ETV Bharat / city

ಗೌರಿ ಲಂಕೇಶ್ ಹತ್ಯೆ ಪ್ರಕರಣ: ಜುಲೈ 4 ರಿಂದ ಆರೋಪಿಗಳ ನಿರಂತರ ವಿಚಾರಣೆ - ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಆರೋಪಿಗಳ ವಿಚಾರಣೆಯನ್ನು ಇದೇ ಜುಲೈ 4ರಿಂದ 8ರವರೆಗೆ ನಿರಂತರವಾಗಿ ನಡೆಸುವುದಾಗಿ ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್‌ ಕೋರ್ಟ್‌ ಆದೇಶ ಹೊರಡಿಸಿದೆ.

Gauri Lankesh
Gauri Lankesh
author img

By

Published : May 28, 2022, 7:09 AM IST

ಬೆಂಗಳೂರು: ನಾಲ್ಕೂವರೆ ವರ್ಷಗಳ ಹಿಂದೆ ಗುಂಡೇಟಿಗೆ ಬಲಿಯಾದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಆರೋಪಿಗಳ ವಿಚಾರಣೆಯನ್ನು ಇದೇ ಜುಲೈ 4 ರಿಂದ 8ರವರೆಗೆ ನಿರಂತರವಾಗಿ ನಡೆಸಲಾಗುವುದು ಎಂದು ಬೆಂಗಳೂರು ನಗರ ಪ್ರಧಾನ ಮತ್ತು ಸೆಷನ್ಸ್‌ ಕೋರ್ಟ್‌ ಸ್ಪಷ್ಟಪಡಿಸಿದೆ. ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕವಿತಾ ಲಂಕೇಶ್ ಸಾಕ್ಷ್ಯ ದಾಖಲಿಸಿಕೊಂಡ ಬಳಿಕ ನ್ಯಾಯಾಧೀಶ ಚಂದ್ರಶೇಖರ ಮೃತ್ಯುಂಜಯ ಜೋಶಿ ಈ ಆದೇಶ ಹೊರಡಿಸಿದ್ದಾರೆ.

ಗೌರಿ ಲಂಕೇಶ್ ಹತ್ಯೆ ನಡೆದು ನಾಲ್ಕು ವರ್ಷದ ನಂತರ ವಿಚಾರಣೆಗೆ ವೇಗ ದೊರೆತಿದೆ. ಪ್ರಕರಣ ಸಂಬಂಧ ಸಮನ್ಸ್ ಜಾರಿಯಾಗಿದ್ದ ಹಿನ್ನೆಲೆ ಗೌರಿ ಲಂಕೇಶ್ ಸಹೋದರಿ ಕವಿತಾ ಅವರು ಸಾಕ್ಷಿ ಹೇಳಲು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಜತೆಗೆ, ವಿಚಾರಣೆ ವೇಳೆ 18 ಆರೋಪಿಗಳ ಪೈಕಿ 11 ಮಂದಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರು ಪಡಿಸಲಾಗಿತ್ತು. ಉಳಿದ 7 ಮಂದಿ ಆರೋಪಿಗಳು ಗೈರಾಗಿದ್ದರು.

ಮಹಾರಾಷ್ಟ್ರದ ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆ ಕೇಸ್​ನಲ್ಲೂ ಈ 7 ಜನ ಆರೋಪಿಗಳಾಗಿದ್ದು, ಅವರನ್ನು ಮುಂಬೈ ಜೈಲಿನಲ್ಲಿರಿಸಿರುವ ಕಾರಣ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರಿಂದಾಗಿ ವಿಚಾರಣೆಯನ್ನು ಜುಲೈ 4 ಕ್ಕೆ ಮುಂದೂಡಲಾಗಿದೆ. ಅಲ್ಲದೇ, ಜುಲೈ 4 ರಿಂದ 8ವರೆಗೆ ಆರೋಪಿಗಳ ವಿಚಾರಣೆಯನ್ನು ನಿರಂತರವಾಗಿ ನಡೆಸಲಾಗುವುದು.

ಮಹಾರಾಷ್ಟ್ರದ ಜೈಲಿನಲ್ಲಿರುವ ಆರೋಪಿಗಳಿಗೂ ಹಾಗೂ ಅಲ್ಲಿನ ಜೈಲಾಧಿಕಾರಿಗಳಿಗೂ ಈ ವಿಚಾರ ತಿಳಿಸಲಾಗುವುದು. ಆರೋಪಿಗಳೊಂದಿಗೆ ಮಾತುಕತೆ ನಡೆಸಲು ವಕೀಲರಿಗೆ ಅವಕಾಶ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಆದೇಶಿಸಲಾಗುವುದು. ಆದರೆ, ಮುಂದಿನ ಬಾರಿಯಿಂದ ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡುವುದಿಲ್ಲ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳೆ ಆತ್ಮಹತ್ಯೆಗೆ ಪ್ರಚೋದನೆ: ಆರೋಪಿ ವಿರುದ್ಧದ ಎಫ್‌ಐಆರ್ ರದ್ದುಪಡಿಸಲು ಹೈಕೋರ್ಟ್ ನಕಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.