ETV Bharat / city

ಉದ್ಯಮಿ ಸಿದ್ಧಾರ್ಥ್​ಗೆ ಕಿರುಕುಳ ಕೊಟ್ಟಿಲ್ಲ: ಐಟಿ ಸ್ಪಷ್ಟನೆ

author img

By

Published : Jul 30, 2019, 5:56 PM IST

ಐಟಿ ಅಧಿಕಾರಿಗಳ ಕಿರುಕುಳದಿಂದಲೇ ಸಿದ್ಧಾರ್ಥ್​ ನಾಪತ್ತೆಯಾಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಆದಾಯ ತೆರಿಗೆ ಇಲಾಖೆ ಸ್ಫಷ್ಟನೆ ಕೊಟ್ಟಿದೆ.

IT officials

ಬೆಂಗಳೂರು: ನಾಪತ್ತೆಯಾಗಿರುವ ಉದ್ಯಮಿ ಸಿದ್ಧಾರ್ಥ್​ ಮನೆ, ಕಂಪನಿ ಮೇಲೆ ದಾಳಿ ನಡೆಸಿದ ವೇಳೆ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗಿದೆ. ಆದರೆ ಅವರಿಗೆ ಯಾವುದೇ ತೊಂದರೆ ಕೊಟ್ಟಿಲ್ಲ ಎಂದು ಐಟಿ ಮೂಲಗಳು ಸ್ಪಷ್ಟಪಡಿಸಿವೆ.

ಐಟಿ ಅಧಿಕಾರಿಗಳ ಕಿರುಕುಳದಿಂದಲೇ ಸಿದ್ಧಾರ್ಥ್​ ನಾಪತ್ತೆಯಾಗಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಆದಾಯ ತೆರಿಗೆ ಇಲಾಖೆ ಮೂಲಗಳು, ಮೈಂಡ್ ಟ್ರೀ ಕಂಪನಿ ಷೇರ್ ಡೀಲ್​​ನಲ್ಲೂ ಸಿದ್ಧಾರ್ಥ್​​ ಅವರಿಗೆ ತೊಂದರೆ ಕೊಟ್ಟಿಲ್ಲ. ಅವರ ಮನವಿಯಂತೆ ಷೇರು ರಿಲೀಸ್ ಮಾಡಿದ್ವಿ, ಆ ನಂತರ ಸಿದ್ದಾರ್ಥ್​ ತಮ್ಮಿಚ್ಚೆ ಯಂತೆ ಷೇರು ಮಾರಾಟ ಮಾಡಿದ್ದಾರೆ ಎಂದಿದೆ.

'ಸಹಿ ಸಿದ್ಧಾರ್ಥ್​ ಅವರದ್ದಲ್ಲ':

ಸಿದ್ಧಾರ್ಥ್​ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿ ಮಾಡಲಾದ ಆರೋಪಗಳು ನಿರಾಧಾರವಾಗಿವೆ. ಕಾಫಿ ಡೇ ಕಂಪನಿ ಷೇರುಗಳ ವಿಚಾರದಲ್ಲೂ ಅವರಿಗೆ ತೊಂದರೆ ಕೊಟ್ಟಿಲ್ಲ.
ಸಿದ್ದಾರ್ಥ್ ಹೆಸರಿನಲ್ಲಿ ಸಿಕ್ಕಿರುವ ವಿದಾಯ ಪತ್ರ ಶುದ್ಧಸುಳ್ಳು. ಕಂಪೆನಿ ವರದಿಗಳಲ್ಲಿ ಸಿದ್ದಾರ್ಥ್​​ ಸಹಿ ನಮೂನೆಯೇ ಬೇರೆಯಾಗಿದೆ. ಆದರೆ ಸಿಕ್ಕಿರುವ ವಿದಾಯ ಪತ್ರದಲ್ಲಿನ ಸಹಿಯೇ ಬೇರೆಯಾಗಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಸಿದ್ಧಾರ್ಥ್ ಮನೆ, ಕಂಪೆನಿ ಮೇಲೆ ಐಟಿ ರೇಡ್ ಆದಾಗ 480.13 ಕೋಟಿ ರೂ ಅಕ್ರಮ ಹಣ ಪತ್ತೆಯಾಗಿತ್ತು. ಈ ಹಣಕ್ಕೆ ತೆರಿಗೆ ಪಾವತಿಸದ ಕಾರಣ ಅಘೋಷಿತ ಹಣ ಎಂದು ಐಟಿ ನೋಟೀಸ್ ನೀಡಿತ್ತು. ಆ ನಂತರವೂ ಸಿದ್ಧಾರ್ಥ್ 480.13 ಕೋಟಿ ರೂಗಳಿಗೆ ಲೆಕ್ಕ ಕೊಟ್ಟಿರಲಿಲ್ಲ ಎಂದು ವಿವರಿಸಿದ್ದಾರೆ.

Intro:Body:

1 siddarth IT officials.txt   

close

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.