ETV Bharat / city

ರಾಜ್ಯದಲ್ಲಿಂದು 445 ಹೊಸ ಕೋವಿಡ್​ ಕೇಸ್​, 10 ಮಂದಿ ಸೋಂಕಿಗೆ ಬಲಿ!

ರಾಜ್ಯದಲ್ಲಿ ಇಂದು ಹೊಸತಾಗಿ 445 ಕೋವಿಡ್​ ಕೇಸ್​ ವರದಿಯಾಗಿದ್ದು, ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 11,005ಕ್ಕೇರಿಕೆಯಾಗಿದೆ. ಇದರಲ್ಲಿ 21 ಅಂತಾರಾಷ್ಟ್ರೀಯ ಪ್ರಕರಣಗಳು ಹಾಗೂ 65 ಅಂತಾರಾಜ್ಯ ಪ್ರಕರಣಗಳು ಸೇರಿವೆ.

corona
ಕೋವಿಡ್
author img

By

Published : Jun 26, 2020, 7:38 PM IST

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸತಾಗಿ 445 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 11,005ಕ್ಕೇರಿಕೆಯಾಗಿದೆ.

ಇಂದು ಹತ್ತು ಮಂದಿಯನ್ನು ಕೋವಿಡ್ ಬಲಿತೆಗೆದುಕೊಂಡಿದ್ದು, ಕೋವಿಡ್​ಗೆ ಮೃತಪಟ್ಟವರ ಸಂಖ್ಯೆ 180ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

ಇಂದು ಒಂದೇ ದಿನ 246 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ ರಾಜ್ಯದಲ್ಲಿ ಈವರೆಗೆ 6,916 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. 3,905 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನಡೆಯುತ್ತಿದೆ.

ಇಂದಿನ 445 ಪ್ರಕರಣಗಳಲ್ಲಿ 21 ಅಂತಾರಾಷ್ಟ್ರೀಯ ಪ್ರಕರಣಗಳು ಹಾಗೂ 65 ಅಂತಾರಾಜ್ಯ ಪ್ರಕರಣಗಳು ಸೇರಿವೆ.

ಬೆಂಗಳೂರಿನಲ್ಲಿ 144, ಬಳ್ಳಾರಿ 47, ಕಲಬುರಗಿ 42, ಕೊಪ್ಪಳ 36, ದಕ್ಷಿಣ ಕನ್ನಡ 33, ಧಾರವಾಡ 30, ರಾಯಚೂರು 14, ಗದಗ 12, ಚಾಮರಾಜನಗರ 11, ಉಡುಪಿ 9, ಯಾದಗಿರಿ 7 ಸೇರಿದಂತೆ ಇತರ ಕೆಲ ಜಿಲ್ಲೆಗಳಲ್ಲೂ ಹೊಸ ಪ್ರಕರಣ ವರದಿಯಾಗಿವೆ.

ಇಂದು ಮೃತಪಟ್ಟವರಲ್ಲಿ ಬೆಂಗಳೂರಿನ ಮೂವರು, ಕೋಲಾರ, ಧಾರವಾಡ, ಶಿವಮೊಗ್ಗ, ಬಾಗಲಕೋಟೆ, ಬೀದರ್, ಕಲಬುರಗಿ ಹಾಗೂ ಬಳ್ಳಾರಿಯಲ್ಲೂ ಚಿಕಿತ್ಸೆಗೆ ಸ್ಪಂದಿಸದೆ ತಾಲಾ ಒಬ್ಬರು ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.