ನೆಲಮಂಗಲ: ಶ್ರೀ ಲಕ್ಷ್ಮೀವೆಂಕಟೇಶ್ವರ ಮತ್ತು ಶ್ರೀ ಕೃಷ್ಣ ರುಕ್ಮಣಿ ಅಮ್ಮನವರ ದೇವಾಲಯ ಶಿಥಿಲಗೊಂಡ ಹಿನ್ನೆಲೆ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲಾಗಿದ್ದು, ಶುಕ್ರವಾರ ಸಿದ್ದಗಂಗಾ ಶ್ರೀ ಮತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಉದ್ಘಾಟನೆ ಮಾಡಿದರು.
ವರಮಹಾಲಕ್ಷ್ಮಿ ಹಬ್ಬವಾದ ಹಿನ್ನೆಲೆ ದೇವಸ್ಥಾನದ ಉದ್ಘಾಟನಾ ಕಾರ್ಯ ನೆರವೇರಿಸಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಕೂಡ ಹಳ್ಳಿಗಳಲ್ಲಿ ಉತ್ತಮವಾದ ವಾತಾವರಣ ಕಂಡುಬರುತ್ತಿಲ್ಲ. ನನಗೆ 5 ವರ್ಷದ ಸ್ವಾತಂತ್ರ್ಯ ಸರ್ಕಾರ ಸಿಕ್ಕರೆ, ದೇಶವೇ ನೋಡುವಂತಹ ಕ್ರಾಂತಿಕಾರಕ ಬದಲಾವಣೆ ಮಾಡುತ್ತೇನೆ. ಈ ನಾಡಿನ ಜನತೆಗೆ ನಾನು ಮೋಸ ಮಾಡಿಲ್ಲ, ಈ ನಾಡಿನ ಭವಿಷ್ಯದ ಕುರಿತು ನನ್ನದೇ ಆದ ಕಲ್ಪನೆ ಇದೆ ಎಂದು ಹೇಳಿದರು.
ಈ ವೇಳೆ ಕಾರ್ಯಕ್ರಮಕ್ಕೆ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ, ಮಾಜಿ ಶಾಸಕ ಶ್ರೀನಿವಾಸಮೂರ್ತಿ, ಎ.ಮಂಜು, ಡಿ.ಸಿ.ಗೌರಿಶಂಕರ್ ಸೇರಿದಂತೆ ಸ್ಥಳೀಯರು ಭಾಗವಹಿಸಿದ್ದರು.