ETV Bharat / city

ನಾಳೆ ಬೆಂಗಳೂರು ನಗರ ಸಂಚಾರ ಮಾರ್ಗಗಳಲ್ಲಿ ಈ ಬದಲಾವಣೆ ಗಮನಿಸಿ

ನಾಳೆ ಸ್ವಾತಂತ್ರ್ಯ ದಿನಾಚರಣೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹಲವು ಕಾರ್ಯಕ್ರಮಗಳು ನಡೆಯಲಿದ್ದು, ವಾಹನ ಸವಾರರು ಈ ರಸ್ತೆ ಸಂಚಾರ ಬದಲಾವಣೆಯನ್ನು ಗಮನಿಸಿ.

ಸಂಚಾರ ದಟ್ಟಣೆ
Bangalore traffic
author img

By

Published : Aug 14, 2022, 7:26 AM IST

ಬೆಂಗಳೂರು: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ನಗರದಲ್ಲಿ ನಾಳೆ ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಮಾಣಿಕ್ ಷಾ ಮೈದಾನದಲ್ಲಿ ಧ್ವಜಾರೋಹಣ, ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಸ್ವಾತಂತ್ರ್ಯ ನಡಿಗೆ ಸೇರಿದಂತೆ ಹಲವು ಜಾಥಾ, ಮೆರವಣಿಗಗಳು ನಡೆಯಲಿವೆ. ಹೀಗಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಲಿದ್ದು ರಸ್ತೆ ಸಂಚಾರ ಮಾರ್ಗಗಳಲ್ಲಿ ಮಾರ್ಪಾಡು ಮಾಡಿ ಸಂಚಾರ ಪೊಲೀಸ್ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.

1. ಬೆಳಗ್ಗೆ 6.30 ರಿಂದ 8 ಗಂಟೆವರೆಗೆ ಹೆಸರಘಟ್ಟ ಮುಖ್ಯ ರಸ್ತೆಯಲ್ಲಿ, ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಹೆಚ್.ಎಂ.ಟಿ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ವಾಟಾಳ್ ನಾಗರಾಜ್ ರಸ್ತೆ, ರಾಜ್ ಕುಮಾರ್ ರಸ್ತೆ, ತುಮಕೂರು ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಸಂಚರಿಸಬೇಕು.

2. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ, ನೃಪತುಂಗ ರಸ್ತೆ ಎನ್.ಆರ್ ರೋಡ್, ಜೆ. ಸಿ ರೋಡ್, ಜಿ.ಟಿ ರೋಡ್, ಎಲ್.ಪಿ.ಟಿ ರೋಡ್, ಕೆ.ಜಿ ರೋಡ್, ಗಾಂಧಿ ನಗರ 5 ನೇ ಮುಖ್ಯ ರಸ್ತೆಯಲ್ಲಿ ಸಂಚಾರ ನಿರ್ಬಂಧವಿದೆ.

3. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಆನಂದ್ ರಾವ್ ಸರ್ಕಲ್, ಸುಬೇದಾರ್ ಚತ್ರಂ ರಸ್ತೆ, ಗೂಡ್ ಶೆಡ್ ರೋಡ್​ನಿಂದ ಟಿ.ಎಂ. ಸಿ ರಾಯನ್ ರೋಡ್, ಸಂಗೋಳ್ಳಿ ರಾಯಣ್ಣ ಸರ್ಕಲ್, ಬಿನ್ನಿಪೇಟೆ ಹುಣಸೇಮರ ಜಂಕ್ಷನ್​ನಿಂದ ಗೂಡ್ ಶೆಡ್ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಶೇಷಾದ್ರಿ ರಸ್ತೆ, ಸೌತ್ ಅಂಡ್ ರಸ್ತೆಯಿಂದ ಲಾಲ್ ಬಾಗ್ ಪಶ್ಚಿಮ ಗೇಟ್, ಮಿನರ್ವ ಸರ್ಕಲ್ ನಿಂದ ಟೌನ್ ಹಾಲ್ ಕಡೆಗೆ ಸಂಚರಿಸುವಂತಿಲ್ಲ.

4. ಮಧ್ಯಾಹ್ನ 12 ರಿಂದ 4 ಗಂಟೆ ವರೆಗೆ ಎಲ್ಲೆಲ್ಲಿ ಸಂಚಾರ ಬಂದ್: ಮಧ್ಯಾಹ್ನ 12 ಗಂಟೆಯಿಂದ 4 ಗಂಟೆವರೆಗೆ ಶೇಷ್ಮಾಲ್ ಜಂಕ್ಷನ್​ನಿಂದ ರಾಮಕೃಷ್ಣ ಆಶ್ರಮ ಸರ್ಕಲ್, ಬುಲ್ ಟೆಂಪಲ್ ರಸ್ತೆ ಮಂಜುನಾಥ ಕಲ್ಯಾಣ ಮಂಟಪದಿಂದ ಉಮಾ ಥಿಯೇಟರ್ ಕಡೆಗೆ, ಕೆ.ಆರ್ ರಸ್ತೆ, ಡಿ.ಎಂ ಜಂಕ್ಷನ್​ನಿಂದ ಶಿವಶಂಕರ್ ಸರ್ಕಲ್‌ವರೆಗೆ. ಡಯಾಗನಲ್ ರೋಡ್ ಹೋಮ್ ಸ್ಕೂಲ್ ಜಂಕ್ಷನ್ ನಿಂದ ವಾಸವಿ ರಸ್ತೆ ಮತ್ತು ನ್ಯಾಷನಲ್ ಕಾಲೇಜ್ ಸುತ್ತಮುತ್ತ ಸಂಚರಿಸುವಂತಿಲ್ಲ.

ಇದನ್ನೂ ಓದಿ: ಬೆಂಗಳೂರು ಸಂಚಾರ ದಟ್ಟಣೆ ಶೇ 32ರಷ್ಟು ಇಳಿಮುಖ: ಎಲೆಕ್ಟ್ರಿಕ್ ವಾಹನ ಖರೀದಿ ಹೆಚ್ಚಳ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.