ETV Bharat / city

ಜಾನಪದ ಜಾತ್ರೆ: ಟೆನ್ಶನ್​​ ಮರೆತು ಬಿಎಸ್​​ವೈ ಎಂಜಾಯ್! - Janapada jatre Ceremony in bangalore

ರಾಜ್ಯಮಟ್ಟದ ಜಾನಪದ ಜಾತ್ರೆಗೆ ತೆರೆ. ಟೆನ್ಶನ್ ಮರೆತು ಕಾರ್ಯಕ್ರಮ ಎಂಜಾಯ್ ಮಾಡಿದ್ರು ಸಿಎಂ. 200 ಕ್ಕೂ ಹೆಚ್ಚು ಕಲಾತಂಡಗಳಿಂದ ಕಲೆ ಪ್ರದರ್ಶನ.

Janapada jatre Ceremony
ಜಾನಪದ ಸಮಾರೋಪ ಸಮಾರಂಭ
author img

By

Published : Jan 16, 2020, 5:23 AM IST

Updated : Jan 16, 2020, 7:03 AM IST

ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಬೆಂಗಳೂರಿಗರಿಗೆ ಹಳ್ಳಿ ಸೊಬಗನ್ನು ಪರಿಚಯಿಸಲು ಪದ್ಮನಾಭನಗರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಜಾನಪದ ಜಾತ್ರೆಗೆ ಬುಧವಾರ ತೆರೆ ಬಿತ್ತು.

ಬುಧವಾರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ಸತೀಶ್ ರೆಡ್ಡಿ ಎಂ.ಕೃಷ್ಣಪ್ಪ, ಸುಧಾಕರ್, ಎಸ್.ಟಿ.ಸೋಮಶೇಖರ್, ಪ್ರೀತಂಗೌಡ ಅವರು ಉಪಸ್ಥಿತರಿದ್ದರು.

ಜಾನಪದ ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭಕ್ಕೂ ಮುನ್ನ ತೆರೆದ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಆಗಮಿದ ಬಿ.ಎಸ್.ಯಡಿಯೂರಪ್ಪ ಅವರು ರಿಲ್ಯಾಕ್ಸ್​ ಮೂಡ್​​ನಲ್ಲಿ ಇದ್ದದು ಕಂಡುಬಂತು. ಅಲ್ಲದೆ, ಬಿಎಸ್​ವೈ ಕಾರ್ಯಕ್ರಮದಲ್ಲಿ ಬಹಳ ಸಂತೋಷದಿಂದ ಇದ್ದರು.

ಜಾನಪದ ಜಾತ್ರೆ ಸಮಾರೋಪದಲ್ಲಿ ಸಿಎಂ ಮಾತು

ಕಾರ್ಯಕ್ರಮದಲ್ಲಿ 200ಕ್ಕೂ ಹೆಚ್ಚು ಕಲಾತಂಡಗಳು ಜನರ ಮನ ತಣಿಸಿದವು. ಡೊಳ್ಳು ಕುಣಿತ, ತಮಟೆ, ನಗಾರಿ, ಸಿದ್ಧಿಕುಣಿತ, ಗೀಗಿ ಪದ, ರೇಣುಕಾ ಯಲ್ಲಮ್ಮ ದೇವಿ ಆರಾಧನೆ, ಬುಡಕಟ್ಟು ಜನಾಂಗದವರ ನೃತ್ಯ, ಕಂಸಾಳೆ, ಹೆಣ್ಣು ಮಕ್ಕಳಿಂದ ವಿಶೇಷ ವಾದ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಲಾ ತಂಡಗಳಿಂದ ಕಲೆ ಪ್ರದರ್ಶನ ನಡೆಯಿತು.

ರಾಜ್ಯದ 15 ಕಡೆಗಳಲ್ಲಿ ಜಾನಪದ ಜಾತ್ರೆಯನ್ನು ಆಯೋಜಿಸಲಾಗಿದೆ. ಈ ಹಿಂದೆ ಜಾನಪದ ಜಾತ್ರೆ ನಿಂತು ಹೋಗಿತ್ತು. ಗ್ರಾಮೀಣ ಭಾಗದ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಈ ಜಾತ್ರೆಯನ್ನು ಪುನರ್​ ಆರಂಭಿಸಲಾಗಿದೆ. ಇದರ ಜೊತೆಗೆ ಹಿರಿಯ ಜಾನಪದ ಕಲಾವಿದರಿಗೆ ಮಾಶಾಸನ ನೀಡುವುದು ಮತ್ತು ಯುವಕಲಾವಿದರಿಗೆ ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.

Intro:Janapada jatreBody:ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಲಿಕಾನ್ ಸಿಟಿ ಮಂದಿಗೆ ಹಳ್ಳಿ ಸೊಬಗನ್ನ ಪರಿಚಯಿಸಲು, ಪದ್ಮನಾಭನಗರದಲ್ಲಿ ರಾಜ್ಯಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆರಿಸಲಾಗಿತ್ತು.

ಎರಡು ದಿನಗಳು ನಡೆದ ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಶಾಸಕರಾದ ಸತೀಶ್ ರೆಡ್ಡಿ ಎಂ ಕೃಷ್ಣಪ್ಪ, ಸುಧಾಕರ್ ಎಸ್ ಟಿ ಸೋಮಶೇಖರ್ ಪ್ರೀತಂಗೌಡ ಉಪಸ್ಥಿತರಿದ್ದರು,ಉದ್ಘಾಟನೆಗೂ ಮುನ್ನ ತೆರದ ಎತ್ತಿನ ಗಾಡಿಯಲ್ಲಿ ಮೆರವಣಿಗೆ ಮೂಲಕ ಆಗಮಿಸಲಿರುವ ಸಿಎಂ ಬಿಎಸ್ ಯಡಿಯೂರಪ್ಪ ರಿಲ್ಯಾಕ್ಸ್ ಮೂಡ್ ನಲ್ಲಿ ಇದ್ದುದು ಕಂಡುಬಂತು, ಒಂದು ಕಾರ್ಯಕ್ರಮದ ಹೊಣೆಯನ್ನು ಸಚಿವ ಆರ್ ಅಶೋಕ್ ವಹಿಸಿಕೊಂಡು ತಮ್ಮ ಕ್ಷೇತ್ರದಲ್ಲಿ ಆಲಿಸಿದ್ದು ಎರಡು ದಿನಗಳಲ್ಲಿ ಒಟ್ಟು ಇನ್ನೂರಕ್ಕೂ ಹೆಚ್ಚು ಕಲಾತಂಡಗಳು ಜನರ ಮನ ತಣಿಸಿದವು, ಡೊಳ್ಳು ಕುಣಿತ, ತಮಟೆ, ನಗಾರಿ ಮುಂತಾದ ಸಾಂಸ್ಕೃತಿಕ ತಂಡಗಳಿಂದ ಕಲೆ ಪ್ರದರ್ಶನ ಸಾಮಾನ್ಯವಾಗಿ ನೋಡಿದ್ದ ಬೆಂಗಳೂರಿನ ಮಂದಿಗೆ, ಸಿದ್ಧಿ ಕುಣಿತ, ಗೀಗಿ ಪದ, ರೇಣುಕಾ ಎಲ್ಲಮ್ಮ ದೇವಿ ಆರಾಧನೆ, ಬುಡಕಟ್ಟು ಜನಾಂಗದವರ ನೃತ್ಯ, ಕಂಸಾಳೆ, ಹೆಣ್ಣು ಮಕ್ಕಳಿಂದ ವಿಶೇಷ ವಾದ್ಯಗಳು ಹೊಸ ಅನುಭವ ನೀಡಿದವು.

ಇಂದು ರಾಜ್ಯದ ೧೫ ಕಡೆಗಳಲ್ಲಿ ಸರ್ಕಾರದ ಕನ್ನಡ ಮತ್ತು‌ ಸಂಸ್ಕತಿ ಇಲಾಖೆಯಿಂದ ಜಾನಪದ ಜಾತ್ರೆ ಆಯೋಜಿಸಿದ್ದು,ಈ ಹಿಂದೆ ನಿಂತು ಹೋಗಿದ್ದ ಜಾನಪದ ಜಾತ್ರೆಯನ್ನು ಪುನರ್ ಆರಂಭಿಸಲಾಗಿದೆ, ಇದರಿಂದ ಸಾಕಷ್ಟು ಗ್ರಾಮೀಣ ಭಾಗದ ಕಲಾವಿದರಿಗೆ ನೆರವಾಗುವುದರ ಜೊತೆಗೆ ಒಂದು ವೇದಿಕೆ ಕಲ್ಪಿಸಿಕೊಡುವ ಉದ್ದೇಶವಿತ್ತು, ಇದರ ಜೊತೆಗೆ ಹಿರಿಯ ಜನಪದ ಕಲಾವಿದರಿಗೆ ಮಾಶಾಸನ ನೀಡುವುದು ಮತ್ತು ಯುವಕಲಾವಿದರಿಗೆ ಆರ್ಥಿಕ ನೆರವು ನೀಡುವುದಾಗಿತ್ತು, ಒಟ್ನಲ್ಲಿ ಒಂದು ಕಾರ್ಯಕ್ರಮದಲ್ಲಿ ಸಂಪುಟ ಸಂಕಟದ ನಡುವೆಯು ಜಾನಪದ ಜಾತ್ರೆಯಲ್ಲಿ ರಿಲ್ಯಾಕ್ಸ್ ಮೂಡ್ ಸಿಎಂ ಯಡಿಯೂರಪ್ಪ ಖುಷಿಖುಷಿಯಾಗಿ ಕಾಲ ಕಳೆದರು.Conclusion:Visuals from camera (live streamed)
Last Updated : Jan 16, 2020, 7:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.