ETV Bharat / city

ಕೈಗಾರಿಕಾ ಕ್ಷೇತ್ರಕ್ಕೆ ಬಜೆಟ್​ ಕೊಡುಗೆಗಳು ಇಂತಿವೆ..

ಈ ಬಾರಿಯ ಕರ್ನಾಟಕ ಬಜೆಟ್​ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಲಾಗಿದೆ..

Industry
Industry
author img

By

Published : Mar 4, 2022, 2:40 PM IST

ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡನೆ ಮಾಡಿರುವ ಬಜೆಟ್​ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳು ಹೀಗಿವೆ..

1. ನವಕರ್ನಾಟಕ ನಿರ್ಮಾಣಕ್ಕಾಗಿ ಪ್ರತಿ ವಿಭಾಗದಲ್ಲಿ ತಲಾ ಒಂದು ಯೋಜನಾಬದ್ಧ ಪರಿಸರಸ್ನೇಹಿ ನವನಗರ ಅಭಿವೃದ್ಧಿ

2. ರಾಜ್ಯದಲ್ಲಿ ದೊಡ್ಡ ಗಾತ್ರದ ಹೂಡಿಕೆ ಪ್ರದೇಶಗಳು ಮತ್ತು ಕೈಗಾರಿಕಾ ವಸಾಹತುಗಳ ಸ್ಥಾಪನೆ, ಕಾರ್ಯಾಚರಣೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚನೆ

3. ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ವಿಶೇಷ ಹೂಡಿಕೆ ಪ್ರದೇಶ ಅಧಿಸೂಚನೆ

4. ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ. ಇದರಿಂದ ಹತ್ತು ಸಾವಿರ ಜನರಿಗೆ ಉದ್ಯೋಗಾವಕಾಶ.

5. ಧಾರವಾಡದಲ್ಲಿ ಎಫ್​ಎಂಸಿಜಿ ಕ್ಲಸ್ಟರ್​​ ಅಭಿವೃದ್ಧಿ.ಇದಕ್ಕಾಗಿ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್ ಘೋಷಣೆ.

6. ಮುಂದಿನ ಎರಡು ವರ್ಷ ಸರ್ಕಾರದಿಂದಲೇ ಮೈಷುಗರ್ ಕಾರ್ಖಾನೆ ನಡೆಸಲು ನಿರ್ಧಾರ ಹಾಗೂ ಅಲ್ಲಿನ ಯಂತ್ರೋಪಕರಣ ದುರಸ್ತಿಗೆ 50 ಕೋಟಿ ರೂ.

7. ಕಲಬುರಗಿ ಮತ್ತು ವಿಜಯಪುರದಲ್ಲಿ ಮೆಗಾ-ಟೆಕ್ಸಟೈಲ್ ಪಾರ್ಕ್ ಸ್ಥಾಪನೆಗೆ ಕೇಂದ್ರಕ್ಕೆ ಪ್ರಸ್ತಾವನೆ.

8. ನವಲಗುಂದ ಮತ್ತು ರಾಣೆಬೆನ್ನೂರಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ; 5,000 ಉದ್ಯೋಗ ಸೃಷ್ಟಿ.

9. ಬಳ್ಳಾರಿಯಲ್ಲಿ ಜೀನ್ಸ್ ಮತ್ತು ಉಡುಪು ಸಂಬಂಧಿತ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪನೆ.

10. ರಾಜ್ಯದಲ್ಲಿ ಸೆಮಿಕಂಡಕ್ಟರ್ ತಯಾರಿಕಾ ಉದ್ಯಮಗಳ ಸ್ಥಾಪನೆಗೆ ಪ್ರೋತ್ಸಾಹ.

11. ನಾವಿನ್ಯತೆಯುಳ್ಳ ಕಲ್ಯಾಣ ಕರ್ನಾಟಕ ಭಾಗದ 25 ನವೋದ್ಯಮಗಳನ್ನು ಉತ್ತೇಜಿಸಲು ಏಲಿವೇಟ್​ ಕಲ್ಯಾಣ ಕರ್ನಾಟಕ ಕಾರ್ಯಕ್ರಮ.

12. ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಸ್ಟಾರ್ಟಪ್ ಗಳಿಗೆ ಪ್ರೋತ್ಸಾಹ ನೀಡಲು ತಲಾ 20 ಕೋಟಿ ರೂ. ವೆಚ್ಚದಲ್ಲಿ 'ಬಿಯಾಂಡ್​ ಬೆಂಗಳೂರು ಕ್ಲಸ್ಟರ್​ ಸೀಡ್​ ಫಂಡ್​ ಫಾರ್​ ಸ್ಟಾರ್ಟಪ್'​ ಸ್ಥಾಪನೆ. ಇದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 12 ಕೋಟಿ ರೂ. ಅನುದಾನ.

13. ಬೆಳಗಾವಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 'ಗ್ಲೋಬಲ್​ ಎಮರ್ಜಿಂಗ್​ ಟೆಕ್ನಾಲೊಜಿ ಡಿಸೈನ್​ ಸೆಂಟರ್'​ ಸ್ಥಾಪಿಸಲಾಗುವುದು.

14. ಮೈಸೂರಿನಲ್ಲಿ 30 ಕೋಟಿ ರೂ. ವೆಚ್ಚದಲ್ಲಿ 'ಮೈಸೂರು ದಿ ಗ್ಲೋಬಲ್​ ಟೆಕ್ನಾಲಜಿ ಸೆಂಟರ್​ ಪ್ಲಗ್​ & ಪ್ಲೇ' ಸೌಲಭ್ಯ ಸ್ಥಾಪನೆ. 2022-23ರಲ್ಲಿ 10 ಕೋಟಿ ರೂ. ಅನುದಾನ.

15. ರಾಜ್ಯದ 15 ಪ್ರವಾಸಿ ತಾಣಗಳ AR VR ತುಣುಕುಗಳ ಸೃಜನೆಗೆ 15 ಕೋಟಿ ರೂ. ಅನುದಾನ.

16. ಕೇಂದ್ರ ಮತ್ತು ಉದ್ಯಮಿಗಳ ಸಹಭಾಗಿತ್ವದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 'ಕರ್ನಾಟಕ ಆ್ಯಕ್ಸಲರೇಶನ್​ ನೆಟ್​ವರ್ಕ್'ಗೆ 20 ಕೋಟಿ ರೂ. ಅನುದಾನ.

ಇದನ್ನೂ ಓದಿ: ಬಜೆಟ್: ರಾಜಧಾನಿ ಬೆಂಗಳೂರು ಮೇಲೆ ಸಿಎಂ ಬೊಮ್ಮಾಯಿ ಕೃಪಾಕಟಾಕ್ಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.