ಬೆಂಗಳೂರು: ಒಪ್ಟೊ ಸರ್ಕ್ಯೂಟ್ ಕಂಪೆನಿ ಎಸ್ಬಿಐ ಹಾಗು ಸಿಂಗಾಪುರದ ಡಿಬಿಎಸ್ ಬ್ಯಾಂಕ್ನಿಂದ 500 ಕೋಟಿ ರೂಗೂ ಅಧಿಕ ಮೊತ್ತದ ಸಾಲ ಪಡೆದು ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಗಳ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.
ಸಿಬಿಐ ಮಾಹಿತಿ ಮೇರೆಗೆ ಐಟಿ ಇಲಾಖೆ ಅಧಿಕಾರಿಗಳು ಪ್ರಕರಣದಲ್ಲಿ ಹೆಸರಿಸಲಾದ ಆರೋಪಿಗಳಾದ ವಿನೋದ್ ರಾಮ್ನಾಣಿ, ಉಷಾ ರಾಮ್ನಾಣಿ, ಜೋಯಶ್ ಪಟೇಲ್ ಹಾಗು ಥಾಮಸ್ ಸೇರಿ 6 ಮಂದಿಯ ಮನೆ ಮೇಲೆ ದಾಳಿ ನಡೆಸಿದ್ದು ದಾಖಲೆಗಳ ಶೋಧಕಾರ್ಯ ನಡೆಸುತ್ತಿದೆ.