ETV Bharat / city

ರಾಜ್ಯ ಬಜೆಟ್ ಮೇಲೆ​ ಸರ್ಕಾರಿ ನೌಕರರ ನಿರೀಕ್ಷೆಗಳೇನು?

ಈ ಬಾರಿಯ ಬಜೆಟ್​​ನಲ್ಲಿ ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ಪರಿಷ್ಕರಣೆ, ಹಳೆ ಪಿಂಚಣಿ ವ್ಯವಸ್ಥೆ ಜಾರಿ, ಖಾಲಿ‌ ಹುದ್ದೆ ಭರ್ತಿ ಸೇರಿದಂತೆ 11 ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಿ ನೌಕರರು ಸಿಎಂ ಬಿ. ಎಸ್​. ಯಡಿಯೂರಪ್ಪನವರ ಮುಂದಿಟ್ಟಿದ್ದಾರೆ.

author img

By

Published : Mar 7, 2021, 3:52 PM IST

karnataka-budget-expectations-of-government-employees
ಯಡಿಯೂರಪ್ಪ ಬಜೆಟ್

ಬೆಂಗಳೂರು: ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ಪರಿಷ್ಕರಣೆ, ಹಳೆ ಪಿಂಚಣಿ ವ್ಯವಸ್ಥೆ ಜಾರಿ, ಖಾಲಿ‌ ಹುದ್ದೆ ಭರ್ತಿ ಸೇರಿದಂತೆ 11 ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಿಟ್ಡಿದ್ದು, ಈ ಬಾರಿಯ ಬಜೆಟ್​​ನಲ್ಲಿ ಅನುಷ್ಠಾನಕ್ಕೆ ತರುವಂತೆ ಮನವಿ ಮಾಡಲಾಗಿದೆ.

ಸರ್ಕಾರಿ ನೌಕರರ ಬೇಡಿಕೆಗಳೇನು?

- ಮೈಸೂರು ಆಡಳಿತ ತರಬೇತಿ ಕೇಂದ್ರದ ಮಾದರಿಯಲ್ಲಿ ರಾಜ್ಯದ ವಿಭಾಗಗಳಲ್ಲಿ ವಸತಿ ಸಹಿತ ಸರ್ಕಾರಿ ನೌಕರರ ತರಬೇತಿ ಕೇಂದ್ರಗಳ ಸ್ಥಾಪನೆ.

- ರಾಜ್ಯ ಸರ್ಕಾರಿ ನೌಕರರ ಕೌಶಲ್ಯಾಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಜಿಲ್ಲಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿದ್ದು, ತರಬೇತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಅನುಭವಿ ಹಾಗೂ ವಿಷಯ ತಜ್ಞರ ನೇಮಕಾತಿಯಲ್ಲಿನ ನ್ಯೂನತೆ ಹಾಗೂ ಗುಣಮಟ್ಟದ ತರಬೇತಿಗಳನ್ನು ನೀಡದಿರುವುದರಿಂದ ನೌಕರರು ರಾಜ್ಯ ಸರ್ಕಾರದ ಪ್ರಗತಿಪರ ಕಾರ್ಯಯೋಜನೆಗಳನ್ನು ದಕ್ಷತೆಯಿಂದ ನಿರ್ವಹಿಸಿ ಗುಣಮಟ್ಟದ ಸೇವೆಯನ್ನು ಶ್ರೀಸಾಮಾನ್ಯರಿಗೆ ನೀಡುವಲ್ಲಿ ತೊಂದರೆಯಾಗಿರುತ್ತದೆ.

- ಪ್ರಸ್ತುತ ಜಿಲ್ಲಾ ಮಟ್ಟದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರಗಳನ್ನು ರದ್ದುಪಡಿಸಿ ಮೂಲಭೂತ ಸೌಕರ್ಯಗಳೊಂದಿಗೆ ವಸತಿ ಸಹಿತ ವಿಭಾಗೀಯ ತರಬೇತಿ ಕೇಂದ್ರಗಳನ್ನು ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಮಾದರಿಯಲ್ಲಿ ಬೆಂಗಳೂರು, ಹಾಸನ, ಶಿವಮೊಗ್ಗ, ಮಂಗಳೂರು, ಬಳ್ಳಾರಿ, ಕಲಬುರಗಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪನೆ ಮಾಡಬೇಕು.
2. ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವಸತಿ ಗೃಹ ನಿರ್ಮಾಣ/ ನಿರ್ವಹಣೆಗೆ ಅನುದಾನ ಮಂಜೂರು ಮಾಡುವ ಬಗ್ಗೆ..

ಆಡಳಿತಾತ್ಮಕ ದೃಷ್ಟಿಯಿಂದ ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ವರ್ಗಾವಣೆಗೊಂಡು ಕರ್ತವ್ಯ ನಿರ್ವಹಿಸುವ ನೌಕರರಿಗೆ ಅನುಕೂಲವಾಗಲು ಹಾಗೂ ಸರ್ಕಾರದ ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ ವಸತಿ ಗೃಹ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಬೇಕು.

3. ಜಿಲ್ಲಾ-ತಾಲ್ಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ಭವನ ನಿರ್ವಹಣೆಗೆ ಅನುದಾನ ಮಂಜೂರು ಮಾಡುವ ಬಗ್ಗೆ..

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ರಾಜ್ಯದ ಎಲ್ಲಾ ಜಿಲ್ಲೆ ತಾಲ್ಲೂಕು ಕೇಂದ್ರಗಳಲ್ಲಿ ನಿರ್ಮಿಸಿರುವ ನೌಕರರ ಭವನಗಳು ಶಿಥಿಲಾವಸ್ಥೆಯಲ್ಲಿದ್ದು ಇವುಗಳ ದುರಸ್ಥಿ ಹಾಗೂ ನಿರ್ವಹಣೆಗೆ ಒಟ್ಟಾರೆಯಾಗಿ ವಾರ್ಷಿಕ ರೂ 50.00 ಕೋಟಿಗಳನ್ನು ಲೋಕೋಪಯೋಗಿ ಇಲಾಖೆಯ ಲೆಕ್ಕ ಶೀರ್ಷಿಕೆಯಲ್ಲಿ ಅನುದಾನವನ್ನು ಕಾಯ್ದಿರಿಸಿ ಅನುಷ್ಠಾನಗೊಳಿಸಬೇಕು.

4. ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಮತ್ತು ಸಾಂಸ್ಕೃತಿಕ ಹಾಗೂ ಇನ್ನಿತರ ಸಂಘದ ನಿರ್ವಹಣ ಉದ್ದೇಶಕ್ಕೆ ಅನುದಾನ ಮಂಜೂರು ಮಾಡುವುದು

ಪ್ರತಿ ವರ್ಷ ನಡೆಯುವ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟಗಳು-ಸಾಂಸ್ಕೃತಿಕ ಕಾರ್ಯಕ್ರಮ,ಕನ್ನಡ ರಾಜ್ಯೋತ್ಸವ, ಮಹಿಳಾ ದಿನಾಚರಣೆ, ಸರ್ಕಾರಿ ನೌಕರರಿಗೆ ಇಲಾಖಾ ಪರೀಕ್ಷೆಗಳ ತರಬೇತಿ ಕಾರ್ಯಕ್ರಮಗಳ ಆಯೋಜನೆಗೆ 5.00, ಕೋಟಿ ರೂಗಳ ಅನುದಾನವನ್ನು ಆಯವ್ಯಯದಲ್ಲಿ ಕಾಯ್ದಿರಿಸಲು ವಿನಂತಿಸಿದೆ.

5. ರಾಜ್ಯದ ಸರ್ಕಾರಿ ನೌಕರರಿಗೆ-ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸಾ ಯೋಜನೆ ಬಗ್ಗೆ

ಹಾಲಿ ಇರುವ 'ಜ್ಯೋತಿ ಸಂಜೀವಿನಿ' ಯೋಜನೆ ಹಾಗೂ ವೈದ್ಯಕೀಯ ಹಾಜರಾತಿ ನಿಯಮಗಳನ್ನು ಬದಲಾಯಿಸಿ ರಾಜ್ಯದ ಸರ್ಕಾರಿ ನೌಕರರಿಗೆ ಹಾಗೂ ಕುಟುಂಬದ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ನೀಡುವ ಯೋಜನೆಯನ್ನು ಕಳೆದ ಸಾಲಿನ ಆಯ-ವ್ಯಯದಲ್ಲಿ ಘೋಷಣೆ ಮಾಡಲಾಗಿದೆ. ಆದರೆ ಈ ಯೋಜನೆ ಇನ್ನೂ ಅನುಷ್ಠಾನಗೊಂಡಿರುವುದಿಲ್ಲ. 1-4-2021 ರಿಂದ ಈ ಯೋಜನೆಯನ್ನು ಜಾರಿಗೊಳಿಸಲು ಹಾಗೂ ಈ ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿರುವ ಅನುದಾನವನ್ನು ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಲು ಮನವಿ.

6. ರಾಜ್ಯ ಸರ್ಕಾರಿ ನೌಕರರ ಎಲ್ಲಾ ಸೇವೆಗಳನ್ನು ಆನಲೈನ್ ಮೂಲಕ ಜಾರಿಗೊಳಿಸುವ ಬಗ್ಗೆ

ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಇಂದಿನ ಆಡಳಿತ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಸರ್ಕಾರದಿಂದ ಕಾಲಕಾಲಕ್ಕೆ ದೊರೆಯಬೇಕಾದ ಸೌಲಭ್ಯಗಳನ್ನು ನಿಗಧಿತ ಅವಧಿಯಲ್ಲಿ ಪಡೆಯಲು ಕಷ್ಟವಾಗುತ್ತಿದೆ. ಆದ್ದರಿಂದ ಈಗಾಗಲೇ ಸರ್ಕಾರ ರಾಜ್ಯದ ಎಲ್ಲಾ ಸರ್ಕಾರಿ ನೌಕರರ ಸೇವೆಗಳನ್ನು ಆನ್‌ಲೈನ್ ಮೂಲಕ ಜಾರಿಗೊಳಿಸಲು ಕ್ರಮ ವಹಿಸಿದ್ದು, ಆದಷ್ಟು ಬೇಗನೆ ಈ ಯೋಜನೆಯನ್ನು ಜಾರಿಗೊಳಿಸಲಿ ಮನವಿ.

7. ಸರ್ಕಾರಿ ನೌಕರರಿಗೆ ಸುಗಮ ಸೇವೆಗಾಗಿ ಕೆಜಿಐಡಿ ಗಣಕೀಕರಣ

ರಾಜ್ಯದ ಎಲ್ಲಾ ಸರ್ಕಾರಿ ನೌಕರರ ವಿಮಾ ಸಂಸ್ಥೆಯಾಗಿರುವ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯನ್ನು ತಾಂತ್ರಿಕವಾಗಿ ಅಭಿವೃದ್ಧಿಪಖೆಯು ಲರ್ವಹಿಸುತ್ತಿರುವ ಕೋಟ್ಯಾಂತರ ಮೊತ್ತದ ವ್ಯವಹಾರಗಳ ಬಗ್ಗೆ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದರ ಜೊತೆಗೆ, ರಾಜ್ಯ ಸರ್ಕಾರಿ ನೌಕರರ ಸಾಲ ಪಡೆಯುವ ಮುಂಗಡ, ಬೋನಸ್‌ಗಳು ಹಾಗೂ ಪಾಲಿಸಿಗಳ ಅಂತಿಮ ಇತ್ಯರ್ಥಗೊಳಿಸುವ ಕ್ರಮ, ಇಲಾಖೆಯ ಎಲ್ಲಾ ಲೆಕ್ಕಪತ್ರಗಳನ್ನು ಗಣಕೀಕರಣಗೊಳಿಸುವ ಕಾರ್ಯ ಭಾಗಶ: ಮುಕ್ತಾಯವಾಗಿದೆ. ಬಹುಶ: ಈಗಾಗಲೇ ಈ ಯೋಜನೆ-ಸೇವೆ ರಾಜ್ಯದ ಸರ್ಕಾರಿ ನೌಕರರಿಗೆ ಅನುಷ್ಟಾನಕ್ಕೆ ಬರಬೇಕಾಗಿತ್ತು. ಆದ್ದರಿಂದ ಆದಷ್ಟು ಬೇಗನೆ ಈ ಯೋಜನೆಯನ್ನು ರಾಜ್ಯದ ಸರ್ಕಾರಿ ನೌಕರರಿಗೆ ರಾಜ್ಯದ ಮುಖ್ಯಮಂತ್ರಿಗಳಿಂದ ಲೋಕಾರ್ಪಣೆ ಮಾಡಬೇಕೆಂದು ವಿನಂತಿಸಿದೆ.

8. ಖಾಲಿಯಿರುವ ಸರ್ಕಾರಿ ಹುದ್ದೆಗಳ ಭರ್ತಿ ಮಾಡುವ ಬಗ್ಗೆ

ಮಂಜೂರಾದ ಹುದ್ದೆಗಳು, ಭರ್ತಿಯಾದ ಹುದ್ದೆಗಳು ಹಾಗೂ ಖಾಲಿ ಇರುವ ಹುದ್ದೆಗಳ ವಿವರ:

ಮಂಜೂರಾದ ಹುದ್ದೆಗಳು: 7,79,439
ಭರ್ತಿಯಾದ ಹುದ್ದೆಗಳು: 5,09,867
ಖಾಲಿ ಹುದ್ದೆಗಳು: 2,69,572

ರಾಜ್ಯ ಸರ್ಕಾರವು ಹಲವು ವರ್ಷಗಳ ಹಿಂದೆ ಅಂದರೆ; ರಾಜ್ಯದ ಜನಸಂಖ್ಯೆ 5.00 ಕೋಟಿ ಇದ್ದ ಸಂದರ್ಭದಲ್ಲಿ ಮಂಜೂರು ಮಾಡಿರುವ ಹುದ್ದೆಗಳ ಪ್ರಮಾಣವೇ ಇದುವರೆವಿಗೂ ಮುಂದುವರೆದಿದ್ದು, ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ 5,09,867 ಹುದ್ದೆಗಳ ನೌಕರರು ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುವ ಪರಿಸ್ಥಿತಿ ಉದ್ಭವಿಸಿ ಸರ್ಕಾರವು ಕಾಲ ಕಾಲಕ್ಕೆ ರೂಪಿಸುವ ವಿನೂತನ ಯೋಜನೆಗಳು ನಿಗದಿತ ಅವಧಿಯಲ್ಲಿ ಶ್ರೀಸಾಮಾನ್ಯರಿಗೆ ತಲುಪಿಸುವಲ್ಲಿ ಕಷ್ಟಸಾಧ್ಯವಾಗಿರುತ್ತದೆ.

ಆದ್ದರಿಂದ ಈ ಕೆಳಕಂಡ ಅಂಶಗಳ ಹಿನ್ನೆಲೆ ಹಾಗೂ ಸರ್ಕಾರದ ಸುಗಮ ಆಡಳಿತ ನಿರ್ವಹಣೆ ಹಾಗೂ ನೌಕರರ ಮೇಲಿನ ಕಾರ್ಯಭಾರ ಒತ್ತಡವನ್ನು ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಖಾಲಿಯಿರುವ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲು ಹಾಗೂ ರಾಜ್ಯದ ಸಂಖ್ಯೆಗನುಗುಣವಾಗಿ ಹೊಸದಾಗಿ ಹುದ್ದೆಗಳನ್ನು ಸೃಜನೆ ಮಾಡಲು ಮನವಿ ಮಾಡಿದೆ.

9. ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಹಲವಾರು ವೃಂದದ ನೌಕರರ ವೇತನ ತಾರತಮ್ಯವನ್ನು ಸರಿಪಡಿಸುವ ಬಗ್ಗೆ

ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ವೃಂದದ ನೌಕರರು ಮುಂಬಡ್ತಿಗಳನ್ನು ಪಡೆದರೂ ಸಹ, ಮುಂಬಡ್ತಿಯನ್ನು ಪಡೆಯದ ನೌಕರರಿಗಿಂತ 2-3 ವಾರ್ಷಿಕ ವೇತನ ಬಡ್ತಿಗಳನ್ನು ಪಡೆದು ಕಡಿಮೆ ವೇತನ ಹಾಗೂ ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಸದ್ರಿ ವೃಂದಕ್ಕೆ ಅನ್ಯಾಯವಾದಂತಾಗಿದೆ. ಈ ಸಂಬಂಧದ ಕಡತ ಆರ್ಥಿಕ ಇಲಾಖೆಯಲ್ಲಿದ್ದು ಈ ವೇತನ ತಾರತಮ್ಯವನ್ನು ಸರಿಪಡಿಸಿ ಕಾನೂನು ಬದ್ಧವಾಗಿ ನಿಗಧಿಗೊಳಿಸಬೇಕಾದ ವೇತನಗಳನ್ನು ನಿಗಧಿಗೊಳಿಸಲು ವಿನಂತಿಸಿದೆ.

10. ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯದ ನೌಕರರಿಗೂ ವೇತನ ಪರಿಷ್ಕರಣೆ ಮಾಡುವ ಬಗ್ಗೆ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಕೇಂದ್ರ ಸರ್ಕಾರಿ ನೌಕರರ ಮಾದರಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮಾಡುವ ಬೇಡಿಕೆಯನ್ನು ಹಲವು ವರ್ಷಗಳಿಂದ ಮಂಡಿಸುತ್ತಾ ಬಂದಿದ್ದು, ಕರ್ನಾಟಕ ರಾಜ್ಯ 6ನೇ ವೇತನ ಆಯೋಗದ ಮುಂದೆಯೂ ಸಹ ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನ ವೇತನವನ್ನು ಪರಿಷ್ಕರಿಸುವ ಅಗತ್ಯತೆ ಬಗ್ಗೆ ಅಂಕಿ ಅಂಶಗಳ ಸಮರ್ಥನೀಯ ವಾದವನ್ನು ಮಂಡಿಸಿತ್ತು. ಆದರೆ, ವೇತನ ಆಯೋಗವು ಈ ಬೇಡಿಕೆಯನ್ನು ಪರಿಗಣಿಸದಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರ ವೇತನ ಹಾಗೂ ಭತ್ಯೆಗಳಲ್ಲಿ ಅಘಾದವಾದ ವ್ಯತ್ಯಾಸವಾಗಿದೆ ಇದನ್ನು ಸರಿಪಡಿಸಬೇಕು.

11. ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ

ಕೇಂದ್ರ ಸರ್ಕಾರವು ದಿನಾಂಕ: 01-01-2004ರಿಂದ ಅನ್ವಯಗೊಳ್ಳುವಂತೆ ನೂತನ ಪಿಂಚಣಿಯೋಜನೆ ಜಾರಿಗೊಳಿಸಿ ಈ ಯೋಜನೆಯನ್ನು ಅಳವಡಿಸಿಕೊಳ್ಳುವ ವಿವೇಚನೆಯನ್ನು ಆಯಾ ರಾಜ್ಯ ಸರ್ಕಾರಗಳಿಗೆ ನೀಡಿರುತ್ತದೆ. ಅದರಂತೆ ರಾಜ್ಯ ಸರ್ಕಾರವು ದಿನಾಂಕ: 01.04.2006 ರಿಂದ ಯೋಜನೆಯನ್ನು ಜಾರಿಗೊಳಿಸಿದೆ. ಆದರೆ ಯೋಜನೆಯಿಂದ‌ ರಾಜ್ಯ ಸರ್ಕಾರಿ ನೌಕರರಿಗೆ ಯಾವುದೇ ಪ್ರಯೋಜನವಾಗದೆ ಅತ್ಯಂತ ಕಡಿಮೆ ಪಿಂಚಣಿಯನ್ನು ಪಡೆಯುತ್ತಿದ್ದು, ಸಂಘವು ಈ ಸಂಬಂಧ ಸರ್ಕಾರಕ್ಕೆ ಸಲ್ಲಿಸಿದ ಮೇರೆಗೆ ಸರ್ಕಾರವು ದಿನಾಂಕ 11-12-2018ರನ್ವಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಈ ಯೋಜನೆಗೆ ಸೂಕ್ತ ಬದಲಾವಣೆ ಅಥವಾ ಮಾರ್ಪಾಡು ಮಾಡುವ ನಿಟ್ಟಿನಲ್ಲಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿಯನ್ನು ರಚಿಸಿದೆ.

ಆದರೆ ಸಮಿತಿಯು 2 ವರ್ಷಗಳು ಕಳೆದರೂ ಸರ್ಕಾರಕ್ಕೆ ಇನ್ನೂ ವರದಿಯನ್ನು ಸಲ್ಲಿಸಿಲ್ಲ. ರಾಜ್ಯದಲ್ಲಿ ಸುಮಾರು 2,50.ಲಕ್ಷ ನೂತನ ಪಿಂಚಣಿ ಯೋಜನೆಗೆ ಒಳಪಡುವ ನೌಕರರಿದ್ದು ಹಾಗೂ ಅವರ ಕುಟುಂಬ ವರ್ಗದ ಹಿತರಕ್ಷಣೆ ದೃಷ್ಟಿಯಿಂದ; ಈ ಬಗ್ಗೆ ರಚಿತವಾಗಿರುವ ಅಧಿಕಾರಿಗಳ ಸಮಿತಿ ಸಭೆಯನ್ನು ನಡೆಸಲು ನಿರ್ದೇಶನ ನೀಡುವುದರ ಜೊತೆಗೆ, ಸಮಿತಿಯಿಂದ ಪೂರಕವಾದ ವರದಿಯನ್ನು ಪಡೆದು, ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಈ ಹಿಂದಿನ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮೂಲಕ ರಾಷ್ಟ್ರಕ್ಕೆ ಮಾದರಿಯಾಗಲು ಆಗ್ರಹಿಸಿದೆ.

ಸರ್ಕಾರಿ ನೌಕರರ ಬೇಡಿಕೆ ಬಗ್ಗೆ ವಿಧಾನ ಪರಿಷತ್ ನಲ್ಲಿಯೂ ಸಾಕಷ್ಟು ಚರ್ಚೆ ನಡೆದಿದೆ.ವಿಶೇಷವಾಗಿ ಪಿಂಚಣಿ ವ್ಯವಸ್ಥೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದು, ಪಕ್ಷಾತೀತವಾಗಿ ಹಳೆ ಪಿಚಣಿ ವ್ಯವಸ್ಥೆ ಮರು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹೇರಿದೆ.

ಸದ್ಯ ಬಜೆಟ್ ಸಿದ್ದತಾ ಕಾರ್ಯ ಮುಕ್ತಾಯಗೊಂಡಿದ್ದು ಬಜೆಟ್ ಪುಸ್ತಕ ಮುದ್ರಣವಾಗಿದೆ. ನಾಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ 8 ನೇ ಬಜೆಟ್ ಮಂಡಿಸಲಿದ್ದು ಬಜೆಡ್ ನಲ್ಲಿ ಸರ್ಕಾರಿ ನೌಕರರಿಗೆ ಯಾವ ಸುದ್ದಿ ಸಿಗಲಿದೆ ಎಂದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.