ETV Bharat / city

ಶಾಲೆಯೊಳಗೆ ಹಿಜಾಬ್​ಗೆ ನಿಷೇಧ, ಹೊರಗಲ್ಲ: ಸುಪ್ರೀಂಕೋರ್ಟ್​ಗೆ ಸರ್ಕಾರದ ಮನವರಿಕೆ - ETv bharat kannada news

ಹಿಜಾಬ್​ ಧರಿಸುವುದನ್ನು ನಿಷೇಧಿಸಿದ್ದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ 9ನೇ ದಿನದ ವಿಚಾರಣೆ ಮುಗಿದಿದ್ದು, ನಾಳೆಗೆ ಮುಂದೂಡಲಾಗಿದೆ.

karnataka-ag-tells-supreme-court-on-hijab-row
ಸುಪ್ರೀಂಕೋರ್ಟ್​ಗೆ ಸರ್ಕಾರ ಮನವರಿಕೆ
author img

By

Published : Sep 21, 2022, 5:12 PM IST

ನವದೆಹಲಿ: ಧಾರ್ಮಿಕ ಆಚರಣೆಯ ಭಾಗ ಮತ್ತು ಹಕ್ಕಿನ ಆಧಾರದ ಮೇಲೆ ಹಿಜಾಬ್​ ಧರಿಸುವುದನ್ನು ಮುಸ್ಲಿಂ ವಿದ್ಯಾರ್ಥಿನಿಯರು ಕೇಳುತ್ತಿದ್ದಾರೆ. ಸರ್ಕಾರ ಶಾಲಾ ಕಾಲೇಜಿನ ತರಗತಿಯೊಳಗೆ ಧಾರ್ಮಿಕತೆಯನ್ನು ಪ್ರತಿನಿಧಿಸುವ ಸಮವಸ್ತ್ರವನ್ನು ನಿಷೇಧಿಸಿದೆ. ಕರ್ನಾಟಕ ಹೈಕೋರ್ಟ್​ ಕೂಡ ಇದೇ ತೀರ್ಪು ನೀಡಿದೆ. ಶಾಲೆಯ ಹೊರಭಾಗದಲ್ಲಿ ಹಿಜಾಬ್​ಗೆ ನಿರ್ಬಂಧ ವಿಧಿಸಿಲ್ಲ ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸುಪ್ರೀಂಕೋರ್ಟ್​ಗೆ ತಿಳಿಸಿದರು.

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿದ್ದ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ 9ನೇ ದಿನದ ವಿಚಾರಣೆ ನಡೆಯುತ್ತಿದ್ದು, ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಪ್ರಭುಲಿಂಗ ನಾವದಗಿ, ಹಿಜಾಬ್​ ಶಾಲೆಯೊಳಗೆ ನಿಷೇಧಿಸಲಾಗಿದೆ. ಹೊರಗೆ ಹಾಕಿಕೊಳ್ಳಲು ಯಾವುದೇ ತಕರಾರಿಲ್ಲ ಎಂದು ಕೋರ್ಟ್​ಗೆ ಮನವರಿಕೆ ಮಾಡಿಕೊಟ್ಟರು.

ಕುರಾನ್‌ನಲ್ಲಿ ಉಲ್ಲೇಖವಾಗಿರುವುದು ದೇವರ ವಾಕ್ಯವಾಗಿವೆ. ಆಚರಣೆ ಮಾಡುವುದು ಕಡ್ಡಾಯವಲ್ಲವೇ ಎಂದು ಕೋರ್ಟ್​, ಎಜಿಯನ್ನು ಪ್ರಶ್ನಿಸಿತು. ಕುರಾನ್​ನಲ್ಲಿ ಧಾರ್ಮಿಕ ವಿಧಿವಿಧಾನಗಳ ಬಗ್ಗೆ ಹೇಳಿದೆ. ಆದರೆ, ಪ್ರತಿಯೊಂದೂ ಅನಿವಾರ್ಯವಲ್ಲ. ದೇಶದಲ್ಲಿ ಎಲ್ಲದಕ್ಕೂ ಸಂಪೂರ್ಣ ಸ್ವಾತಂತ್ರ್ಯವಿಲ್ಲ. ಪ್ರತಿ ಸ್ವಾತಂತ್ರ್ಯದ ಮೇಲೂ ಕೆಲ ನಿರ್ಬಂಧಗಳಿವೆ ಎಂದು ನಾವದಗಿ ಉತ್ತರಿಸಿದರು.

ಕೋರ್ಟಲ್ಲಿ ಇರಾನ್​ ಗಲಾಟೆ ಪ್ರಸ್ತಾಪ: ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್​ ಅನ್ನು ನಿಷೇಧಿಸಲಾಗಿದೆ. ಆದರೆ, ವಿದೇಶದಲ್ಲಿ ಹಿಜಾಬ್​ ಕಡ್ಡಾಯ ಮಾಡಿದ್ದರ ವಿರುದ್ಧ ದೊಡ್ಡ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದರು. ಈ ವೇಳೆ ಕೋರ್ಟ್​ ಯಾವ ದೇಶ ಎಂದು ಪ್ರಶ್ನಿಸಿದಾಗ, ಇಸ್ರೇಲ್​ನಲ್ಲಿ ನಡೆದ ಗಲಾಟೆಯನ್ನು ವಿವರಿಸಿದರು.

ಕಟ್ಟರ್​ ಇಸ್ಲಾಮಿಕ್ ದೇಶವಾದ ಇಸ್ರೇಲ್​ನಲ್ಲಿ ಹಿಜಾಬ್​ ಕಡ್ಡಾಯ ಮಾಡಿದ್ದಕ್ಕೆ ಅಲ್ಲಿನ ಮಹಿಳೆಯರು ಸರ್ಕಾರದ ವಿರುದ್ಧವೇ ಹೋರಾಟ ಮಾಡುತ್ತಿದ್ದಾರೆ. ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಕುರಾನ್‌ನಲ್ಲಿ ಉಲ್ಲೇಖಿಸಿದ ಮಾತ್ರಕ್ಕೆ ಅತ್ಯಗತ್ಯ ಆಚರಣೆ ಎಂದು ಎಲ್ಲೂ ಹೇಳಿಲ್ಲ. ಇದೊಂದು ಅಭ್ಯಾಸ ಮಾತ್ರ ಎಂದು ಹೇಳಿದರು.

ವಾದ ಪ್ರತಿವಾದ ಆಲಿಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ನೇತೃತ್ವದ ಪೀಠ ಮೇಲ್ಮನವಿ ಅರ್ಜಿಗಳ ಮುಂದಿನ ವಿಚಾರಣೆಯನ್ನು ನಾಳೆಗೆ ಮುಂಡೂಡಿತು.

ಓದಿ: ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಮತಾಂತರ ನಿಷೇಧ ಕಾಯ್ದೆಗೆ ವಿಧಾನಸಭೆ ಅಂಗೀಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.