ETV Bharat / city

COVID ಮಹಿಮೆ: ಬೆಂಗಳೂರಲ್ಲಿ 3 ಲಕ್ಷ ಮಾತ್ರೆ, ಮಾಸ್ಕ್​ಗಳಿಂದ ದೇವಾಲಯ ಅಲಂಕಾರ... - ಮಾತ್ರೆಗಳಿಂದ ಅಲಂಕಾರ

ಹಣ್ಣು ಹಂಪಲುಗಳಿಂದ ದೇವರಿಗೆ ಅಲಂಕಾರ ಮಾಡುವುದು ಸರ್ವೇ ಸಾಮಾನ್ಯ. ಆದ್ರೆ ಬೆಂಗಳೂರು ನಗರದ ಜೆ.ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆಗಳನ್ನು ಬಳಸಿ ವಿಶೇಷ ಅಲಂಕಾರವನ್ನು ಮಾಡಲಾಗಿದೆ.

jp-nagar-ganesh-temple-used-tablet-for-decorate-lord-ganesh
ಸತ್ಯ ಸಾಯಿ ಗಣಪತಿ ದೇಗುಲ
author img

By

Published : Jul 23, 2021, 12:44 AM IST

ಬೆಂಗಳೂರು: ಕೊರೊನಾ ಸಾಂಕ್ರಾಮಿಕ ರೋಗ ಎಲ್ಲರನ್ನು ಹೈರಾಣಾಗಿಸಿದೆ. ಮೂರನೇ ಅಲೆಗೆ ಜನರನ್ನು ಸಿದ್ಧಗೊಳಿಸಬೇಕು ಹಾಗೂ ಗುರುಪೂರ್ಣಿಮೆಯನ್ನು ವಿಶೇಷವಾಗಿ ಆಚರಿಸಬೇಕು ಎನ್ನುವ ಹಿನ್ನೆಲೆಯಲ್ಲಿ ಜೆ.ಪಿ ನಗರದ ಶ್ರೀ ಸತ್ಯ ಸಾಯಿ ಗಣಪತಿ ದೇವಸ್ಥಾನದಲ್ಲಿ 3 ಲಕ್ಷ ಮಾತ್ರೆಗಳನ್ನು ಬಳಸಿ ವಿಶೇಷ ಅಲಂಕಾರ ಮಾಡಲಾಯಿತು.

ಕೋವಿಡ್​​ ನಿವಾರಣೆಗೆ ಪ್ರಮುಖವಾಗಿ ಬಳಕೆ ಆಗುವ ಮಾಸ್ಕ್‌, ಪ್ಯಾರಾಸಿಟಮಲ್‌, ವಿಟಮಿನ್‌-ಸಿ, ಆಲ್ಕಾಫ್‌, ಬಿ ಕಾಂಫ್ಲೆಕ್ಸ್‌ ಮಾತ್ರೆಗಳನ್ನೇ ಬಳಸಿಕೊಂಡು ಶ್ರೀ ಸತ್ಯ ಸಾಯಿ ಗಣಪತಿಗೆ ಅಲಂಕಾರ ಮಾಡಲಾಗಿತ್ತು. ಸಾಮಾನ್ಯವಾಗಿ ದೇವಸ್ಥಾನದಲ್ಲಿ ದೇವರಿಗೆ ಹಾಗೂ ದೇಗುಲವನ್ನ ಫಲ ಪುಷ್ಪಗಳಿಂದ ಅಲಂಕರಿಸಲಾಗುತ್ತೆ‌. ಆದ್ರೆ ಅಲಂಕಾರಕ್ಕೆ ಬಳಸಿದ ಸಾಮಗ್ರಿಗಳನ್ನು ಮತ್ತೊಮ್ಮೆ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಪಾರ ವೆಚ್ಚದಲ್ಲಿ ಮಾಡುವ ಅಲಂಕಾರ ಜನರಿಗೆ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ಕೋವಿಡ್ ವಿರುದ್ಧ ಹೋರಾಟದಲ್ಲಿ ಪ್ರಮುಖವಾಗಿ ಬಳಸಲಾಗುವ ವಸ್ತುಗಳನ್ನ ಬಳಸಿ ದೇವಸ್ಥಾನವನ್ನ ಅಲಂಕರಿಸಲಾಗಿದೆ. ಇನ್ನು ಜುಲೈ 24 ರಿಂದ ಒಂದು ವಾರದ ತನಕ ಈ ಅಲಂಕಾರ ಇರಲಿದ್ದು, ನಂತರ ಈ ಸಾಮಾಗ್ರಿಗಳನ್ನ ಬಡಜನರಿಗೆ ಉಚಿತವಾಗಿ ಹಂಚಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ.

ಸತ್ಯ ಸಾಯಿ ಗಣಪತಿ ದೇಗುಲದಲ್ಲಿ 3 ಲಕ್ಷ ಮಾತ್ರೆಗಳಿಂದ ವಿಶೇಷ ಅಲಂಕಾರ

ಅಲಂಕಾರದಲ್ಲಿ ಬಳಸಲಾಗಿರುವ ವಸ್ತುಗಳು

  • 3,00,000 (3 ಲಕ್ಷ ಮಾತ್ರೆಗಳು)
  • ಡೋಲೋ 650
  • ವಿಟಮಿನ್‌ ಸಿ ಮಾತ್ರೆಗಳು
  • ಕಾಫ್‌ಸಿಲ್‌ ಮಾತ್ರೆಗಳು
  • ಬಿ ಕಾಂಪ್ಲೆಕ್ಸ್‌ ಮಾತ್ರೆಗಳು
  • ಪ್ಯಾರಸಿಟಮಲ್‌
  • ಈಸಿಬ್ರೀಥ್‌
  • 2 ಸಾವಿರಕ್ಕೂ ಹೆಚ್ಚು ಸ್ಯಾನಿಟೈಸರ್‌ ಮಾತ್ರೆಗಳು
  • 10 ಸಾವಿರ 8 ವಿವಿಧ ಬಣ್ಣದ ಮಾಸ್ಕ್‌ಗಳು
  • 3 ಸಾವಿರಕ್ಕೂ ಹೆಚ್ಚು ಮೆಡಿಮಿಕ್ಸ್‌ ಹಾಗೂ ಡೆಟಾಲ್‌ ಸೋಪುಗಳು
  • 500ಕ್ಕೂ ಹೆಚ್ಚು ಟೆನ್ನಿಸ್‌ ಬಾಲ್‌
  • ಆಹಾರ ಸಾಮಗ್ರಿಗಳು

ಒಟ್ಟಾರೆಯಾಗಿ ಮಹಾಮಾರಿ ಸಂಪೂರ್ಣವಾಗಿ ತೊಲಗಲೆಂದು ದೇವರ ಮೊರೆ ಹೋಗಿರುವ ಭಕ್ತರು ವಿಶೇಷ ಅಲಂಕಾರ ಮಾಡಿದ್ದು ಗಮನ ಸೆಳೆಯಿತು. ಅಲ್ಲದೆ ಅವುಗಳನ್ನು ಬಡವರಿಗೆ ಉಚಿತವಾಗಿ ಹಂಚುವ ನಿರ್ಧಾರ ಶ್ಲಾಘನೀಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.