ETV Bharat / city

ಐಎಂಎ ಬಹುಕೋಟಿ ವಂಚನೆ: ಸಿಬಿಐಗೆ ಸಿಕ್ಕು ಮಹತ್ವದ ಮಾಹಿತಿ - ಐಎಂಎ ವಂಚನೆ ಪ್ರಕರಣದ ಸಿಬಿಐ ತನಿಖೆ

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಹಗರಣದ ಪ್ರಮುಖ ಆರೋಪಿ ಮನ್ಸೂರ್​ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಮತ್ತೊಂದು ಮಹತ್ವದ ಮಾಹಿತಿ ಬಹಿರಂಗವಾಗಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ
author img

By

Published : Sep 19, 2019, 5:20 PM IST

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಮನ್ಸೂರ್​ನನ್ನು ತೀವ್ರವಾಗಿ ವಿಚಾರಣೆಗೊಳಪಡಿಸಿದ್ದು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ.

ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರ ಮನ್ಸೂರ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ ಬದಲಾಗಿ ಈತ, ವಿದೇಶದಲ್ಲಿಯೂ ವಹಿವಾಟು ನಡೆಸುತ್ತಿದ್ದ ಎಂಬ ವಿಚಾರ ಗೊತ್ತಾಗಿದೆ. ವ್ಯವಹಾರದ ಹಣವನ್ನಿಡಲು ಈತ ನೂರಾರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದು, ಹಣದ ನಿರ್ವಹಣೆಗಾಗಿ ಸುಮಾರು 110 ಖಾತೆಗಳನ್ನು ರಾಷ್ಟ್ರೀಕೃತ, ಖಾಸಗಿ, ಸಹಕಾರಿ ಬ್ಯಾಂಕ್​ಗಳಲ್ಲಿ ಹೊಂದಿದ್ದನಂತೆ. ಈ ಮೂಲಕ ವಾರ್ಷಿಕ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.

ಸಿಬಿಐ ಅಧಿಕಾರಿಗಳು ಬ್ಯಾಂಕಿನ ಹಣದ ವಹಿವಾಟು ಕುರಿತಾದ ಮಾಹಿತಿಯನ್ನು ಮನ್ಸೂರ್​ನಿಂದ ಪಡೆಯುತ್ತಿದ್ದಾರೆ. ಹಾಗೆಯೇ ಐಎಂಎ ಕಂಪನಿಯಿಂದ ಹಲವಾರು ಮಂದಿ ಹಣ ಪಡೆದಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಎಲ್ಲಾ ರಾಜಕೀಯ ವ್ಯಕ್ತಿಗಳು, ಮೌಲ್ವಿಗಳು ಹಾಗು ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ಸದ್ಯದಲ್ಲೇ ವಿಚಾರಣೆಗೊಳಪಡಿಸುವ ಸಾಧ್ಯತೆ ಇದೆ.

Intro:ಐಎಂಎ ಬಹುಕೋಟಿ ವಂಚನೆ ಪ್ರಕರಣ..
ಸಿಬಿಐತನಿಖೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗ..

ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪೊಲೀಸರು ಮನ್ಸೂರನ್ನ ವಿಚಾರಣೆಗೆ ಒಳಪಡಿಸಿ ತನಿಖೆ ಮುಂದುವರೆಸಿದ್ದಾರೆ.

ಸಿಬಿಐ‌ತನಿಖೆ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.‌ಸದ್ಯ ರಾಜ್ಯಗಳಲ್ಲಿ ಮಾತ್ರ ಮನ್ಸೂರ್ ವ್ಯವಹಾರದಲ್ಲಿ ಭಾಗಿಯಾಗಿಲ್ಲ. ಈತ ವಿದೇಶದಲ್ಲಿ ಆರ್ಥಿಕ ವ್ಯವಹಾರಗಳಲ್ಲಿ ಭಾಗಿಯಾಗಿದ್ದಾನೆ.

ವ್ಯವಹಾರದ ಹಣಗಳನ್ನ ಇಡಲು ನೂರಾರು ಬ್ಯಾಂಕ್ ಖಾತೆ ಹೊಂದಿದ್ದು ಹಣದ ನಿರ್ವಹಣೆಗಾಗಿ ಸುಮಾರು 110 ಬ್ಯಾಂಕ್ ಖಾತೆಗಳನ್ನ‌ರಾಷ್ಟ್ರೀಕೃತ,ಖಾಸಗಿ,ಸಹಕಾರಿ ಬ್ಯಾಂಕ್ ಖಾತೆಗಳನ್ನ ಹೊಂದಿ ಇದರ ಮೂಲಕ ವಾರ್ಷಿಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸಿದ್ದ..

ಸದ್ಯ ಸಿಬಿಐ ಬ್ಯಾಂಕಿನ ಹಣದ ವಹಿವಾಟು ಕುರಿತು ಮಾಹಿತಿಯನ್ನ ಮನ್ಸೂರ್ ನೀಂದ ಪಡೆಯುತ್ತಿದ್ದಾರೆ. ಹಾಗೆ ಐಎಂಎ ಕಂಪೆನಿಯಿಂದ ಹಲವಾರು ಮಂದಿ ಹಣವನ್ನ ಪಡೆದಿರುವ ಮಾಹಿತಿ ಇದ್ದು ಹೀಗಾಗಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ರಾಜಕೀಯ ವ್ಯಕ್ತಿಗಳು,ಮೌಲಿಗಳು, ಪೊಲೀಸ್ ಅಧಿಕಾರಿಗಳಿಗೆ ನೋಟಿಸ್ ನೀಡಿ ಸದ್ಯದಲ್ಲೇನವಿಚಾರಣೆ ಗೆ ಓಳಪಡಿಸಲಿದ್ದಾರೆ.

Body:KN_BNG_09_IMA_7204498Conclusion:KN_BNG_09_IMA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.