ಬೆಂಗಳೂರು : ರೈತರಿಗೆ ನ್ಯಾಯ ಒದಗಿಸಬೇಕೆಂದು ಪಟ್ಟುಹಿಡಿದ ಜೆಡಿಎಸ್ ಸದಸ್ಯರು ವಿಧಾನ ಪರಿಷತ್ ಕಲಾಪದಲ್ಲಿಂದು ಧರಣಿ ನಡೆಸಿದರು. ಇದೇ ವಿಚಾರವಾಗಿ ಆಡಳಿತ ಪಕ್ಷ, ಪ್ರತಿಪಕ್ಷ ಸದಸ್ಯರ ಜೊತೆ ಸಭಾಪತಿಗಳೂ ಮನವೊಲಿಸುವ ಪ್ರಯತ್ನ ನಡೆಸಿದರೂ ಫಲಕೊಡಲಿಲ್ಲ.
ಹತ್ತು ನಿಮಿಷಗಳ ವಿರಾಮದ ನಂತರ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಜೆಡಿಎಸ್ ಸದಸ್ಯರು ಮತ್ತೆ ಬಾವಿಗಿಳಿದು ಧರಣಿಗೆ ಮುಂದಾದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ನಾಳೆ ಬೆಳಗ್ಗೆ 10.30ಕ್ಕೆ ಮುಂದೂಡಿದರು.
ಇದಕ್ಕೂ ಮುನ್ನ ಪರಿಷತ್ ಕಲಾಪದಲ್ಲಿ ಮರಿತಿಬ್ಬೇಗೌಡರ ಜತೆ ಇತರೆ ಜೆಡಿಎಸ್ ಸದಸ್ಯರೂ ಬಾವಿಗಿಳಿದು ಧರಣಿ ಮುಂದುವರಿಸಿದರು. ಈ ವೇಳೆ ಉತ್ತರಿಸಿದ ಸಚಿವ ಬೈರತಿ ಬಸವರಾಜ ಅವರು, ಆದಷ್ಟು ಬೇಗ ಸಭೆ ಕರೆದು ನಾವು ಚರ್ಚಿಸುತ್ತೇನೆ.
ಧರಣಿ ಹಿಂಪಡೆಯಿರಿ ಎಂದು ಮನವಿ ಮಾಡಿದರು. ಧರಣಿ ಮುಂದುವರಿದಾಗ ಆಡಳಿತ ಪಕ್ಷದ ನಾಯಕರು ಧರಣಿ ಮುಂದುವರಿಸಿದರು. ಸದನ ಸಮರ್ಪಕವಾಗಿಲ್ಲದ ಹಿನ್ನೆಲೆ ಸಭಾಪತಿಗಳು ಕಲಾಪವನ್ನು ನಾಳೆಗೆ ಮುಂದೂಡುವ ನಿರ್ಧಾರಕ್ಕೆ ಬಂದರು.