ETV Bharat / city

ಪೊಲೀಸರ ಮೇಲೆ ಹಲ್ಲೆ ವಿಚಾರ: ಹೈಕೋರ್ಟ್​​​​ಗೆ ಮಧ್ಯಂತರ ಅರ್ಜಿ ಸಲ್ಲಿಕೆ

author img

By

Published : Apr 4, 2020, 9:55 PM IST

ದೆಹಲಿಯ ತಬ್ಲಿಘಿ​​ ಸಮಾವೇಶದಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಆಗಮಿಸಿದ ಕೆಲವರನ್ನು ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ. ಆದರೆ, ಶುಕ್ರವಾರದ ಪ್ರಾರ್ಥನೆ ಮಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಕ್ವಾರಂಟೈನ್​​ನಲ್ಲಿ ಇರುವವರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.

ಹೈಕೋರ್ಟ್​
ಹೈಕೋರ್ಟ್​

ಬೆಂಗಳೂರು: ಶುಕ್ರವಾರದ ಪ್ರಾರ್ಥನೆ ಮಾಡಲು ಅನುಮತಿ ನೀಡದ ಪೊಲೀಸರ ಮೇಲೆ ಬಳ್ಳಾರಿ ಹಾಗೂ ಹುಬ್ಬಳ್ಳಿಯಲ್ಲಿ ಕ್ವಾರಂಟೈನ್ ನಿಗಾದಲ್ಲಿ ಇರುವವರು ಹಲ್ಲೆ ನಡೆಸಿದ್ದು, ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005ರ ಅಡಿಯಲ್ಲಿ ದೂರು ದಾಖಲಿಸಲು ಸರ್ಕಾರ ಹಾಗೂ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ವಕೀಲೆ ಗೀತಾ ಮಿಶ್ರಾ ಹೈಕೋರ್ಟ್​​ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿದ್ದಾರೆ.

ದೆಹಲಿಯ ತಬ್ಲಿಘಿ​​ ಕಾರ್ಯಕ್ರದಲ್ಲಿ ಭಾಗವಹಿಸಿ ಕರ್ನಾಟಕಕ್ಕೆ ಆಗಮಿಸಿದ ಕೆಲವರನ್ನು ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ. ಆದರೆ, ಶುಕ್ರವಾರದ ಪ್ರಾರ್ಥನೆ ಮಾಡಲು ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ಕ್ವಾರಂಟೈನ್​ನಲ್ಲಿ ಇರುವವರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ.

ಅದೇ ಮಾದರಿಯಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡ ಪೊಲೀಸರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ಮತ್ತೊಂದು ಗುಂಪು ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅನುಮತಿ ನೀಡಲಿಲ್ಲ ಎಂಬ ಕಾರಣಕ್ಕೆ ಸರ್ಕಾರ ಪ್ರಾಧಿಕಾರಗಳ ವಿರುದ್ಧ ಪ್ರತಿಭಟನೆ ನಡೆಸಿ ಲಾಕ್​​​ಡೌನ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಅಲ್ಲದೇ ಬಳ್ಳಾರಿ, ವಿಜಯಪುರ ಮತ್ತು ಆನೇಕಲ್ ಚೆಕ್ ಪೋಸ್ಟ್​​​ಗಳಲ್ಲಿ ಹೊರ ರಾಜ್ಯಗಳಿಂದ ಆಹಾರ ಪದಾರ್ಥ ಹಾಗೂ ಅಗತ್ಯ ವಸ್ತುಗಳನ್ನು ಹೊತ್ತು ಬಂದ ವಾಹನ ಚಾಲಕರಿಂದ ಆರ್​​​​ಟಿಒ ಅಧಿಕಾರಿಗಳು ಹಣ ಪಡೆದು ಕರ್ನಾಟಕದೊಳಗೆ ವಾಹನಗಳನ್ನು ಬಿಟ್ಟಿದ್ದಾರೆ.‌ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ ಚನ್ನಣ್ಣನವರ್​ ಆನೇಕನ್​​​ನಲ್ಲಿ ದಾಳಿ ಮಾಡಿ, ಹೊರ ರಾಜ್ಯದ ಜನರು ಹಾಗೂ ವಾಹನಗಳನ್ನು ನಗರದೊಳಗೆ ಬಿಡುತ್ತಿದ್ದ ಆರ್​​​​​ಟಿ‌ಒ ಬ್ರೇಕ್ ಇನ್ಸ್​ಪೆಕ್ಟರ್​​​ ಕರಿಯಪ್ಪ ಮತ್ತು ಜಯಣ್ಣ ಎಂಬುವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ನಡೆ ಲಾಕ್​​ಡೌನ್ ಆದೇಶದ ಉಲ್ಲಂಘನೆಯಾಗಿದ್ದು, ಅವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ -2005ರ ಅಡಿಯಲ್ಲಿ ದೂರು ದಾಖಲಿಸಬೇಕು‌ ಎಂದು ಅರ್ಜಿಯಲ್ಲಿ ಕೋರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.