ETV Bharat / city

ಎನ್​ಬಿಎಫ್​​ಸಿ ಸಾಲ ಮರುಪಾವತಿಯಲ್ಲಿ ಏರಿಕೆ

ಎನ್​​ಬಿಎಫ್​ಸಿ ಸಾಲ ಕಂತುಗಳ ಮರುಪಾವತಿಯಲ್ಲಿ ಹೆಚ್ಚಳ ಕಂಡಿದ್ದು, ಮುಂದಿನ ಆರ್ಥಿಕ ವರ್ಷಕ್ಕೆ ಇನ್ನಷ್ಟು ಸುಧಾರಣೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

nbfc
ಎನ್​ಬಿಎಫ್​​ಸಿ
author img

By

Published : Dec 26, 2020, 7:46 PM IST

ಬೆಂಗಳೂರು: ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (ಎನ್​​ಬಿಎಫ್​ಸಿ) ನೀಡಿದ ಸಾಲಗಳ ಕಂತಿನ ಮರುಪಾವತಿಯಲ್ಲಿ ಏರಿಕೆ ಕಂಡಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಮಾರಿಟೋರಿಯಂ ಅವಧಿಗೆ ಹೋಲಿಸಿದರೆ ಮೊದಲಿನ ಸ್ಥಿತಿಗೆ ಬರುತ್ತಿದೆ ಎಂದು ಐಸಿಆರ್​​ಎ ವರದಿಯಲ್ಲಿ ಹೇಳಿದೆ.

ವರದಿಯ ಪ್ರಕಾರ, ಬಹುತೇಕ ಸಂಸ್ಥೆಗಳಲ್ಲಿ ಶೇ 85-95ರಷ್ಟು ಸಾಲದ ಕಂತಿನ ಮರುಪಾವತಿ ನಡೆದಿದೆ. ಆಗಸ್ಟ್ ತಿಂಗಳಲ್ಲಿ ಕೇವಲ ಶೇ 70 ಹಾಗೂ ಜುಲೈ ತಿಂಗಳಲ್ಲಿ ಶೇ 65ರಷ್ಟು ಮರುಪಾವತಿ ನಡೆದಿದೆ. ಗೃಹ ಸಾಲ ಜುಲೈನಲ್ಲಿ ಶೇ 78 ಹಾಗೂ ಆಗಸ್ಟ್​​ನಲ್ಲಿ ಶೇ 81 ಇತ್ತು ಎಂದು ವರದಿ ತಿಳಿಸಿದೆ.

ಸಾಲದ ಮರುಪಾವತಿ ಈ ಸೆಪ್ಟೆಂಬರ್​​​ನಲ್ಲಿ ಏರಿಕೆ ಕಂಡಿರುವ ಪರಿಣಾಮ ಸಾಲದ ಮಾರಿಟೋರಿಯಂ ಸ್ಥಗಿತಗೊಂಡಿದೆ. ಹಾಗಾಗಿ, ಕಳೆದ ತ್ರೈಮಾಸಿಕ ಅಂಕಿ-ಅಂಶಕ್ಕಿಂತ ಈ ಬಾರಿ ಸುಧಾರಣೆಯಾಗುತ್ತಿದೆ ಎಂದು ಐಸಿಆರ್​​ಎ ಆರ್ಥಿಕ ವಲಯದ ಮುಖ್ಯಸ್ಥ ಕಾರ್ತಿಕ್ ಮಾಹಿತಿ ನೀಡಿದರು.

2ನೇ ತ್ರೈಮಾಸಿಕ ವರ್ಷದಲ್ಲಿ ದೇಶದಲ್ಲಿ ಹಣದ ಹರಿವು ಹೆಚ್ಚಾಗಿದೆ. 6 ತಿಂಗಳು ಸಾಲದ ಮಾರಿಟೋರಿಯಂ ಕೂಡ ಗ್ರಾಹಕರಿಗೆ ಸಹಾಯಕವಾಗಿತ್ತು. ಹೀಗಾಗಿ, ಮುಂದಿನ ಆರ್ಥಿಕ ವರ್ಷಕ್ಕೆ ಎನ್​ಬಿಎಫ್​​ಸಿ ವಲಯ ಸುಧಾರಣೆಯಾಗುವ ಲಕ್ಷಣ ಇದೆ ಎಂದು ಸಂಸ್ಥೆ ತಿಳಿಸಿದೆ.

ಆರ್ಥಿಕ ವರ್ಷ 2021ರಲ್ಲಿ ಸಗಟು ಆಸ್ತಿ ನಿರ್ವಹಣೆ ಶೇ 2 ರಿಂದ 4ರಷ್ಟು ಇಳಿಕೆ ಆಗಲಿದೆ. ಆದರೆ, ಚಿಲ್ಲರೆ ಆಸ್ತಿ ನಿರ್ವಹಣೆ ಶೇ 1.5ರಷ್ಟು, ಜೊತೆಗೆ, ಗೃಹ ಸಾಲದ ಸಂಸ್ಥೆಗಳು ಶೇ 5 - 8ರಷ್ಟು ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.