ETV Bharat / city

ಕೋವಿಡ್​ ಕುರಿತು ಎಚ್ಚರಿಕೆ ನೀಡುವ 'ಆರೋಗ್ಯ ಸೇತು ಆ್ಯಪ್​' ಬಗ್ಗೆ ನಿಮಗೆಷ್ಟು ಗೊತ್ತು?

author img

By

Published : Jul 16, 2020, 8:47 PM IST

ಕೊರೊನಾ ಸೋಂಕಿತ ವ್ಯಕ್ತಿಯಿಂದ ಆರೋಗ್ಯವಂತರನ್ನು ಸದಾ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಮತ್ತು ಒಂದು ವೇಳೆ ಸೋಂಕು ಪತ್ತೆಯಾದ ವ್ಯಕ್ತಿಯ ಸಂಪರ್ಕಕ್ಕೆ ಅನಿರೀಕ್ಷಿತವಾಗಿ ನೀವು ಬಂದಿದ್ದರೆ, ಆರೋಗ್ಯ ಸೇತು ಆ್ಯಪ್​ ನಿಮ್ಮನ್ನ ರಕ್ಷಣೆ ಮಾಡಲಿದೆ. ಇದು ಹೇಗೆ ಎನ್ನುವ ನಿಮ್ಮ ಅನುಮಾನಗಳಿಗೆ ಉತ್ತರ ಇಲ್ಲಿದೆ ಓದಿ..

information-about-aarogya-setu
ಆರೋಗ್ಯ ಸೇತು ಆ್ಯಪ್

ಬೆಂಗಳೂರು: ಕೊರೊನಾ ಸಂಪರ್ಕಿತ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವ ಅಥವಾ ಅವರ ಸಮೀಪದಲ್ಲಿರುವ ಕುರಿತು ಮಾಹಿತಿ ನೀಡುವ ಜೊತೆಗೆ ಕೋವಿಡ್-19 ನಿಂದ ವ್ಯಕ್ತಿಯೊಬ್ಬ ಎಷ್ಟು ಸುರಕ್ಷಿತವಾಗಿದ್ದಾನೆ ಎಂದು ಸ್ವಯಂ ತಿಳಿಯುವ ಸಾಧನ ಆರೋಗ್ಯ ಸೇತು ಆ್ಯಪ್ ಸಂಪರ್ಕಿತರ ಪತ್ತೆಗೆ ಸಾಕಷ್ಟು ಉಪಯುಕ್ತ ಕೊಡುಗೆ ನೀಡುತ್ತಿದೆ.

ಆರೋಗ್ಯ ಸೇತು ಬಳಸುವ ವ್ಯಕ್ತಿ ಸದಾ ಇಂಟರ್​ನೆಟ್ ಹಾಗು ಬ್ಲೂ ಟೂತ್ ಆನ್ ಮಾಡಿಯೇ ಇಟ್ಟುಕೊಂಡಿರುವುದು ಕಡ್ಡಾಯ. ಈ ಆ್ಯಪ್ ಸ್ವಯಂ ಮೌಲ್ಯ ಮಾಪನ ಮಾಡಿಕೊಳ್ಳುವ ಆಯ್ಕೆಯನ್ನು ಇರಿಸಿದ್ದು ನಾವೆಷ್ಟು ಸೇಫ್ ಎನ್ನುವುದನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಆ್ಯಪ್ ಬಳಕೆದಾರರಿಗೆ ಆಗಾಗ ಸ್ವಯಂ ಮೌಲ್ಯಮಾಪನಕ್ಕೆ ಸೂಚನೆ ನೀಡಲಾಗುತ್ತದೆ.

'ಆರೋಗ್ಯ ಸೇತು ಆ್ಯಪ್​' ಬಗ್ಗೆ ನಿಮಗೆಷ್ಟು ಗೊತ್ತು?

ಕೆಮ್ಮು, ಜ್ವರ, ಉಸಿರಾಟದ ತೊಂದರೆ ಎದುರಿಸುತ್ತಿದ್ದೀರಾ?, ಮಧುಮೇಹ, ಅಧಿಕ‌ ರಕ್ತದೊತ್ತಡ, ಶ್ವಾಸಕೋಶದ ಕಾಯಿಲೆ, ಹೃದಯರೋಗ ಇದೆಯಾ? 28-45 ದಿನದಲ್ಲಿ ಅಂತಾರಾಷ್ಟ್ರೀಯ ಪ್ರಯಾಣ ಮಾಡಿದ್ದೀರಾ? ಕೊರೊನಾ ಸೋಂಕಿತ ವ್ಯಕ್ತಿಯೊಂದಿಗೆ ಸಂವಹನ ನಡೆಸಿದ್ದು ಅಥವಾ ವಾಸ ಮಾಡಿದ್ದೀರಾ? ಆರೋಗ್ಯ ಕಾರ್ಯಕರ್ತರಾಗಿದ್ದು ಸುರಕ್ಷಾ ಸಾಧನವಿಲ್ಲದೆ ಸೋಂಕಿತನ ಪರೀಕ್ಷೆ ಮಾಡಿದ್ದೀರಾ ಎನ್ನುವ ಪ್ರಶ್ನೆಗಳನ್ನು ಕೇಳುತ್ತದೆ. ಅದಕ್ಕೆ ನಾವು ಕೊಡುವ ಉತ್ತರದ ಮೇಲೆ ನಮ್ಮ ಸುರಕ್ಷತೆಯನ್ನು ಆ್ಯಪ್ ನೀಡುತ್ತದೆ. ಆ್ಯಪ್‌ನಲ್ಲಿನ ಹಸಿರು ಬಣ್ಣ ಸೇಫ್, ಹಳದಿ ಬಣ್ಣ ರಿಸ್ಕ್, ಕೆಂಪು ಬಣ್ಣ ಡೇಂಜರ್ ಎನ್ನುವ ಸಂಕೇತವಾಗಿದೆ.

ಇನ್ನು ನಮ್ಮ 500 ಮೀಟರ್ ವ್ಯಾಪ್ತಿಯಲ್ಲಿ,‌ 1 ಕಿ.ಮೀ., 2 ಕಿ.ಮೀ., 5 ಕಿ.ಮೀ., 10 ಕಿ.ಮೀ. ತ್ರಿಜ್ಯದೊಳಗೆ ಎಷ್ಟು ಜನ ಆರೋಗ್ಯ ಸೇತು ಆ್ಯಪ್ ಬಳಸುತ್ತಿದ್ದಾರೆ. ಕಳೆದ 24 ಗಂಟೆಯಲ್ಲಿ ಎಷ್ಟು ಜನ ಸ್ವಯಂ ಪರೀಕ್ಷೆ ಮಾಡಿಕೊಂಡಿದ್ದಾರೆ, ಕಳೆದ 24 ಗಂಟೆಯಲ್ಲಿ ಎಷ್ಟು ಜನ ಅನಾರೋಗ್ಯವಾಗಿದ್ದಾರೆ ಎಂದು ಆ್ಯಪ್‌ನಿಂದ ಪರಿಶೀಲಿಸಲಾಗಿದೆ. ಕಳೆದ 28 ದಿನದಲ್ಲಿ ಎಷ್ಟು ಜನರಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ. ಎಷ್ಟು ಜನಕ್ಕೆ ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.

ಆ್ಯಪ್ ಹೇಗೆ ಕೆಲಸ ಮಾಡುತ್ತೆ?

ಕೊರೊನಾ ಸೋಂಕಿತ ವ್ಯಕ್ತಿ ಸನಿಹದಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದು ಕಂಟೈನ್‌ಮೆಂಟ್ ಜೋನ್ ಹತ್ತಿರದಲ್ಲೇ ಇದೆ ಎನ್ನುವ ಮಾಹಿತಿ ತಿಳಿಯಬಹುದು. ಇದರಿಂದ ಸೋಂಕಿತ ವ್ಯಕ್ತಿಗಳಿದ್ದ ಪ್ರದೇಶದ ಬಗ್ಗೆ ಮಾಹಿತಿ ಲಭ್ಯವಾಗಲಿದ್ದು, ಆ್ಯಪ್ ಬಳಕೆದಾರರು ಎಚ್ಚರಿಕೆ ವಹಿಸಲು ಸಹಕಾರಿಯಾಗಲಿದೆ.

ಇನ್ನು ಯಾವುದೇ ವ್ಯಕ್ತಿಯೊಬ್ಬ ಕೊರೊನಾ ಪಾಸಿಟಿವ್ ದೃಢಪಟ್ಟರೆ ಆ ವ್ಯಕ್ತಿಯು ಆರೋಗ್ಯ ಸೇತು ಆ್ಯಪ್ ಬಳಸುತ್ತಿದ್ದರೆ ಆ ಆ್ಯಪ್ ಮೂಲಕ ಆತನ ಸಂಪರ್ಕಿತರಿಗೆ ಹೈ ರಿಸ್ಕ್ ಅಥವಾ ರಿಸ್ಕ್ ಮೆಸೇಜ್ ರವಾನೆಯಾಗಲಿದೆ. ಇಂದು ವ್ಯಕ್ತಿಯೊಬ್ಬ ಪಾಸಿಟಿವ್ ಆದರೆ, ಎರಡು ದಿನದ ಹಿಂದೆ ಆತನ ಸಂಪರ್ಕಕ್ಕೆ ಬಂದಿದ್ದವರಿಗೆ ಮಾಹಿತಿ ಲಭ್ಯವಾಗಲಿದೆ. ಅವರಿಗೆಲ್ಲಾ ಕೊರೊನಾ ತಪಾಸಣೆ ಮಾಡಿಸಿಕೊಳ್ಳುವ ಮತ್ತು ಹೋಮ್​ ಕ್ವಾರಂಟೈನ್ ಆಗುವ ಸಂದೇಶಗಳು ರವಾನೆಯಾಗಲಿದೆ.

ಆಕಸ್ಮಿಕವಾಗಿ ಸಿಕ್ಕ ವ್ಯಕ್ತಿಯೊಬ್ಬ, ವ್ಯಾಪಾರ, ಉದ್ದಿಮೆದಾರರು, ಅಧಿಕಾರಿಗಳು, ಸಭೆಗಳನ್ನು ನಡೆಸಿದ್ದರೆ ಅಲ್ಲಿದ್ದ ಯಾರಿಗಾದರೂ ಮುಂದಿನ ಎರಡು ಮೂರು ದಿನಗಳಲ್ಲಿ ಪಾಸಿಟಿವ್ ಬಂದರೆ, ಆ ಜಾಗ ಮತ್ತು ಸಭೆಯಲ್ಲಿ ಇದ್ದವರಿಗೆ ರಿಸ್ಕ್ ಮಾಹಿತಿ ರವಾನೆಯಾಗಲಿದೆ. ಆದರೆ ಇದಕ್ಕೆ ಆರೋಗ್ಯ ಸೇತು ಆ್ಯಪ್ ಆನ್ ಆಗಿಯೇ ಇರುವುದು ಕಡ್ಡಾಯ.

ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗುವ ಪ್ರತಿಯೊಬ್ಬರ ಮೊಬೈಲ್​ನಲ್ಲೂ ಆರೋಗ್ಯ ಸೇತು ಆ್ಯಪ್ ಕಡ್ಡಾಯಗೊಳಿಸಲಾಗಿದೆ. ಆ್ಯಪ್ ಆಕ್ಟೀವ್, ಆ್ಯಪ್ ಡೇಟ್ ಆಗಿದ್ದರಷ್ಟೇ ಸಿಎಂ ಭೇಟಿಗೆ ಅವಕಾಶ. ಅಷ್ಟರ ಮಟ್ಟಿಗೆ ಆರೋಗ್ಯ ಸೇತು ಸೋಂಕಿತರ ಸಂಪರ್ಕಕ್ಕೆ ಬಂದ ಮಾಹಿತಿಯನ್ನು ನಿಖರವಾಗಿ ನೀಡಲಿದೆ. ಇದರಿಂದ ಸಾಕಷ್ಟು ಮುಂಜಾಗ್ರತೆ ವಹಿಸಲು, ತಪಾಸಣೆಗೆ ಒಳಪಡಲು ಸಹಕಾರಿಯಾಗಲಿದೆ.

ಇನ್ನು ಅಕ್ಕಪಕ್ಕದ ಮನೆಗಳಲ್ಲಿ ಕೊರೊನಾ ಪಾಸಿಟಿವ್ ಬಂದರೆ ಅದರ ಮಾಹಿತಿ, ಆ ವ್ಯಕ್ತಿಗಳ ಸಂಪರ್ಕಕ್ಕೆ ನೆರೆಹೊರೆಯವರು ಮೂರ್ನಾಲ್ಕು ದಿನದ ಅಂತರದಲ್ಲಿ ಬಂದಿದ್ದರೆ, ಆ ಮಾಹಿತಿಯೂ ಆ್ಯಪ್ ಬಳಕೆದಾರರಿಗೆ ಲಭ್ಯವಾಗಲಿದೆ.

ವಾರ್ ರೂಂ ವರ್ಕ್:

ಇನ್ನು ಕೊರೊನಾ ವಾರ್ ರೂಂ ನಲ್ಲಿ ಆರೋಗ್ಯ ಸೇತು ಆ್ಯಪ್​ನ ಸದಾ ಟ್ರ್ಯಾಕ್ ಮಾಡಲಾಗುತ್ತದೆ. ಸೋಂಕಿತ ವ್ಯಕ್ತಿ ಯಾವ ಯಾವ ವ್ಯಕ್ತಿಯನ್ನು ಸಂಪರ್ಕ ಮಾಡಿದ್ದ ಎನ್ನುವ ಮಾಹಿತಿಯನ್ನು ಆ್ಯಪ್ ನಲ್ಲಿನ ಮೊಬೈಲ್ ನಂಬರ್ ಮೂಲಕ ಪಡೆದುಕೊಳ್ಳಲಾಗುತ್ತದೆ. ಇದರಿಂದ ಪ್ರಾಥಮಿಕ ಹಾಗು ದ್ವಿತೀಯ ಸಂಪರ್ಕಿತರ ಪತ್ತೆಗೆ ಸಾಕಷ್ಟು ಅನುಕೂಲವಾಗಲಿದೆ.

ಆರೋಗ್ಯ ಸೇತು ಆ್ಯಪ್ ಸದಾ ಚಾಲ್ತಿಯಲ್ಲಿ ಇರಿಸಿಕೊಂಡವರಿಗೆ ರಿಸ್ಕ್ ಫ್ಯಾಕ್ಟರ್ ಮಾಹಿತಿ ಖಚಿತವಾಗಿ ಲಭ್ಯವಾಗಲಿದೆ. ಪದೇ ಪದೇ ಇನ್ ಪುಟ್ ಪಡೆಯುವ ಜೊತೆಗೆ, ಸೋಂಕಿತರ ಸಂಪರ್ಕದ ಮಾಹಿತಿಯನ್ನು ಬಹುತೇಕ ಖಚಿತಪಡಿಸಲಿದ್ದು ಎಲ್ಲರೂ ಆ್ಯಪ್ ಬಳಸುವಂತೆ ಆರೋಗ್ಯ ಇಲಾಖೆ ಮನವಿ ಮಾಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.