ಬೆಂಗಳೂರು: ಮುಂಗಾರು ಈಗಾಗಲೇ ಆರಂಭವಾಗಿದ್ದು, ಜಲಾಶಯಗಳಿಗೂ ನೀರು ಹರಿದು ಬರುತ್ತಿದೆ. ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಉತ್ತರ ಕನ್ನಡದಲ್ಲಿ 3 ಸೆಂ.ಮೀ. ಮಳೆಯಾದರೆ, ಆಗುಂಬೆಯಲ್ಲಿ 2 ಸೆಂ.ಮೀ. ಮಳೆಯಾಗಿದೆ. ಇನ್ನೂ ಜೂ. 24 ರಿಂದ 28 ರವರೆಗೆ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಓದಿ: ಚಕ್ರಕ್ಕೆ ಸಿಲುಕಿದ್ದವನ ಎಳೆದೊಯ್ದ ಲಾರಿ.. ಬೆಳಗಾವಿಯಲ್ಲಿ ನರಳಾಡಿ ಜೀವ ಬಿಟ್ಟ ಬೈಕ್ ಸವಾರ
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮುಂಗಾರು ಕ್ಷೀಣಿಸಿದ್ದು, ನಿನ್ನೆ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಿದೆ. ಕಳೆದ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಜೂನ್ 1 ರಿಂದ ಸೆಪ್ಟೆಂಬರ್ 30 ರವರೆಗೆ ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿತ್ತು. 991 ಮಿ.ಮೀ. ಮಳೆಯಾಗಿದ್ದು, ಶೇ.16ಕ್ಕೂ ಹೆಚ್ಚು ಮಳೆಯಾಗಿತ್ತು. ದಕ್ಷಿಣ ಒಳನಾಡಿನಲ್ಲಿ ಶೇ.39, ಉತ್ತರ ಒಳನಾಡಿನಲ್ಲಿ ಶೇ.36, ಕರಾವಳಿಯಲ್ಲಿ ಶೇ.12 ವಾಡಿಕೆಗಿಂತ ಹೆಚ್ಚು ಮಳೆಯಾದರೆ ಮಲೆನಾಡಿನಲ್ಲಿ ಶೇ.5 ಕಡಿಮೆ ಮಳೆ ಬಿದ್ದಿತ್ತು.
ರಾಜ್ಯದ ಪ್ರಮುಖ ಜಲಾಶಯಗಳ ನೀರಿನಮಟ್ಟ:
ಕೃಷ್ಣರಾಜ ಸಾಗರ ಜಲಾಶಯ:
ನೀರಿನ ಸಂಗ್ರಹ ಸಾಮರ್ಥ್ಯ 124.8 ಅಡಿಯಿದ್ದು, ಪ್ರಸ್ತುತ 95 ಅಡಿ ಸಂಗ್ರಹವಾಗಿದೆ. ಕಳೆದ ವರ್ಷ 95.4 ಅಡಿ ನೀರು ಇತ್ತು. ಈಗ ಜಲಾಶಯಕ್ಕೆ 9647 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ.
ಕಬಿನಿ ಜಲಾಶಯ:
65 ಅಡಿ ಸಂಗ್ರಹ ಸಾಮರ್ಥ್ಯ, ಈಗ ಸಂಗ್ರಹವಾಗಿರುವುದು 56.92 ಅಡಿ, ಕಳೆದ ವರ್ಷ 43.2 ಅಡಿ ಸಂಗ್ರಹವಾಗಿತ್ತು.
ಹಾರಂಗಿ ಜಲಾಶಯ:
ಸಂಗ್ರಹ ಸಾಮರ್ಥ್ಯ 129 ಅಡಿ, ಈಗ 108.42 ಸಂಗ್ರಹವಾಗಿದೆ. ಕಳೆದ ವರ್ಷ 106.56 ಅಡಿ ಸಂಗ್ರಹವಾಗಿತ್ತು. ಒಳ ಹರಿವು 940 ಕ್ಯೂಸೆಕ್ಸ್ .
ಹೇಮಾವತಿ:
117 ಅಡಿ ನೀರು ಸಂಗ್ರಹ ಸಾಮರ್ಥ್ಯ ಇದ್ದು, ಈಗ 80.1 ಅಡಿ ತುಂಬಿದೆ. ಕಳೆದ ವರ್ಷ 77.58 ಸಂಗ್ರಹವಾಗಿತ್ತು.
ಆಲಮಟ್ಟಿ:
ಸಾಮರ್ಥ್ಯ 519.60 ರಷ್ಟಿದ್ದು, ಇಂದು 516.33 ಮೀಟರ್ ನಷ್ಟಿದೆ.
ಲಿಂಗನಮಕ್ಕಿ ಜಲಾಶಯ:
ಪೂರ್ಣ ಸಾಮರ್ಥ್ಯ 554.44 ಮೀಟರ್ ಇದ್ದು, ಇಂದು 544.25 ಮೀಟರ್ ಇದೆ.
ಭದ್ರಾ ಜಲಾಶಯ:
ನೀರಿನ ಸಂಗ್ರಹ ಸಾಮರ್ಥ್ಯ 657.73 ರಷ್ಟಿದ್ದು, ಇಂದಿನ ಮಟ್ಟ 647.52 ರಷ್ಟಿದೆ.
ತುಂಗಭದ್ರಾ:
497.71 ಮೀಟರ್ ಸಾಮರ್ಥ್ಯವಿದ್ದು, ಇಂದು 488.49 ಮೀಟರ್‌ನಷ್ಟು ನೀರಿದೆ.
ನಾರಾಯಣಪುರ ಜಲಾಶಯ:
492.25ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು, ಸದ್ಯ 488.98 ಮೀಟರ್ ನಷ್ಟು ನೀರಿದೆ.
ಘಟಪ್ರಭಾ, ಮಲಪ್ರಭಾ ಜಲಾಶಯ ನೀರಿನ ಮಟ್ಟ:
ಘಟಪ್ರಭಾದಲ್ಲಿ 662.91 ಮೀಟರ್‌ನಷ್ಟು ನೀರಿನ ಸಂಗ್ರಹ ಸಾಮರ್ಥ್ಯವಿದ್ದು, 648.00ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, 628.19 ಮೀಟರ್ ನೀರು ಸಂಗ್ರಹವಾಗಿದೆ.