ETV Bharat / city

ಏಪ್ರಿಲ್ 16 ರಿಂದ ಜನತಾ ಜಲಧಾರೆ ಗಂಗಾ ರಥಯಾತ್ರೆ ಆರಂಭ: 15 ಸ್ಥಳಗಳಿಂದ ಜಲಸಂಗ್ರಹ - ಜೆಡಿಎಸ್​ನಿಂದ ಜನತಾ ಜಲಧಾರೆ ಗಂಗಾ ರಥಯಾತ್ರೆ

ಜೆಡಿಎಸ್​ನಿಂದ ನಡೆಸಲಾಗುವ ಜನತಾ ಜಲಧಾರೆ ರಥಯಾತ್ರೆಯು ಇದೇ 16 ರಿಂದ ಶುರುವಾಗಲಿದೆ.

ganga-yatra
ಗಂಗಾ ರಥಯಾತ್ರೆ
author img

By

Published : Apr 13, 2022, 8:32 PM IST

ಬೆಂಗಳೂರು: ಕಳೆದ 75 ವರ್ಷಗಳಿಂದ ನೀರಾವರಿ ಕ್ಷೇತ್ರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಧ್ಯೇಯದೊಂದಿಗೆ ಜೆಡಿಎಸ್‍ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ 'ಜನತಾ ಜಲಧಾರೆ' ಗಂಗಾ ರಥಯಾತ್ರೆ ಏಪ್ರಿಲ್ 16 ರಿಂದ ಆರಂಭವಾಗಲಿದೆ. ರಾಜ್ಯದ 15 ಸ್ಥಳಗಳಲ್ಲಿ ಜಲಸಂಗ್ರಹವನ್ನು ಮಾಡಲಾಗುತ್ತದೆ. ಏಪ್ರಿಲ್ 16 ರಂದು ಹೊರಡುವ ರಥಯಾತ್ರೆಯಲ್ಲಿ ಜಲಸಂಗ್ರಹ ಮಾಡಲಿರುವ ಪಟ್ಟಿ ಈ ಕೆಳಕಂಡಂತೆ ಇದೆ.

ಕೆಆರ್​ಎಸ್​ನಲ್ಲಿ ಕಾವೇರಿ ನದಿಯಿಂದ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಆಲಮಟ್ಟಿ ಜಲಾಶಯದ ಕೃಷ್ಣಾ ನದಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ತಲಕಾವೇರಿಯಲ್ಲಿ ಜೆಡಿಎಸ್​ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‍ ಕುಮಾರಸ್ವಾಮಿ, ಶ್ರೀರಾಮದೇವರ ಕಟ್ಟೆಯ ಹೇಮಾವತಿ ನದಿಯಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಎತ್ತಿನಹೊಳೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ, ಮೇಕೆದಾಟು ಮತ್ತು ಹಾರೋಬೆಲೆಯಲ್ಲಿ ಶಾಸಕರಾದ ಅನಿತಾ ಕುಮಾರಸ್ವಾಮಿ, ಎ.ಮಂಜುನಾಥ್, ಕಣಕುಂಬಿಯ ಮಹದಾಯಿ ನದಿಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಮಾಂಜ್ರಾದಲ್ಲಿ ಮಾಜಿ ಸಚಿವ, ಜೆಡಿಎಸ್‍ ಉಪ ನಾಯಕ ಬಂಡೆಪ್ಪ ಕಾಶೆಂಪೂರ್ ಅವರು ಜಲ ಸಂಗ್ರಹ ಮಾಡಲಿದ್ದಾರೆ.

ನೀರಾವರಿ ಯೋಜನೆ ಬಗ್ಗೆ ಮಾಹಿತಿ: ಉಳಿದಂತೆ, ನಿಗದಿಪಡಿಸಲಾದ ಸ್ಥಳಗಳಲ್ಲಿ ಪಕ್ಷದ ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಸಂಸದರು, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಆಕಾಂಕ್ಷಿಗಳು ಸೇರಿದಂತೆ ಪಕ್ಷದ ಮುಖಂಡರಿಗೆ ಜಲಸಂಗ್ರಹದ ಜವಾಬ್ದಾರಿಯನ್ನು ವಹಿಸಲಾಗಿದೆ. 15 ನದಿಗಳಿಂದ ಏಕಕಾಲದಲ್ಲಿ ಪವಿತ್ರ ಜಲವನ್ನು ಸಂಗ್ರಹ ಮಾಡಲಾಗುತ್ತದೆ. ನದಿನೀರಿನ ಸದ್ಬಳಕೆ, ನೀರಾವರಿ ಯೋಜನೆಗಳ ವೇಗ ಹೆಚ್ಚಿಸುವುದು, ಪ್ರತಿ ಜಿಲ್ಲೆಯಲ್ಲೂ ನೀರಿನ ಸಮಾನತೆ ಸೇರಿದಂತೆ ವಿವಿಧ ಆಶಯಗಳನ್ನು ಜನತಾ ಜಲಧಾರೆ ಹೊಂದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜನತಾ ಜಲಧಾರೆ ರಥ ಪ್ರವಾಸ ಮಾಡುವ ಮಾರ್ಗದಲ್ಲಿ ರಾಜ್ಯದ ನೀರಾವರಿ ಯೋಜನೆಗಳ ವಿಚಾರದಲ್ಲಿ ಸರ್ಕಾರಗಳ ವೈಫಲ್ಯ ಹಾಗೂ ಜೆಡಿಎಸ್ ಅಧಿಕಾರಕ್ಕೆ ಬಂದರೆ ನೀರಾವರಿ ಯೋಜನೆಗಳ ಅನುಷ್ಠಾನ ಮಾಡುವ ಭರವಸೆಯೊಂದಿಗೆ ಪ್ರಚಾರ ಮಾಡಲಾಗುತ್ತದೆ. ವಿಶೇಷವಾಗಿ ವಿನ್ಯಾಸಗೊಳಿಸಿರುವ 15 ಗಂಗಾರಥಗಳು 31 ಜಿಲ್ಲೆಗಳ 184 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ನೀರಾವರಿ ಯೋಜನೆಗಳ ಬಗ್ಗೆ ಜನಜಾಗೃತಿ ಮೂಡಿಸಲಿವೆ. ಹ್ಯಾಂಡ್ ಬಿಲ್​ಗಳನ್ನು ನೀಡಲಾಗುತ್ತದೆ.

ಮೇ 8 ರಂದು ಸಮಾವೇಶ: 15 ನದಿಗಳಿಂದ ಕಳಶಗಳ ಮೂಲಕ ಜಲವನ್ನು ಸಂಗ್ರಹಿಸಿ ಮೆರವಣಿಗೆ ಮೂಲಕ ಮೇ ಮೊದಲ ವಾರ ಬೆಂಗಳೂರಿಗೆ ತರಲಾಗುತ್ತದೆ. ಈ ರೀತಿ ತಂದ ಜಲವನ್ನು ಬ್ರಹ್ಮಕಳಶದಲ್ಲಿ ಸಂಗ್ರಹಿಸಿ ಜೆಡಿಎಸ್​ನ ಪ್ರಧಾನ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಬೆಳಗ್ಗೆ, ಸಂಜೆ ಗಂಗಾಪೂಜೆ ಮಾಡಲಾಗುತ್ತದೆ. ಅರಮನೆ ಮೈದಾನದಲ್ಲಿ ಮೇ 8 ರಂದು ದೊಡ್ಡ ಸಮಾವೇಶ ಮಾಡಿ ನೀರಾವರಿ ಯೋಜನೆಗಳ ಜಾರಿ ಬಗ್ಗೆ ಸಂಕಲ್ಪ ಮಾಡಲಾಗುತ್ತದೆ.

ಇದನ್ನೂ ಓದಿ: ಸಿದ್ದರಾಮಯ್ಯ ಆಡಳಿತದಲ್ಲಿ ನರಹಂತಕ ಸರ್ಕಾರ ಇತ್ತು: ನಳಿನ್ ಕುಮಾರ್ ಕಟೀಲ್ ಆರೋಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.