ETV Bharat / city

ಕೊರೊನಾ ಓಡಿಸಲು ಚಪ್ಪಾಳೆ ತಟ್ಟಿ, ದೀಪ ಹಚ್ಚಿ, ಜಾಗಟೆ ಬಾರಿಸಿ ಎಂದ ಪ್ರಧಾನಿ ಇವರೆಲ್ಲಿ? ನೆಹರು ಎಲ್ಲಿ?: ಸಿದ್ದರಾಮಯ್ಯ

author img

By

Published : Nov 14, 2021, 5:18 PM IST

ಕೊರೊನಾ ರೋಗ ಓಡಿಸಲು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ದೀಪ ಹಚ್ಚಿ, ಜಾಗಟೆ ಬಾರಿಸಿ ಅಂತಾ ಹೇಳುವ ಪ್ರಧಾನಿ ಇವರೆಲ್ಲಿ? ಜವಾಹರಲಾಲ್ ನೆಹರು ಎಲ್ಲಿ? ಇಂತಹ ಮೌಢ್ಯ ಬಿತ್ತುವ ಕಾರ್ಯವನ್ನು ನೆಹರು (Jawaharalal Nehru) ಯಾವತ್ತೂ ಮಾಡಿರಲಿಲ್ಲ. ಮಹಾಮಾರಿಯನ್ನು ಮೌಢ್ಯದಿಂದ ಓಡಿಸಲು ಸಾಧ್ಯ ಎಂಬ ಮೌಢ್ಯದ ಪ್ರತಿಪಾದಕರು ಇನ್ನೊಬ್ಬರು ಸಿಗಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು..

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು : ನೈಜ ಸದಸ್ಯತ್ವ ಅಭಿಯಾನವನ್ನು ರಾಜ್ಯಾದ್ಯಂತ ಮಾಡಿ ಎಂದು ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಮನವಿ ಮಾಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಜವಾಹರಲಾಲ್ ನೆಹರು ಜನ್ಮದಿನ ಹಾಗೂ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಐಡಿಯಾಲಜಿಯನ್ನು ಪ್ರತಿ ಮನೆಗೂ ತಲುಪಿಸುವ ಕಾರ್ಯ ಮಾಡಬೇಕಿದೆ.

ಅನೇಕ ಮಂದಿಗೆ ಕಾಂಗ್ರೆಸ್ ಬಗ್ಗೆ ಸಂಪೂರ್ಣ ಅರಿವು ಇಲ್ಲ. ದಯವಿಟ್ಟು ಪಕ್ಷದ ಕಾರ್ಯಕರ್ತರೊಂದಿಗೆ ಸದಸ್ಯತ್ವ ಮಾಡುವತ್ತ ಗಮನ ಹರಿಸಿ. ಪ್ರತಿಯೊಬ್ಬರನ್ನು ಮನವೊಲಿಸಿ 5 ರೂ. ಸ್ವೀಕರಿಸಿ ಸದಸ್ಯತ್ವ ಮಾಡಿಸಿ. ಸದಸ್ಯರಾಗಲು ಬಯಸುವವರನ್ನು ಕರೆತನ್ನಿ. ಹೊಂದಾಣಿಕೆ ರಾಜಕೀಯ ತೊಡೆದು ಹಾಕಲು ಸಹಕರಿಸಿ ಎಂದರು.

ನೆಹರು ಅವರಿಗೆ ಎರಡು ಪ್ರಮುಖ ಸವಾಲುಗಳು : ದೇಶದ ಪ್ರಧಾನಿಯಾದ ಹೊಸತರಲ್ಲಿ ಜವಾಹರಲಾಲ್ ನೆಹರು ಅವರಿಗೆ ಎರಡು ಪ್ರಮುಖ ಸವಾಲುಗಳು ಇದ್ದವು. ಪ್ರಜಾತಂತ್ರವನ್ನು ಗಟ್ಟಿಯಾಗಿ ನೆಲೆಗೊಳಿಸುವುದು ಮತ್ತು ದೇಶದ ಏಕತೆಯನ್ನು ಉಳಿಸುವ ಜವಾಬ್ದಾರಿ ಇತ್ತು. ಯಾಕೆಂದರೆ, ನಮಗಿಂತ ಮುಂಚೆ ಸ್ವಾತಂತ್ರ್ಯ ಪಡೆದವರಿಗೆ ದೇಶವನ್ನು ನೆಲೆಗೊಳಿಸಿ ಕೊಳ್ಳಲು ಸಾಧ್ಯವಾಗಿರಲಿಲ್ಲ.

555 ಮಂದಿ ರಾಜರು ಪಾಳೆಗಾರರು ಆಳ್ವಿಕೆ ನಡೆಸುತ್ತಿದ್ದರು. ತಾತ್ಕಾಲಿಕವಾಗಿ ಅವರು ಸ್ವಾತಂತ್ರ್ಯವನ್ನು ಒಪ್ಪಿಕೊಂಡರು, ದೀರ್ಘಾವಧಿಗೆ ಇದು ಸಾಧ್ಯವಾಗುವುದಿಲ್ಲ ಎಂದು ಬಹಳಷ್ಟು ದೇಶಿ-ವಿದೇಶಿ ತಜ್ಞರು ಅಭಿಪ್ರಾಯಪಟ್ಟಿದ್ದರು. ನೆಹರು ಇದನ್ನ ಸುಳ್ಳಾಗಿಸಿದ್ದರು. ಇಂದಿಗೂ ದೇಶದಲ್ಲಿ ಸ್ವಾತಂತ್ರ್ಯ ನೆಲೆಗೊಳ್ಳಲು ಹಾಗೂ ಇಷ್ಟೊಂದು ವ್ಯವಸ್ಥಿತವಾಗಿ ದೇಶ ಮುನ್ನಡೆಯಲು ನೆಹರು ಕೊಡುಗೆ ದೊಡ್ಡದಿದೆ ಎಂದು ಹೇಳಿದರು.

ಒಬ್ಬ ಶ್ರೇಷ್ಠ ಪ್ರಜಾಪ್ರಭುತ್ವವಾದಿ ನೆಹರು : ದೇಶದ ಏಕತೆ, ಸಮಗ್ರತೆಗೆ ಒತ್ತುಕೊಟ್ಟರು. ಯಾವುದಾದರೂ ರಾಷ್ಟ್ರ ಎಂದು ಏಕತೆಯನ್ನು ಸಮಗ್ರತೆಯನ್ನು ಉಳಿಸಿಕೊಂಡು ಹೋಗಿದ್ದರೆ ಅದು ಭಾರತ ಮಾತ್ರ. ಜವಾಹರಲಾಲ್ ನೆಹರು ಹಾಗೂ ವಲ್ಲಭ್​ ಭಾಯಿ ಪಟೇಲ್ ಅವರು ಕೈಗೊಂಡ ಗಟ್ಟಿ ನಿರ್ಣಯಗಳು ಇದರ ಹಿಂದಿದೆ. ಹಿಂದಿನ ಪ್ರಗತಿ ಹಾಗೂ ಬೆಳವಣಿಗೆಗಳ ಹಿಂದೆ ನೆಹರು ಕೊಡುಗೆ ದೊಡ್ಡದಿದೆ. ಇವೆಲ್ಲಕ್ಕೂ ಅಡಿಪಾಯ ಹಾಕಿದ್ದೇ ಅವರು.

17 ವರ್ಷ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶವನ್ನು ಕಟ್ಟಲು ತ್ಯಾಗ, ಬಲಿದಾನವನ್ನು ಮಾಡಿದರು. ಒಬ್ಬ ಶ್ರೇಷ್ಠ ಪ್ರಜಾಪ್ರಭುತ್ವವಾದಿ. ತುಂಬಾ ಮಂದಿ ಅವರಿಗೆ ಕೆಟ್ಟ ಹೆಸರು ತರಲು ಪ್ರಯತ್ನ ಮಾಡಿದ್ದಾರೆ. ಭಾರತೀಯ ಜನತಾ ಪಕ್ಷ ಹಾಗೂ ಕೋಮುವಾದಿಗಳು ಇವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ, ನೆಹರು ಒಬ್ಬ ದೊಡ್ಡ ಮನುಷ್ಯ ಎಂದರು.

ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ : ಎದುರಾಳಿಗಳನ್ನು ನೆಹರು ಯಾವತ್ತೂ ದ್ವೇಷಿಸುತ್ತಿರಲಿಲ್ಲ. ಪ್ರತಿಪಕ್ಷಗಳು ಮಾತನಾಡುವಾಗ ತಾಳ್ಮೆಯಿಂದ ಕೇಳುವ ಸೌಜನ್ಯವನ್ನು ಅವರು ಇಟ್ಟುಕೊಂಡಿದ್ದರು. ಆದರೆ, ಇಂದಿನ ಪ್ರಧಾನಿ ಲೋಕಸಭೆಗೆ ಬರುವುದಿಲ್ಲ. ಬಂದರೆ ಮಾತನಾಡುವುದೇ ಇಲ್ಲ. ಪ್ರತಿಪಕ್ಷಗಳ ಟೀಕೆಗೆ ಉತ್ತರ ಕೊಡುವ ನೈತಿಕ ಶಕ್ತಿಯನ್ನು ಇವರು ಹೊಂದಿಲ್ಲ. ಆದರೆ, ನೆಹರು ಇಂತಹ ಪ್ರಧಾನಿ ಆಗಿರಲಿಲ್ಲ. ಅವರೊಬ್ಬ ಮಾದರಿ ಪ್ರಧಾನಿಯಾಗಿ ತಮ್ಮ ಹೆಜ್ಜೆಗುರುತನ್ನು ಬಿಟ್ಟು ಹೋಗಿದ್ದಾರೆ.

ವಿಜ್ಞಾನ ಹಾಗೂ ವೈಚಾರಿಕತೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ಇವತ್ತಿನ ಪ್ರಧಾನಿ ಆರ್​ಎಸ್​ಎಸ್​ನಿಂದ ಬಂದವರು. ಸಂಪ್ರದಾಯ ಮೌಢ್ಯದಿಂದ ಇವರಿಗೆ ಹೊರ ಬರಲು ಸಾಧ್ಯವಾಗಿಲ್ಲ. ಕೊರೊನಾ ರೋಗ ಓಡಿಸಲು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ, ದೀಪ ಹಚ್ಚಿ, ಜಾಗಟೆ ಬಾರಿಸಿ ಅಂತಾ ಹೇಳುವ ಪ್ರಧಾನಿ ಇವರೆಲ್ಲಿ? ಜವಾಹರಲಾಲ್ ನೆಹರು ಎಲ್ಲಿ? ಇಂತಹ ಮೌಢ್ಯ ಬಿತ್ತುವ ಕಾರ್ಯವನ್ನು ನೆಹರು ಯಾವತ್ತೂ ಮಾಡಿರಲಿಲ್ಲ. ಮಹಾಮಾರಿಯನ್ನು ಮೌಢ್ಯದಿಂದ ಓಡಿಸಲು ಸಾಧ್ಯ ಎಂಬ ಮೌಢ್ಯದ ಪ್ರತಿಪಾದಕರು ಇನ್ನೊಬ್ಬರು ಸಿಗಲು ಸಾಧ್ಯವಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಮಹಾನ್ ಸುಳ್ಳುಗಾರ ನರೇಂದ್ರ ಮೋದಿಜಿ : ಕಾಂಗ್ರೆಸ್‌ನಿಂದ ಯಾವ ಸಾಧನೆ ಆಗಿದೆ ಎಂದು ಇಂದಿನ ಪ್ರಧಾನಿ ನರೇಂದ್ರ ಮೋದಿ ಕೇಳುತ್ತಾರೆ. ಆದರೆ, ಆಹಾರದ ಸ್ವಾವಲಂಬನೆಯನ್ನು ಕಾಂಗ್ರೆಸ್ ಮಾಡಿದೆ ಎಂಬುದು ಅವರಿಗೆ ಅರಿವಿಲ್ಲ. ಆಹಾರ ಸ್ವಾವಲಂಬನೆ ದೇಶದಲ್ಲಿ ಆಗಿದ್ದರೆ ಅದಕ್ಕೆ ನೆಹರು ಹಾಗೂ ಇಂದಿರಾಗಾಂಧಿ ಕಾರಣ. ಇದನ್ನು ನರೇಂದ್ರ ಮೋದಿ ಅರ್ಥಮಾಡಿಕೊಳ್ಳಬೇಕು. ದೇಶದ ಆರ್ಥಿಕ ಸ್ಥಿತಿ, ಜನರ ಜೀವನ ಹಾಳಾಗಿ ಹೋಗಿದೆ.

ಇಂತಹ ವ್ಯಕ್ತಿಯಾಗಿ ನೀವು ನೆಹರು ಅವರನ್ನು ಪ್ರಶ್ನಿಸುವ ನೈತಿಕತೆಯನ್ನು ಹೊಂದಿದ್ದೀರಾ? ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ? ನನ್ನ ರಾಜಕೀಯ ಬದುಕಿನಲ್ಲಿ ಇಷ್ಟೊಂದು ದೇಶವನ್ನು ಕೀಳುಮಟ್ಟಕ್ಕೆ ಕೊಂಡೊಯ್ಯುವಂತಹ ಪರಿಸ್ಥಿತಿ ಯಾವತ್ತು ನಿರ್ಮಾಣ ಆಗಿರಲಿಲ್ಲ. ಇಷ್ಟು ಸುಳ್ಳು ಹೇಳುವಂತಹ ಪ್ರಧಾನಿ ದೇಶದಲ್ಲಿ ಯಾವತ್ತೂ ಬಂದಿರಲಿಲ್ಲ. ಮಹಾನ್ ಸುಳ್ಳುಗಾರ ನರೇಂದ್ರ ಮೋದಿಜಿ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು. ಅವರು ಹೇಳಿದಂತೆ ಯಾವುದಾದರೂ ಒಂದು ಮಾತು ಸತ್ಯವಾಗಿದ್ದನ್ನು ನೋಡಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ಬಿಜೆಪಿಯವರು ಸಂವಿಧಾನ ವಿರೋಧಿಗಳು : ಕಾಂಗ್ರೆಸ್​ನವರು ಮಾಡಿದ ಸಾಲದಿಂದ ಪೆಟ್ರೋಲ್-ಡೀಸೆಲ್, ಅಡುಗೆ ಅನಿಲ ಬೆಲೆ ಹೆಚ್ಚಿದೆ ಎಂದು ಸುಳ್ಳನ್ನು ನರೇಂದ್ರ ಮೋದಿ ಹೇಳುತ್ತಾರೆ. ಸಾಲಕ್ಕೂ ಹಾಗೂ ಆಯಿಲ್ ಬಾಂಡ್ ಖರೀದಿಗೂ ಹಾಗೂ ಬೆಲೆ ಏರಿಕೆಗೆ ಯಾವುದೇ ಸಂಬಂಧ ಇಲ್ಲ. ಇಂತಹ ನಾಚಿಕೆಗೆಟ್ಟ, ಲಜ್ಜೆಗೆಟ್ಟ ಸರ್ಕಾರ ಕೇಂದ್ರ ಮತ್ತು ರಾಜ್ಯದಲ್ಲಿದೆ. ಬಿಜೆಪಿಯವರು ಜಾತಿವಾದಿಗಳು, ಕೋಮುವಾದಿಗಳು ಹಾಗೂ ಸಂವಿಧಾನ ವಿರೋಧಿಗಳು.

ಸಂವಿಧಾನ, ದೇಶ ಹಾಗೂ ಜನರು ಉತ್ತಮ ಬದುಕು ಉಳಿಯಬೇಕಾದರೆ ಕಾಂಗ್ರೆಸ್ ಉಳಿಯಬೇಕು. ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕಾರ್ಯ ಆಗಬೇಕಿದೆ. ನೆಹರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗುವ ಮೂಲಕ ಅವರಿಗೆ ಗೌರವ ಸಲ್ಲಿಸೋಣ. ದೇಶ ಉಳಿದರೆ ನಾವು ಉಳಿಯುತ್ತೇವೆ. ದೇಶ ಹಾಳಾದರೆ ನಾವ್ಯಾರು ಉಳಿಯುವುದಿಲ್ಲ. ಬಿಜೆಪಿಯವರು ದೇಶ ಹಾಳು ಮಾಡಲು ಹೊರಟಿದ್ದಾರೆ. ಇವರಿಗೆ ಭ್ರಷ್ಟಾಚಾರ ನೀರು ಕುಡಿದಷ್ಟೇ ಸಲೀಸು. ಇದು ಅವರ ರಾಜಕೀಯದ ಒಂದು ಅಂಶ. ದುಡ್ಡಿದ್ದರೆ ಏನು ಬೇಕಾದರೂ ಮಾಡಬಹುದು ಎಂಬ ಭಾವನೆ ಇದೆ ಎಂದರು.

ಬಿಜೆಪಿಯನ್ನು ಕಿತ್ತೊಗೆಯಬೇಕಿದೆ : ಸಮಾಜ ಹಾಳಾಗುತ್ತಿದೆ. ಇದನ್ನು ಸರಿಪಡಿಸಲು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು. ಬಿಜೆಪಿಯನ್ನು ಕಿತ್ತೊಗೆಯಬೇಕಿದೆ. ನಮಗೆ ಅಧಿಕಾರದ ಆಸೆ ಇಲ್ಲ. ಆದರೆ, ಸಂವಿಧಾನ, ಜನರ ಜೀವನ ಉಳಿಸುವ ಸಲುವಾಗಿ ಕಾಂಗ್ರೆಸ್ ಮಾತ್ರವೇ ಪರ್ಯಾಯ. ಜಾತ್ಯಾತೀತ ರಾಷ್ಟ್ರ ನಿರ್ಮಾಣದ ಕನಸು ನಮ್ಮದು. ಆದರೆ, ಬಿಜೆಪಿಯವರು ಹಿಂದೂ ರಾಷ್ಟ್ರ ನಿರ್ಮಾಣ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ.

ಈ ದೇಶ ಒಂದು ಜಾತಿ ಧರ್ಮ ಹಾಗೂ ಭಾಷೆಯವರಿಗೆ ಸೀಮಿತವಾದ ಅಥವಾ ಒಳಗೊಂಡ ರಾಷ್ಟ್ರವಲ್ಲ. ಇದು ಬಹುತ್ವದಿಂದ ಕೂಡಿರುವ ರಾಷ್ಟ್ರ. ಯಾವುದೇ ಏಕತೆ ಉಳಿಸಿಕೊಂಡು ರಾಷ್ಟ್ರ ಕಟ್ಟುವ ಕಾರ್ಯ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದಲ್ಲಿರುವ ಬಗ್ಗೆ ಹೆಮ್ಮೆಪಡಬೇಕು.

ಬಿಜೆಪಿ ಪಕ್ಷ ಬಲಪಂಥೀಯ ಹಾಗೂ ಕೋಮುವಾದಿ ಪಕ್ಷ. ಇವರಿಂದ ಸಮಾಜದ ಒಗ್ಗಟ್ಟನ್ನು ಉಳಿಸಲು ಸಾಧ್ಯವಿಲ್ಲ. ಹೊಸ ಹೊಸ ರಕ್ತ ಕಾಂಗ್ರೆಸ್‌ನತ್ತ ಹರಿದು ಬರಬೇಕು. ಪಕ್ಷದ ವಿವಿಧ ವಿಭಾಗಗಳು ಈ ಕಾರ್ಯವನ್ನು ಮಾಡಬೇಕು ಎಂದು ಮನವಿ ಮಾಡುತ್ತೇನೆ. ಹೊಸ ಚಿಂತನೆ ಹಾಗೂ ಬದ್ಧತೆ ಕಾಂಗ್ರೆಸ್ ಪಕ್ಷಕ್ಕೆ ಬರಬೇಕು ಎಂದರು.

ಓದಿ: ಇಂದು ಸಂವಿಧಾನ, ಸ್ವಾತಂತ್ರ್ಯ ಹೋರಾಟಗಾರರ ಆಶಯಗಳ ಮೇಲೆ ದಾಳಿ ನಡೆಯುತ್ತಿದೆ: ಸುರ್ಜೇವಾಲಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.