ETV Bharat / city

ನಿಮಗೆ ಕೊರೊನಾ ಪಾಸಿಟಿವ್​ ಇದೆಯಾ.. ಭಯ ಬೇಡ, ನೀವು ಮಾಡಬೇಕಿರೋದು ಇಷ್ಟೇ.. - ಕೋವಿಡ್​​-19 ದೂರವಾಣಿ ಸಂಖ್ಯೆ

ಕೊರೊನಾ ಸೋಂಕು ಕಾಣಿಸಿಕೊಂಡರೆ ಅಥವಾ ನಿಮ್ಮವರಿಗೆ ಸೋಂಕು ತಗುಲಿರುವುದಾಗಿ ತಿಳಿದು ಬಂದರೆ ಯಾವುದೇ ರೀತಿಯ ಆತಂಕ ಮತ್ತು ಭೀತಿಗೆ ಒಳಗಾಗದೆ ಮುನ್ನೆಚ್ಚರಿಕಾ ಕ್ರಮಗಳು, ಅಂತರ ಕಾಯ್ದುಕೊಂಡು ಈ ಕೆಳಗೆ ನೀಡಿರುವ ಸೂಚನೆ ಮತ್ತು ಸಲಹೆಗಳನ್ನು ಪಾಲಿಸಿದ್ರೆ ಕೋವಿಡ್‌ನಿಂದ ಸುಲಭವಾಗಿ ಪಾರಾಗಬಹುದು..

instructions-for-covid-patients
ಕೊರೊನಾ ಸಹಾಯವಾಣಿ
author img

By

Published : Jul 10, 2020, 7:06 PM IST

ಬೆಂಗಳೂರು: ಕೊರೊನಾ ವೈರಸ್ ಪರಿಸ್ಥಿತಿ ಸದ್ಯಕ್ಕೆ ಹೇಗಿದೆ ಅಂದರೆ ಯಾರೇ ಕೆಮ್ಮಿದ್ರೂ ಪಕ್ಕದಲ್ಲಿದ್ದವರು ಭಯ ಪಟ್ಟು ಕಿಲೋಮೀಟರ್‌ಗಟ್ಟಲೇ ಓಡುವಂತಾಗಿದೆ. ‌ಪಕ್ಕದ ಮನೆಯಲ್ಲಿ ಕೊರೊನಾ ಬಂದ್ರೆ ಇಡೀ ಏರಿಯಾವನ್ನೇ ಭಯಪಡುವಂತಾಗಿದೆ. ಇಂತಹ ಸಮಯದಲ್ಲಿ ಭಯಕ್ಕಿಂತ ಜಾಗೃತಿ ಅಗತ್ಯ. ಸರಿಯಾದ ರೀತಿ ಯೋಜನೆ ರೂಪಿಸಿಕೊಂಡ್ರೆ ನಮ್ಮಿಂದ ನಮ್ಮವರಿಗೆ ಆಗಬಹುದಾದ ಸಮಸ್ಯೆ ದೂರ ಮಾಡಬಹುದು.

ಕೊರೊನಾ ಬಗೆಗಿನ ಅನುಮಾನ : ನಿಮ್ಗೆ ಕೊರೊನಾ ಪಾಸಿಟಿವ್ ಬಂದಿರಬಹುದು ಅಂತಾ ಯೋಚನೆ ತಲೆಯಲ್ಲಿ ಕೊರೆಯುತ್ತಿದ್ಯಾ.. ಹಾಗಿದ್ರೆ ಟೆನ್ಷನ್ ಬಿಡಿ. ಈ ರೀತಿ ಅನ್ನಿಸಿದ್ರೆ ನೀವೂ ಮಾಡಬೇಕಾದ ಮೊದಲ ಕೆಲಸ ಅನುಮಾನವನ್ನ ಬಗೆಹರಿಸಿಕೊಳ್ಳುವುದು. ಈ ಸಮಯದಲ್ಲಿ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದ್ರೆ ಕಾಣಿಸಿಕೊಳ್ಳಬಹುದು. ಈ ವೇಳೆ ನೀವು ಮಾಡಬೇಕಿರೋದು ಇಷ್ಟೇ.. ಆಪ್ತ ಮಿತ್ರ ಆರೋಗ್ಯ ಸಹಾಯವಾಣಿ "14410" ಸಂಖ್ಯೆಗೆ ಕರೆ ಮಾಡಿ.

ಕೊರೊನಾ ಪಾಸಿಟಿವ್ ಕನ್ಫಮ್ ಆಯಿತಾ?: ನಿಮ್ಗೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡು, ಪಾಸಿಟಿವ್ ಇರುವುದು ಖಚಿತವಾದ್ರೆ "104"ಗೆ ಕರೆ ಮಾಡಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿ. ಅಲ್ಲದೆ ಸೋಂಕು ತಗುಲಿರುವವರನ್ನು ಶಿಫ್ಟ್ ಮಾಡಲು 108 ಆಂಬ್ಯುಲೆನ್ಸ್‌ಗೆ ಕರೆ ಮಾಡಬಹುದು. ಒಂದು ವೇಳೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಚಿಕಿತ್ಸೆಗೆ ನಿರಾಕರಿಸಿದ್ರೆ "1912" ಸಂಖ್ಯೆ ಕರೆ ಮಾಡಿ ದೂರು ನೀಡಬಹುದು. ಕೋವಿಡ್ ಪರೀಕ್ಷೆ ಆಗದೇ ಉಸಿರಾಟದ ತೊಂದ್ರೆ, ಅಸ್ತಮಾ, ಐಎಲ್​ಐ ಇದ್ರೆ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಬಿಡಿ.

ಬಿಬಿಎಂಪಿ ಫೀವರ್ ಕ್ಲಿನಿಕ್ : ಒಂದು ವೇಳೆ ಸಹಾಯವಾಣಿ ಸಂಪರ್ಕ ಸಾಧ್ಯವಾಗದೇ ಇದ್ರೆ, ನಿಮ್ಮ ಹತ್ತಿರದ ಬಿಬಿಎಂಪಿಯ ಫೀವರ್ ಕ್ಲಿನಿಕ್​ಗೆ ಭೇಟಿ ನೀಡಿ. ರೋಗ ಲಕ್ಷಣಗಳಿದ್ರೆ, ಅಲ್ಲಿರುವ ಆ್ಯಂಬುಲೆನ್ಸ್ ಮೂಲಕ ಕೋವಿಡ್ ಸೆಂಟರ್​​ಗೆ ಅವರೇ ರವಾನೆ ಮಾಡುತ್ತಾರೆ. ಫೀವರ್ ಕ್ಲಿನಿಕ್​ಗಾಗಿ ಆರೋಗ್ಯಾಧಿಕಾರಿಗಳನ್ನು ಕೂಡ ಸಂಪರ್ಕ ಮಾಡಬಹುದು.

ಅಧಿಕಾರಿಗಳ ಹೆಸರು ಮತ್ತು ಸಂಪರ್ಕ ಸಂಖ್ಯೆ

1. ಪೂರ್ವ ವಲಯ- ಡಾ ಸಿದ್ಧಪ್ಪ
9480684214
2. ಪಶ್ಚಿಮ ವಲಯ- ಡಾ ಹೆಗ್ಡೆ
9480683928
3. ದಕ್ಷಿಣ ವಲಯ- ಡಾ ಶಿವಕುಮಾರ್
9480973395
4. ಆರ್‌ಆರ್‌ನಗರ- ಡಾ ಬಾಲಸುಂದರ
9480685435
5.ದಾಸರಹಳ್ಳಿ- ಡಾ ಬಾಲಸುಂದರ
9480685435
6. ಬೊಮ್ಮನಹಳ್ಳಿ- ಡಾ ಸುರೇಶ್
9480683473
7. ಯಲಹಂಕ- ಡಾ ಸವಿತಾ
9480684570
8. ಮಹದೇವಪುರ- ಡಾ ಸುರೇಂದ್ರ
9801750539

ಪಾಸಿಟಿವ್ ಮೆಸೇಜ್ ಬಂತಾ? ಹಾಗಿದ್ದರೆ ಹೀಗೆ ಮಾಡಿ..

  • ಅಂದಹಾಗೇ ನಿಮ್ಮ ಮೊಬೈಲ್​ಗೆ ಪಾಸಿಟಿವ್ ಅಂತಾ ಮಸೇಜ್ ಬಂದ್ರೆ, ನಿಮ್ಮ ಮನೆ ವಿಳಾಸದ ಲೋಕೇಷನ್‌ನ ಬಿಬಿಎಂಪಿ ಅಧಿಕಾರಿಗಳಿಗೆ ಕಳಿಸಿ.
  • ನೀವೇನಾದ್ರೂ ಸರ್ಕಾರಿ ಆಸ್ಪತ್ರೆ ಬದಲು ಖಾಸಗಿ ಆಸ್ಪತ್ರೆಗೆ ಹೋಗಲು ಬಯಸಿದ್ರೆ, ಕರೆ ಮಾಡಿಕೊಂಡು ಬೆಡ್ ಇರುವುದನ್ನ‌, ಶುಲ್ಕದ ಬಗ್ಗೆ ಖಚಿತ ಪಡಿಸಿಕೊಳ್ಳಿ.
  • ಬಿಬಿಎಂಪಿ/ಆರೋಗ್ಯ ಇಲಾಖೆಯ ಆ್ಯಂಬುಲೆನ್ಸ್​ನಲ್ಲೇ ಆಸ್ಪತ್ರೆಗೆ ತೆರಳಿ, ಸ್ವಂತ ವಾಹನ ಬಳಸಬೇಡಿ.
  • ಒಂದು ವೇಳೆ ಸ್ವಂತ ವಾಹನದಲ್ಲಿ ಹೋದ್ರೆ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳುವುದಿಲ್ಲ.
  • ನಿಮ್ಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ರೆ ಅದರ ಕುರಿತು ದಾಖಲೆಗಳು ಇರಲಿ, ಅದಕ್ಕೆ ಬೇಕಾದ ಎಲ್ಲ ವಸ್ತುಗಳನ್ನ ಎತ್ತಿಟ್ಟುಕೊಳ್ಳಿ.
  • 14 ದಿನಕ್ಕೆ ಬೇಕಾದ ವೈಯಕ್ತಿಕ ವಸ್ತುಗಳನ್ನ ಪ್ಯಾಕ್ ಮಾಡಿಕೊಳ್ಳಿ. ಜೊತೆಗೆ ಪೌಷ್ಠಿಕಾಹಾರ ಅಂದರೆ ಡ್ರೈ ಫ್ರೂಟ್ಸ್ ತೆಗೆದುಕೊಂಡು ಹೋಗಿ.
  • ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚು ಬಿಸಿ ನೀರು ಸೇವನೆಗಾಗಿ ಥರ್ಮಲ್ ಫ್ಲಸ್ಕ್ ಅಥವಾ ಎಲೆಕ್ಟ್ರಿಕ್ ಕಿಟಲ್ ಬಳಸಬಹುದು.‌(ಕೋವಿಡ್ ಕೇರ್ ಸೆಂಟರ್ ಹೋಗುವವರು ಇದ್ದರೆ ಮಾತ್ರ)
  • ಮೊಬೈಲ್- ಚಾರ್ಜರ್, ಪವರ್ ಬ್ಯಾಂಕ್, ಲ್ಯಾಪ್‌ಟಾಪ್ ಅಗತ್ಯವಿದ್ದಲ್ಲಿ ಪ್ಯಾಕ್ ಮಾಡಿಕೊಳ್ಳಿ.
  • ಆಸ್ಪತ್ರೆ ಚಿಕಿತ್ಸಾ ವೆಚ್ಚಕ್ಕೆ ಕ್ರಿಡಿಟ್ ಕಾರ್ಡ್, ಚೆಕ್ ಬುಕ್, ಇತರೆ ಇರುವುದನ್ನ ಗೊತ್ತುಪಡಿಸಿಕೊಳ್ಳಿ.
  • ಒಂದು ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾದ್ರೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಕೋವಿಡ್ ಆಸ್ಪತ್ರೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ರೋಗ ಲಕ್ಷಣ ತೀವ್ರತೆ ಪರಿಗಣಿಸಿ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್,ಹೋಮ್ ಐಸೋಲೇಷನ್ ಬಗ್ಗೆ ಹೇಳಲಿದ್ದಾರೆ.
  • ಕಳೆದ 7 ದಿನಗಳಲ್ಲಿ ನಿಮ್ಮ ಸಂಪರ್ಕದಲ್ಲಿದ್ದ ಜನರ ಮಾಹಿತಿ, ನೀವೂ ಓಡಾಡಿದ ಕಡೆಗಳ ಮಾಹಿತಿಯನ್ನ ಅಧಿಕಾರಿಗಳಿಗೆ ನೀಡಿ. ಇದು ಇತರ ಸೋಂಕಿತರ ಹುಡುಕಾಟಕ್ಕೆ ಸಹಾಯವಾಗಲಿದೆ.
  • ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆರೋಗ್ಯಾಧಿಕಾರಿಗಳಿಗೆ ನಿಮ್ಮ ಸಹಕಾರ ಅತ್ಯಗತ್ಯ.

ಆ್ಯಂಬುಲೆನ್ಸ್ ಬರುವುದು ತಡವಾದ್ರೆ ಹೀಗೇ ಮಾಡಿ.. : ಸೋಂಕಿತರ ಸಂಖ್ಯೆ ಏರುತ್ತಲೇ ಇದೆ, ಈ ಸಮಯದಲ್ಲಿ ತೊಡಕು ಉಂಟಾಗುವುದು ಸಹಜ. ಆ್ಯಂಬುಲೆನ್ಸ್ ಬರುವುದು ತಡವಾದ್ರೆ ಮನೆಯಲ್ಲಿ ಪ್ರತ್ಯೇಕವಾಗಿ ಇರಿ. ಪ್ರತಿ ಮೂರು ಗಂಟೆಗೊಮ್ಮೆ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ. ನೀರಿನಾಂಶ ಆಹಾರ ಸೇವಿಸಿ, ಬಿಸಿ ಆಹಾರ, ಪೌಷ್ಠಿಕಾಹಾರ ಸೇವಿಸಿ. ಈ ಸಮಯದಲ್ಲಿ ಮನೆಯವರಿಂದ ದೂರವಿದ್ದು, N-95 ಮಾಸ್ಕ್ ಉಪಯೋಗಿಸಿ. ಉಸಿರಾಟದ ತೊಂದರೆ, ಇತರೆ ಸಮಸ್ಯೆ ಇದ್ದರೆ 14410 ಆಪ್ತ ಮಿತ್ರ ಸಹಾಯವಾಣಿಗೆ ಕರೆ ಮಾಡಿ.

ಕೊರೊನಾ ಬಗೆಗೆ ಭಯ ಆತಂಕ ಬೇಡ. ಆದರೆ, ಜಾಗೃತಿ ಅತ್ಯಗತ್ಯ. ಸಾಮಾಜಿಕ ಅಂತರ ಪಾಲನೆ, ಸ್ವಚ್ಛತೆಯ ಕಡೆ ಗಮನಹರಿಸಿದ್ರೆ ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೋರಾಟ ಬಲು ಸುಲಭ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.