ETV Bharat / city

ಹೆಚ್ಚುತ್ತಿದೆ ಕೊರೊನಾ ಕಾರ್ಕೋಟಕ: ಟೆಸ್ಟಿಂಗ್ ಲಾಬ್'​ ಆರಂಭಿಸಿದ ಭಾರತೀಯ ವಾಯುಸೇನೆ

author img

By

Published : Mar 26, 2020, 7:38 PM IST

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ಈಗಾಗಲೇ ರಾಜ್ಯದ ಹಲವು ಕಡೆ ಕೊವಿಡ್​-19 ಸೋಂಕು ಪರೀಕ್ಷಾ ಕೇಂದ್ರಗಳು ಆರಂಭವಾಗಿದ್ದು ಮುಂಜಾಗೃತ ಕ್ರಮವಾಗಿ ಬೆಂಗಳೂರು ನಗರದಲ್ಲಿ ಭಾರತೀಯ ವಾಯುಸೇನೆ ಟೆಸ್ಟಿಂಗ್ ಲ್ಯಾಬ್​ ಆರಂಭಿಸಿದೆ.

indian-air-force-launched-by-kovid-19-testing-lab
ಭಾರತೀಯ ವಾಯುಸೇನೆ

ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆಗೆ ಈಗಾಗಲೇ ರಾಜ್ಯದ‌ ಹಲವು ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಲ್ಯಾಬ್​ಗಳು ಕಾರ್ಯನಿರ್ವಹಿಸುತ್ತಿವೆ. ಮುಂದಿನ ದಿನಗಳಲ್ಲಿ‌ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತೀಯ ವಾಯುಸೇನೆಯು ನಗರದಲ್ಲಿ ಟೆಸ್ಟಿಂಗ್ ಲ್ಯಾಬ್ ಆರಂಭಿಸಿದೆ.

ಎಚ್​ಎಎಲ್​ ಏರ್ ಪೋರ್ಟ್ ರಸ್ತೆಯಲ್ಲಿರುವ ಕಮಾಂಡ್ ಆಸ್ಪತ್ರೆಯಲ್ಲಿ ಐಎಎಫ್ ನ ಮೊದಲ ಕೊರೊನಾ ವೈರಸ್ ಟೆಸ್ಟಿಂಗ್ ಲ್ಯಾಬ್‌ ಆರಂಭಿಸಲಾಗಿದೆ. ಬೆಂಗಳೂರು ಸೇರಿದಂತೆ‌ ನೆರೆಹೊರೆ ಜಿಲ್ಲೆಗಳಲ್ಲಿ‌‌ ಕೊರೊನಾ‌ ಸೋಂಕು ಕಾಣಿಸಿಕೊಂಡರೆ ತ್ವರಿತವಾಗಿ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಶೀಘ್ರವಾಗಿ ವರದಿ ನೀಡಲು ಅನುಕೂಲವಾಗಲಿದೆ.

ಸದ್ಯ ಭಾರತೀಯ ವಾಯುಸೇನೆಯು ಬೆಂಗಳೂರು ಸೇರಿದಂತೆ ದೇಶದ 9 ನೆಲೆಗಳಲ್ಲಿ ತಲಾ 200-ರಿಂದ 300 ಹಾಸಿಗೆಗಳ ದಿಗ್ಬಂಧನ ಕೇಂದ್ರಗಳನ್ನು ತೆರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.