 1168 ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ ಗುಣಮುಖರಾದವರ ಒಟ್ಟು ಸಂಖ್ಯೆ 507 ಇದ್ದು, 625 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಬಾಗಲಕೋಟೆ ತಾಲೂಕಿನಲ್ಲಿ 25, ಬಾದಾಮಿ 32, ಬೀಳಗಿ 4, ಜಮಖಂಡಿ 50, ಹುನಗುಂದ 30, ಮುಧೋಳ 42, ಬೇರೆ ಜಿಲ್ಲೆಯ ಒಂದು ಪ್ರಕರಣಗಳು ಪತ್ತೆಯಾಗಿದೆ. ಬಾಗಲಕೋಟೆ ನಗರದ 73 ವರ್ಷದ ಓರ್ವ ವೃದ್ದೆ ಮೃತಪಟ್ಟಿದ್ದು, ಕೋವಿಡ್ ಮಾರ್ಗಸೂಚಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಕೊರೊನಾದಿಂದ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಎಂಟು ಮಂದಿಯಲ್ಲಿ ಇಬ್ಬರು ಶಿವಮೊಗ್ಗದ ಭದ್ರಾವತಿಯವರಾಗಿದ್ದು, ಆರು ಮಂದಿ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದರ ಸಂಖ್ಯೆ 107ಕ್ಕೆ ಏರಿಕೆಯಾಗಿದೆ. ಇಂದು 180 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ ಪ್ರಾಥಮಿಕ ಸಂಪರ್ಕದಿಂದ 56, ಐಎಲ್ಐನಿಂದ 68, ಸಾರಿ ಪ್ರಕರಣದಿಂದ 10, ವಿದೇಶದಿಂದ ಬಂದ ಒಬ್ಬರಿಗೆ ಕೊರೊನಾ ದೃಢಪಟ್ಟಿದೆ. 45 ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ 4,394 ಮಂದಿಗೆ ಕೊರೊನಾ ದೃಢಪಟ್ಟಿದೆ. ಇಂದು 125 ಮಂದಿ ಗುಣಮುಖರಾಗಿದ್ದು, ಈವರೆಗೆ ಗುಣಮುಖರಾದವರ ಸಂಖ್ಯೆ 1,987ಕ್ಕೆ ಏರಿಕೆಯಾಗಿದೆ. 2,300 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಮರಾಜನಗರ: ಇಂದು 21 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 455ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 197 ಇದ್ದು ಗುಣಮುಖರಾಗಿ ಇಂದು 20 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಪತ್ತೆಯಾದ 21 ಮಂದಿಯಲ್ಲಿ ಬರೋಬ್ಬರಿ 11 ಮಂದಿ ಐಎಲ್ಐನವರಾಗಿದ್ದಾರೆ‌‌. ಚಾಮರಾಜನಗರ ತಾಲೂಕಿನ ಕಾಳನಹುಂಡಿ ಗ್ರಾಮದ ಇಬ್ಬರಿಗೆ ಇಂದು ಸೋಂಕು ತಗುಲಿದ್ದು, ಇವರಲ್ಲಿ 2 ವರ್ಷದ ಮಗುವಿರುವುದು ಕಳವಳಕಾರಿಯಾಗಿದೆ. ಚಾಮರಾಜನಗರದ ಒಂದೇ ಕುಟುಂಬದ ಮೂವರು ಇಂದು ವೈರಸ್ ತಗುಲಿಸಿಕೊಂಡಿದ್ದಾರೆ. ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 5 ರಿಂದ ಸೆಪ್ಟೆಂಬರ್ 2ವರೆಗಿನ ನಾಲ್ಕು ಭಾನುವಾರಗಳಂದು ಜಿಲ್ಲಾದ್ಯಂತ ದಿನಪೂರ್ತಿ ನಿಷೇಧಾಜ್ಞೆ ಹೊರಡಿಸಿ ಡಿಸಿ ಡಾ.ಎಂ.ಆರ್.ರವಿ ಆದೇಶಿಸಿದ್ದಾರೆ.‌

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ‌ ಕೊರೊನಾ ಸೊಂಕಿತರ ಸಂಖ್ಯೆ 1,248ಕ್ಕೆ ಏರಿಕೆಯಾಗಿದ್ದು, ಇಂದು 64 ಸೊಂಕಿತರು ಪತ್ತೆಯಾಗಿದ್ದಾರೆ. ಚಿಕ್ಕಬಳ್ಳಾಪುರ 30, ಬಾಗೇಪಲ್ಲಿ 10, ಚಿಂತಾಮಣಿ 8 ,ಗೌರಿಬಿದನೂರು 8, ಶಿಡ್ಲಘಟ್ಟ ತಾಲೂಕಿನಲ್ಲಿ 8 ಪ್ರಕರಣಗಳು ಧೃಡಪಟ್ಟಿವೆ. 16 ಸೊಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 1,258ಕ್ಕೆ ಏರಿಕೆಯಾಗಿದ್ದು, ಇದುವರೆಗೂ 589 ಸೊಂಕಿತರು ಸಂಪೂರ್ಣ ಗುಣಮುಖರಾಗಿದ್ದಾರೆ. 642 ಸಕ್ರಿಯ ಪ್ರಕರಣಗಳಿಗೆ ನೀಡಲಾಗುತ್ತಿದೆ. ಇಂದು ಓರ್ವ ಚಿಕಿತ್ಸೆ ಫಲಕಾರಿಯಾದ ಮೃತಪಟ್ಟಿದ್ದು, ಮೃತರ ಸಂಖ್ಯೆ 26ಕ್ಕೆ ಏರಿದೆ.

ಚಿತ್ರದುರ್ಗ: ಜಿಲ್ಲೆಯಲ್ಲಿಂದು 14 ಜನರಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ 11, ಚಳ್ಳಕೆರೆ 02, ಮೊಳಕಾಲ್ಮೂರು ತಾಲೂಕಿನಲ್ಲಿ 01 ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 334 ಕ್ಕೆ ಏರಿಕೆಯಾಗಿದ್ದು, ಇದುವರೆಗೆ 09 ಜನ ಮೃತಪಟ್ಟಿದ್ದಾರೆ. ಸೋಂಕಿತರ ಪೈಕಿ ಈಗಾಗಲೆ 137 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಸದ್ಯ 190 ಸಕ್ರಿಯ ಪ್ರಕರಣಗಳಿವೆ.

ವಿಜಯಪುರ: ಜಿಲ್ಲೆಯಲ್ಲಿ ಮತ್ತೆ ಕೊರೊನಾ ಮಹಾಸ್ಪೋಟ ಸಂಭವಿಸಿದೆ. 158 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ1,988ಕ್ಕೆ ಏರಿದೆ. ಕೊರೊನಾದಿಂದ ಗುಣಮುಖರಾಗಿ ಇಂದು 85 ಜನ ಸೇರಿ ಒಟ್ಟು ಇಲ್ಲಿಯವರೆಗೆ 1387 ಜನ ಡಿಚ್ಚಾರ್ಜ್​ ಆಗಿದ್ದಾರೆ. ಸೊಂಕಿತ 577 ಜನರಿಗೆ ವಿಜಯಪುರ ಜಿಲ್ಲಾಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರೆದಿದೆ. ಇಲ್ಲಿಯವರೆಗೆ 24 ಜನ ಸಾವನ್ನಪ್ಪಿದ್ದಾರೆ. ಓರ್ವ ರೋಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಬುರಗಿ: ಇಂದು ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿ ಜಿಲ್ಲೆಯಲ್ಲಿ ಐವರು ಸಾವನ್ನಪ್ಪಿದ್ದಾರೆ. ಅಲ್ಲದೆ 159 ಜನರಿಗೆ ಸೋಂಕು ದೃಢಪಟ್ಚಿದ್ದು, ಸೋಂಕಿತರ ಸಂಖ್ಯೆ 3,529ಕ್ಕೆ ಏರಿಕೆಯಾಗಿದೆ. ಇಂದು 26 ಜನ ಡಿಸ್ಚಾರ್ಜ್ ಆಗಿದ್ದು, ಈವರೆಗೆ 1921 ಜನರು ಗುಣಮುಖರಾದಂತಾಗಿದೆ. ಜಿಲ್ಲೆಯಲ್ಲಿ 1554 ಸಕ್ರಿಯ ಪ್ರಕರಣಗಳಿವೆ.

ಉತ್ತರಕನ್ನಡ: ಜಿಲ್ಲೆಯಲ್ಲಿ ಇಂದು 88 ಮಂದಿಗೆ ಕೋವಿಡ್ 19 ಸೋಂಕು ತಗುಲಿರುವುದು ಪತ್ತೆಯಾಗಿದ್ದು, 53 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಸೋಂಕು ಪತ್ತೆಯಾದ ಪೈಕಿ ಭಟ್ಕಳದಲ್ಲಿ 3, ಜೊಯಿಡಾ 2, ಹಳಿಯಾಳ 14, ಕುಮಟಾ 30, ಹೊನ್ನಾವರ 4, ಮುಂಡಗೋಡ 7, ಅಂಕೋಲಾ 1, ಸಿದ್ದಾಪುರ 4 ಹಾಗೂ ಶಿರಸಿ ತಾಲೂಕಿನಲ್ಲಿ 23 ಪ್ರಕರಣಗಳು ದೃಢಪಟ್ಟಿವೆ. ಇನ್ನು ಸೋಂಕಿನಿಂದ ಜಿಲ್ಲೆಯ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿದ್ದ ಪೈಕಿ ಹಳಿಯಾಳ 15, ಹೊನ್ನಾವರದಲ್ಲಿ 5, ಕಾರವಾರ 4, ಅಂಕೋಲಾದಲ್ಲಿ 15, ಕುಮಟಾದಲ್ಲಿ 12, ಶಿರಸಿ, ಸಿದ್ದಾಪುರದಲ್ಲಿ ತಲಾ ಓರ್ವ, ಒಟ್ಟು 53 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ ಜಿಲ್ಲೆಯ 1,506 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 758 ಮಂದಿ ಗುಣಮುಖರಾಗಿದ್ದಾರೆ.‌ 14 ಮಂದಿ ಸಾವನ್ನಪ್ಪಿದ್ದು, 734 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರೆದಿದೆ.

ಬೀದರ್: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 78 ಜನರಲ್ಲಿ ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 1,715 ಕ್ಕೆ ಏರಿಕೆಯಾಗಿದೆ. ಜಿಲ್ಲೆಯ ಔರಾದ್ 14, ಬಸವಕಲ್ಯಾಣ 12, ಭಾಲ್ಕಿ 08, ಬೀದರ್ 37, ಹುಮನಾಬಾದ್ 06 ಹಾಗೂ ಅನ್ಯರಾಜ್ಯಗಳ 01 ಜನರಲ್ಲಿ ಕೊವಿಡ್-19 ವೈರಾಣು ಸೋಂಕು ಪತ್ತೆಯಾಗಿದೆ. ಇಂದು 150 ಜನರು ಗುಣಮುಖರಾಗಿ ಮನೆಗೆ ವಾಪಸ್ಸಾದ್ರೆ, ಇಲ್ಲಿಯವರೆಗೆ ಸೊಂಕಿಗೆ 69 ಜನರು ಬಲಿಯಾಗಿದ್ದಾರೆ.

ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 14 ವರ್ಷದ ಬಾಲಕ ಸೇರಿದಂತೆ ಒಟ್ಟು 53 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 1,864 ಪ್ರಕರಣಗಳ ಪೈಕಿ 1,512 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿದ್ದಾರೆ.

Last Updated : Jul 24, 2020, 10:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.