ETV Bharat / city

ಅನ್ಯಭಾಷಿಗರ ಕನ್ನಡ ಕಲಿಕೆಗೆ ವಿಶೇಷ ಅಭಿಯಾನ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನುಡಿ ಕಲಿಕೆ - ಅನ್ಯಭಾಷಿಕರಿಗೆ ಕನ್ನಡ ಕಲಿಸಲು ಕನ್ನಡ ನುಡಿ ಕಲಿಕೆ ಪಾಠಗಳ ಲಿಂಕ್‌

ಅನ್ಯಭಾಷಿಕರು ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ 'ಕನ್ನಡ ನುಡಿ ಕಲಿಕೆ ಪಾಠಗಳ' ಲಿಂಕ್‌ ಆರಂಭಿಸಲಾಗಿದ್ದು, ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸುನೀಲ್‌ ಕುಮಾರ್ ಚಾಲನೆ ನೀಡಿದ್ದಾರೆ.

kannada nudi kalike patagalu for non kannadigas in kannada abhivruddhi pradhikara
ಅನ್ಯಭಾಷಿಗರ ಕನ್ನಡ ಕಲಿಕೆಗೆ ವಿಶೇಷ ಅಭಿಯಾನ; ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನುಡಿ ಕಲಿಕೆ
author img

By

Published : Dec 1, 2021, 7:06 PM IST

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 'ಕನ್ನಡ ನುಡಿ ಕಲಿಕೆ ಪಾಠಗಳ' ಲಿಂಕ್ ಅನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್ ಇಂದು ಬಿಡುಗಡೆಗೊಳಿಸಿದ್ದಾರೆ.

ಈ ವೇಳೆ ಮಾತನಾಡಿದ ಸಚಿವರು, ಕನ್ನಡ ಭಾಷೆಯನ್ನು ಬೆಳೆಸುವ ಉದ್ದೇಶದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿಶೇಷ ಅಭಿಯಾನ ರೂಪಿಸಿದೆ. ಕನ್ನಡದ ಮೇಲೆ ಆಸಕ್ತಿ ಇರುವ ಅನ್ಯಭಾಷಿಕರಿಗೆ ಹಾಗೂ ಬೆಂಗಳೂರಿನಲ್ಲಿ ನೆಲೆಸಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಉದ್ದೇಶದಿಂದ ಕನ್ನಡ ನುಡಿ ಕಲಿಕೆ ಪಾಠಗಳು ಸಹಕಾರಿಯಾಗಲಿವೆ ಎಂದು ಹೇಳಿದರು.

ಕನ್ನಡ ನುಡಿ ಕಲಿಕೆ ಪಾಠಗಳ ಮೂಲಕ ರಾಜ್ಯದಲ್ಲಿ ನೆಲೆಸಿರುವ ಅನ್ಯಭಾಷಿಕರು ಕನ್ನಡವನ್ನು ಕಲಿತು ಬಳಸುವಂತಾಗಬೇಕು. ಆ ಮೂಲಕ ಕನ್ನಡದ ಕಂಪು ಜಗತ್ತಿನಾದ್ಯಂತ ಪಸರಿಸುವಂತಾಗಲಿ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯ ಯಶಸ್ವಿಯಾಗಲಿ ಎಂದು ಸಚಿವರು ಹಾರೈಸಿದರು.

ಕನ್ನಡ ನುಡಿ ಕಲಿಕೆ ಪಾಠಗಳು ಸದ್ಯದಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಅಪ್ಲೋಡ್​ ಮಾಡಲಾಗುವುದು. ಮೊದಲಿಗೆ ಪಾಠ 1 ಮತ್ತು ಪಾಠ 2 ಅನ್ನು ಅಪ್ಲೋಡ್​ ಮಾಡಲಾಗುತ್ತೆ. ಮುಂದಿನ ದಿನಗಳಲ್ಲಿ ಉಳಿದ ಪಾಠಗಳನ್ನು ಸೇರ್ಪಡೆ ಮಾಡಲಾಗುವುದು ಎಂದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ, ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಕನ್ನಡೇತರರಿಗೆ ಕನ್ನಡ ಕಲಿಕೆ, ಆನ್​ಲೈನ್​ ಪರೀಕ್ಷೆಗೆ ಪ್ರಾಧಿಕಾರದ ಸಿದ್ಧತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.