ETV Bharat / city

ವಿಭಿನ್ನ ಉತ್ತೇಜನಾ ಸಹಾಯ ನೀಡಿದ್ರೆ ವಿದ್ಯುತ್ ಚಾಲಿತ ವಾಹನ ಖರೀದಿ ಏರಿಕೆ

ಬೆಂಗಳೂರು ವಿದ್ಯುತ್ ಚಾಲಿತ ವಾಹನಗಳ ಕೇಂದ್ರ ತಾಣ. ಎತರ್ ಎನರ್ಜಿ, ಸನ್ ಮೊಬಿಲಿಟಿ, ಯುಲು, ಮಹೀಂದ್ರ ಎಲೆಕ್ಟ್ರಿಕ್ ಸೇರಿ ಇನ್ನಷ್ಟು ವಿದ್ಯುತ್ ತಯಾರಿಕಾ ಸಂಸ್ಥೆಗಳ ಮನೆಯಾಗಿದೆ..

increase-in-electric-vehicle-purchase
ವಿದ್ಯುತ್ ಚಾಲಿತ ವಾಹನ
author img

By

Published : Sep 7, 2020, 7:38 PM IST

ಬೆಂಗಳೂರು : ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿಭಿನ್ನ ಉತ್ತೇಜನ ಸಹಾಯ ಕ್ರಮಗಳನ್ನು ಘೋಷಿಸಿದ್ರೆ ಮಾತ್ರ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹೆಚ್ಚಳವಾಗುವುದು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್​ಕೆಸಿಸಿಐ) ಅಧ್ಯಕ್ಷ ಸಿ ಆರ್ ಜನಾರ್ಧನ್ ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಎಲ್ಲರೂ ಕಾದು ನೋಡುವ ತಂತ್ರ ಪರಿಪಾಲಿಸುತ್ತಿದೆ. ಒಂದೇ ಸಾರಿ ವಿದ್ಯುತ್ ವಾಹನಗಳ ಮೇಲೆ ಪ್ರೋತ್ಸಾಹ ಧನ ಘೋಷಿಸಿದ್ರೆ ಬೆಲೆ ಇಳಿಕೆಯಾಗಲಿದೆ ಎಂದು ವಾಹನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿಸಿದರು. 2017ರಲ್ಲಿ ದೇಶದಲ್ಲೇ ಮೊದಲು ರಾಜ್ಯ ಸರ್ಕಾರ ವಿದ್ಯುತ್ ವಾಹನಗಳ ನೀತಿ ಪರಿಚಯಿಸಿದೆ. ವಿದ್ಯುತ್ ವಾಹನಗಳ ಹಾಗೂ ಪರಿಸರ ಸ್ನೇಹಿ ವಾಹನಗಳ ಉತ್ಪಾದನೆಗೆ ಉತ್ತೇಜನಾ ಕನಸು ಹೊತ್ತ ಈ ನೀತಿಗೆ ನೂತನ ಕೈಗಾರಿಕಾ ನೀತಿಯಲ್ಲಿ ಪುಷ್ಟಿಯಿಲ್ಲ. ಸರ್ಕಾರ ಈಗ 2020-25 ಕೈಗಾರಿಕಾ ನೀತಿಯನ್ನು ರೂಪಿಸಿ ಅನುಮೋದನೆ ನೀಡಿದೆ. ಅದರಲ್ಲಿ 2017ರ ವಿದ್ಯುತ್ ವಾಹನ ನೀತಿಯನ್ನೇ ಅನುಸರಿಸುವುದಾಗಿ ಹೇಳಿದೆ ಎಂದರು.

ಆದರೆ, 2017ರ ನೀತಿ 2020-2025 ತನಕ ಸಮರ್ಪಕವಾಗಿ ಹಾಗೂ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ಇರುವುದಿಲ್ಲ ಎಂಬುದು ತಜ್ಞರ ವಾದವಾಗಿದೆ. ಬೆಂಗಳೂರು ವಿದ್ಯುತ್ ಚಾಲಿತ ವಾಹನಗಳ ಕೇಂದ್ರ ತಾಣ. ಎತರ್ ಎನರ್ಜಿ, ಸನ್ ಮೊಬಿಲಿಟಿ, ಯುಲು, ಮಹೀಂದ್ರ ಎಲೆಕ್ಟ್ರಿಕ್ ಸೇರಿ ಇನ್ನಷ್ಟು ವಿದ್ಯುತ್ ತಯಾರಿಕಾ ಸಂಸ್ಥೆಗಳ ಮನೆಯಾಗಿದೆ. ಬೆಸ್ಕಾಂ ಇತ್ತೀಚಿಗೆ ಹೇಳಿದ ಪ್ರಕಾರ ನಗರದ ವಿವಿಧೆಡೆ ಸರ್ಕಾರಿ ಜಾಗಗಳಲ್ಲಿ ಚಾರ್ಜಿಂಗ್ ಕೇಂದ್ರಗಳಿದ್ದು, 26 ಫಾಸ್ಟ್ ಚಾರ್ಜಿಂಗ್, 100 ಸಹಜ ಚಾರ್ಜಿಂಗ್ ಪಾಯಿಂಟ್​​ಗಳು ಲಭ್ಯವಿದೆ. ನಗರದಲ್ಲಿ ಕೇವಲ 10,000 ವಿದ್ಯುತ್ ಚಾಲಿತ ವಾಹನಗಳಿವೆ.

ಬೇರೆ ರಾಜ್ಯಗಳಲ್ಲಿ ವಿದ್ಯುತ್ ಚಾಲಿತ ವಾಹನ ಖರೀದಿಗೆ ಏನಿದೆ ಉತ್ತೇಜನ?

  • ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವಿದ್ಯುತ್ ಚಾಲಿತ ದ್ವಿಚಕ್ರ, ಆಟೋ ಹಾಗೂ ತ್ರಿಚಕ್ರ ವಾಹನಗಳಿಗೆ ₹30,000,ಕಾರು ಖರೀದಿಗೆ ₹1.5 ಲಕ್ಷ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಹೇಳಿದ್ದರು.
  • ಮಹಾರಾಷ್ಟ್ರ: ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ₹5000, ₹12,000, ₹ 1 ಲಕ್ಷ ರೂಪಾಯಿ ಸಬ್ಸಿಡಿ, ದ್ವಿಚಕ್ರ, ತ್ರಿಚಕ್ರ ಹಾಗೂ ಕಾರು ಖರೀದಿಗೆ ನೀಡುತ್ತಿದೆ ಮಹಾರಾಷ್ಟ್ರ ಸರ್ಕಾರ.
  • ಹೈದರಾಬಾದ್: ಪ್ರೋತ್ಸಾಹ ರೂಪದಲ್ಲಿ ವಿದ್ಯುತ್ ಚಾಲಿತ ಎರಡು ಲಕ್ಷ ದ್ವಿಚಕ್ರ ವಾಹನಕ್ಕೆ 20,000, ತ್ರಿಚಕ್ರ ವಾಹನ ಹಾಗೂ 5000 ವಾಣಿಜ್ಯ ವಾಹನಗಳಿಗೆ ಶೇ.100ರಷ್ಟು ರಸ್ತೆ ತೆರಿಗೆ ಹಾಗೂ ನೋಂದಣಿ ಶುಲ್ಕದಲ್ಲಿ ವಿನಾಯಿತಿ.
  • ಗುಜರಾತ್​: ಒಟ್ಟು ₹798 ಕೋಟಿ ಸಬ್ಸಿಡಿಯನ್ನು ಘೋಷಿಸಿದ್ದು, ₹95,000 ಬೆಲೆಯ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಕ್ಕೆ ₹37,000 ಸಬ್ಸಿಡಿ. ₹1.8 ಲಕ್ಷದ ತ್ರಿಚಕ್ರ ವಾಹನಕ್ಕೆ ₹90,000, ₹13 ಲಕ್ಷ ಟ್ಯಾಕ್ಸಿಗಳಿಗೆ ₹3 ಲಕ್ಷವರೆಗೆ ಸಬ್ಸಿಡಿ. ₹ 1.3 ಕೋಟಿ ಬಸ್​​ಗಳಿಗೆ ₹7 ಲಕ್ಷ ಸಬ್ಸಿಡಿ ನೀಡುತ್ತಿದೆ.
    ಎಫ್​ಕೆಸಿಸಿಐ ಅಧ್ಯಕ್ಷ ಸಿ ಆರ್ ಜನಾರ್ಧನ್

ಕರ್ನಾಟಕದಲ್ಲಿ ಉತ್ತೇಜನ ಕ್ರಮ ಏನಿದೆ?: ಸಾರಿಗೆ ಇಲಾಖೆ ಜೊತೆ ವಾಣಿಜ್ಯ ಹಾಗೂ ಕೈಗಾರಿಕಾ ಇಲಾಖೆ ಸಹಭಾಗಿತ್ವದಲ್ಲಿ ವಿದ್ಯುತ್ ಚಾಲಿತ ಆಟೋಗಳಿಗೆ ₹1 ಲಕ್ಷ ಹಾಗೂ ₹50,000 ಎಲ್​ಪಿಜಿಯಿಂದ ಬ್ಯಾಟರಿ ಪರಿವರ್ತನೆಗೆ ಸಬ್ಸಿಡಿ ನೀಡಲಿದೆ. ಹಾಗೂ ಎಲ್ಲಾ ವಿದ್ಯುತ್ ಚಾಲಿತ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವ ಜೊತೆಗೆ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿತ್ತು.

ಬೇರೆ ರಾಜ್ಯಗಳ ಸಬ್ಸಿಡಿಗಳನ್ನು ಕರ್ನಾಟಕಕ್ಕೆ ಹೋಲಿಸಿದರೆ ಕಾರು, ದ್ವಿಚಕ್ರ ವಾಹನ ಖರೀದಿಗೆ ಯಾವುದೇ ಪ್ರೋತ್ಸಾಹ ಕಂಡು ಬರುತ್ತಿಲ್ಲ. ಜೊತೆಗೆ ಎಲ್ಲಾ ರಾಜ್ಯಗಳಂತೆ ಕರ್ನಾಟಕ ಸರ್ಕಾರ ಕೂಡ ಫೇಮ್ (FAME) ಸಬ್ಸಿಡಿ ನೀಡುತ್ತಿದೆ. ಅಂದಾಜು ₹30,000 ಸಬ್ಸಿಡಿ ದ್ವಿಚಕ್ರ ವಾಹನಗಳಿಗೆ ಕೇಂದ್ರದಿಂದ ಬರುತ್ತಿದೆಯೇ ಹೊರತು ರಾಜ್ಯದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ.

ಇಂಧನ ವಾಹನಗಳಲ್ಲಿ ಸುಮಾರು 2,500 ಉಪಕರಣ ಮತ್ತು ವಿದ್ಯುತ್ ವಾಹನಗಳಲ್ಲಿ 500 ಉಪಕರಣಗಳಿಂದ ವಾಹನ ತಯಾರಾಗುತ್ತದೆ. ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿದರೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದಕ್ಕೆ ಸಾಧ್ಯ. ಇದರಿಂದ ಉತ್ಪಾದಕರಿಗೆ ಹಾಗೂ ಗ್ರಾಹಕರಿಗೆ ಲಾಭದಾಯಕ ಎನ್ನುತ್ತಾರೆ ಜನಾರ್ಧನ್. ಸರ್ಕಾರವು ವಿದ್ಯುತ್ ಚಾಲಿತ ವಾಹನಗಳಿಗೆ ಸಬ್ಸಿಡಿ ನೀಡಬೇಕು. ಮೊದಲಿಗೆ ಸಾರ್ವಜನಿಕ ಸೇವೆಯ ವಾಹನಗಳಾದ ಬಸ್ ಹಾಗೂ ಆಟೋ ವಿದ್ಯುತ್ ವಾಹನಗಳಾಗಿ ಪರಿವರ್ತನೆಯಾಗಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.