ETV Bharat / city

ಮಾಸ್ಕ್ ಹಾಕದ ವಾಹನ ಸವಾರರಿಗೆ ಇನ್ಸ್​ಪೆಕ್ಟರ್​ ಕ್ಲಾಸ್​​​ - Bangalore lockdown news

"ಏನ್ರಿ ಮಾಸ್ಕ್ ಹಾಕದೇ ಬರ್ತೀರಾ, ಲಾಕ್​ಡೌನ್ ಇರೋದು ನಿಮಗೆ ಗೊತ್ತಾಗಲ್ವಾ. ನಮಗೇನು ಮಾಡೋಕೆ ಬೇರೆ ಕೆಲಸ ಇಲ್ವಾ. ಮಾಸ್ಕ್ ಹಾಕೋದನ್ನ ನಾವೇ ಹೇಳಬೇಕಾ? ಕಾಟಾಚಾರಕ್ಕೆ ಕರ್ಚಿಫ್ ಕಟ್ಟೋದಲ್ಲ" ಎಂದು ವಾಹನ ಸವಾರನಿಗೆ ಚಿಕ್ಕಜಾಲ ಪೊಲೀಸ್​ ಇನ್ಸ್​ಪೆಕ್ಟರ್ ಕ್ಲಾಸ್​ ತೆಗೆದುಕೊಂಡಿದ್ದಾರೆ.

Inspector in Bangalore takes class to riders
ಮಾಸ್ಕ್ ಹಾಕದೆ ಸಂಚಾರಿಸಿದವರಿಗೆ ಕ್ಲಾಸ್ ತೆಗೆದುಕೊಂಡ ಇನ್ಸ್​ಪೆಕ್ಟರ್
author img

By

Published : Jul 15, 2020, 4:46 PM IST

ಬೆಂಗಳೂರು: ಕೊರೊನಾದಿಂದ ಸಿಲಿಕಾನ್ ಸಿಟಿಯನ್ನು ಮುಕ್ತಗೊಳಿಸಬೇಕೆಂದು ಪಣ ತೊಟ್ಟಿರುವ ಸರ್ಕಾರದ ಜೊತೆ ಪೊಲೀಸ್ ಇಲಾಖೆ‌ ಕೂಡ ಕೈ ಜೋಡಿಸಿದೆ.‌

ಸದ್ಯ ಸಿಲಿಕಾನ್ ಸಿಟಿಯ ಎಲ್ಲಾ ಕಡೆ ಕೊರೊನಾ ವಾರಿಯರ್​ಗಳು ಗಸ್ತು ತಿರುಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಅಲರ್ಟ್ ಆಗಿದ್ದಾರೆ.

ಬಳ್ಳಾರಿ ರಸ್ತೆಯ ಬಳಿ ‌ಬ್ಯಾರಿಕೇಡ್ ಹಾಕಿ ಪರಿಶೀಲನೆ ಮಾಡುರುವ ವೇಳೆ ಮಾಸ್ಕ್ ಹಾಕದೆ ಕಾರು ಚಲಾಯಿಸಿಕೊಂಡು ವ್ಯಕ್ತಿಯೋರ್ವ ಬಂದಿದ್ದಾನೆ. ಈ ವೇಳೆ ಚಿಕ್ಕಜಾಲ ಇನ್ಸ್​ಪೆಕ್ಟರ್ "ಏನ್ರಿ ಮಾಸ್ಕ್ ಹಾಕದೇ ಬರ್ತೀರಾ, ಲಾಕ್​ಡೌನ್ ಇರೋದು ನಿಮಗೆ ಗೊತ್ತಾಗಲ್ವಾ. ನಮಗೇನು ಮಾಡೋಕೆ ಬೇರೆ ಕೆಲಸ ಇಲ್ವಾ. ಮಾಸ್ಕ್ ಹಾಕೋದನ್ನ ನಾವೇ ಹೇಳಬೇಕಾ? ಕಾಟಾಚಾರಕ್ಕೆ ಕರ್ಚಿಫ್ ಕಟ್ಟೋದಲ್ಲ ಎಂದು ಕ್ಲಾಸ್ ತೆಗೆದುಕೊಂಡು ನಂತರ ತಮ್ಮ ವಾಹನದಲ್ಲಿದ್ದ ಮಾಸ್ಕ್ ಕೊಟ್ಟು ಹಾಕಿಕೊಂಡು ಹೋಗಿ ಎಂದಿದ್ದಾರೆ.

ಮಾಸ್ಕ್ ಹಾಕದೆ ಸಂಚಾರಿಸಿದವರಿಗೆ ಕ್ಲಾಸ್ ತೆಗೆದುಕೊಂಡ ಇನ್ಸ್​ಪೆಕ್ಟರ್

ಹಾಗೆ ಮಾಸ್ಕ್ ಹಾಕದೆ ಸಂಚಾರ ಮಾಡುವ ಬೈಕ್ ಸವಾರರಿಗೂ ಬುದ್ಧಿವಾದ ಹೇಳಿ ಮಾಸ್ಕ್ ನೀಡಿದ್ದಾರೆ. ಈಗಾಗಲೇ ನಗರ ಆಯುಕ್ತರು, ಮಾಸ್ಕ್ ಹಾಕದೆ ಸಂಚಾರ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಆದರೆ ಇನ್ಸ್​ಪೆಕ್ಟರ್ ಮಾನವೀಯತೆ ದೃಷ್ಟಿಯಿಂದ ಬುದ್ಧಿ ಮಾತು ಹೇಳಿ ಕಳುಹಿಸಿಕೊಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.