ಬೆಂಗಳೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಈಗ ಮತ್ತೊಂದು ಶಾಕ್ ಎದುರಾಗಲಿದೆ.
ರಾಜ್ಯದಲ್ಲಿನ ವಿದ್ಯುತ್ ಸರಬರಾಜು ಕಂಪನಿಗಳಾದ ಬೆಸ್ಕಾಂ, ಮೆಸ್ಕಾಂ, ಚೆಸ್ಕಾಂ ಸೇರಿದಂತೆ ಎಲ್ಲ ಕಂಪನಿಗಳು ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ಸಿಗೆ ಪ್ರಸ್ತಾವನೆ ಸಲ್ಲಿಸಿವೆ.
ಯೂನಿಟ್ ಒಂದಕ್ಕೆ 1 ರೂ. 50 ಪೈಸೆ ಹೆಚ್ಚಳ ಮಾಡಬೇಕೆಂದು ವಿದ್ಯುತ್ ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿವೆ. ಹೀಗಾಗಿ, ವಿದ್ಯುತ್ ದರ ಶೀಘ್ರದಲ್ಲೇ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಸಂಸ್ಥೆಗಳ ಅಧಿಕಾರಿ ವರ್ಗ ತಿಳಿಸಿದ್ದಾರೆ.
ಎಲ್ಲ ವಿದ್ಯುತ್ ಸರಬರಾಜು ಕಂಪನಿಗಳು ನಷ್ಟದ ನೆಪವೊಡ್ಡಿ ಬೆಲೆ ಏರಿಕೆಯ ಪ್ರಸ್ತಾವನೆಯನ್ನು ಮುಂದಿಟ್ಟಿವೆ. ಈ ಪ್ರಸ್ತಾವನೆಗೆ ಕೆಇಆರ್ಸಿ ಮತ್ತು ರಾಜ್ಯ ಸರ್ಕಾರ ಒಪ್ಪಿಗೆ ನೀಡಲಿವೆ ಎನ್ನಲಾಗುತ್ತಿದೆ.
ಎರಡು ವರ್ಷಗಳಿಂದ ಏರಿಕೆ : ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ವಿದ್ಯುತ್ ದರ ಹೆಚ್ಚಳ ಕಂಡಿತ್ತು. ಈ ಬಾರಿ ಹೆಚ್ಚಳ ಕಾಣುವ ಸಾಧ್ಯತೆಗಳು ನಿಚ್ಚಳವಾಗಿದೆ.
ರಾಜ್ಯದಲ್ಲಿ 2019ರಲ್ಲಿ ಪ್ರತಿ ಯೂನಿಟ್‌ಗೆ 35 ಪೈಸೆ ಹಾಗೂ 2020ರಲ್ಲಿ ಪ್ರತಿ ಯೂನಿಟ್‌ಗೆ 30 ಪೈಸೆ ಹೆಚ್ಚಳ ಕಂಡಿತ್ತು. ಈ ಬಾರಿ 1 ರೂ. 50 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಇದನ್ನೂ ಓದಿ: ಡಿ.13ರಂದು ಸಿಎಂ ಬೊಮ್ಮಾಯಿ ವಾರಣಾಸಿ ಪ್ರವಾಸ : ಅಧಿವೇಶಕ್ಕೆ 3 ದಿನ ಗೈರಾಗ್ತಾರಾ ಮುಖ್ಯಮಂತ್ರಿ?