ಬೆಂಗಳೂರು : ಹೈಕೋರ್ಟ್ ಕಲಾಪಗಳನ್ನು ಯ್ಯೂಟ್ಯೂಬ್ನಲ್ಲಿ ಪ್ರಸಾರ ಮಾಡುವುದು ಸೇರಿದಂತೆ ನ್ಯಾಯಾಲಯದ ಲೈವ್ ಸ್ಟ್ರೀಮಿಂಗ್, ಆನ್ಲೈನ್ ಕಲಾಪ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳನ್ನು ಜಾರಿಗೊಳಿಸುವ ಸಂಬಂಧ ಗೆಜೆಟ್ ಪ್ರಕಟಣೆ ಹೊರಡಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಇ-ಫೈಲಿಂಗ್ ಮತ್ತು ಲೈವ್ ಸ್ಟ್ರೀಮಿಂಗ್ಗೆ ಸಂಬಂಧಿಸಿದಂತೆ ವಕೀಲ ದಿಲ್ರಾಜ್ ರೋಹಿತ್ ಸೀಕ್ವೈರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.
ಓದಿ: ಕರಾವಳಿ ಊಟ, ಪಬ್ಬಾಸ್ನ ಐಸ್ ಕ್ರೀಂ ಬಲು ಇಷ್ಟ- ಮಂಗಳೂರಿನಲ್ಲಿ ನಟಿ ರಚಿತಾರಾಮ್
ಲೈವ್ ಸ್ಟ್ರೀಮಿಂಗ್ ಮತ್ತು ಕಲಾಪದ ಪ್ರಕ್ರಿಯೆ ರೆಕಾರ್ಡಿಂಗ್ ನಿಯಮಗಳಿಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಆದ್ದರಿಂದ ನಿಯಮಗಳನ್ನು ಹೈಕೋರ್ಟ್ಗೆ ತಿಳಿಸಿದ ದಿನವನ್ನು ಉಲ್ಲೇಖಿಸಿ ಸರ್ಕಾರ ಗೆಜೆಟ್ನಲ್ಲಿ ಪ್ರಕಟಿಸಬೇಕು. ಈ ನಿಯಮಗಳು ಜಾರಿಗೆ ಬರುವ ದಿನಾಂಕವನ್ನು ಉಲ್ಲೇಖಿಸಿ ರಿಜಿಸ್ಟ್ರಾರ್ ಜನರಲ್ ಅಧಿಸೂಚನೆ ಹೊರಡಿಸಬೇಕು. ಆದ್ದರಿಂದ ನಿಯಮಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಒಂದು ವಾರದಲ್ಲಿ ಅಧಿಕೃತ ಗೆಜೆಟ್ ಪ್ರಕಟಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ನ್ಯಾಯಾಲಯದ ಕಲಾಪವನ್ನು ಲೈವ್ ಸ್ಟ್ರೀಮಿಂಗ್ ಮಾಡುವುದಕ್ಕೆ ಸಂಬಂಧಿಸಿದಂತೆ ರೂಪಿಸಲಾಗಿರುವ ನಿಯಮಗಳಿಗೆ ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠವು ಸೆಪ್ಟೆಂಬರ್ 17ರಂದು ಒಪ್ಪಿಗೆ ನೀಡಿತ್ತು. ಪೂರ್ವ ತಯಾರಿಯ ಭಾಗವಾಗಿ ಮುಖ್ಯ ನ್ಯಾಯಮೂರ್ತಿ ಪೀಠದಿಂದ ಆಯ್ದ ಪ್ರಕರಣಗಳನ್ನು ಲೈವ್ ಸ್ಟ್ರೀಮಿಂಗ್ ಸಹ ಮಾಡಲಾಗಿತ್ತು.