ETV Bharat / city

ಬೆಂಗಳೂರಿನ ಐಐಎಸ್​ಸಿ ಪ್ರಾಧ್ಯಾಪಕರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ

author img

By

Published : Aug 18, 2020, 5:42 AM IST

ಲಿಕ್ವಿಡ್ಸ್​​ ​(ದ್ರವ) ಹಾಗೂ ಅನಿಲಗಳ ಕುರಿತ ಅಧ್ಯಯನದಲ್ಲಿ ನೀಡಲಾಗುವ ಮಹತ್ವದ ಪ್ರಶಸ್ತಿ ಐಐಎಸ್​ಸಿಯ ಗೌರವ ಪ್ರಾಧ್ಯಾಪಕರಿಗೆ ಸಂದಿದೆ. ಬಹಳ ವರ್ಷಗಳ ನಂತರ ಈ ಪ್ರಶಸ್ತಿ ಭಾರತಕ್ಕೆ ಸಂದಿದೆ.

ಬೆಂಗಳೂರಿನ ಐಐಎಸ್​ಸಿ ಪ್ರಾಧ್ಯಾಪಕರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ
ಬೆಂಗಳೂರಿನ ಐಐಎಸ್​ಸಿ ಪ್ರಾಧ್ಯಾಪಕರಿಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಇಲ್ಲಿನ ಭಾರತೀಯ ವಿಜ್ಞಾನ ಸಂಸ್ಥೆಯ ಗೌರವ ಪ್ರಾಧ್ಯಾಪಕ ಪ್ರೊ.ಬಿಮನ್ ಬಗಚಿ ಅವರು ಜೋಯಲ್ ಹೆನ್ರಿ ಹಿಲ್ದಬ್ರಾಂಡ್ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

'ಥಿಯಾಟರಿಕಲ್ ಮತ್ತು ಎಕ್ಸ್​ಪಿರಿಮೆಂಟಲ್ ಕೆಮೆಸ್ಟ್ರಿ ಆಫ್ ಲಿಕ್ವಿಡ್ಸ್' ಕುರಿತ ಸಾಧನೆ ಹಿನ್ನೆಲೆ ಇವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ 2021ನೇ ಸಾಧಕರಾಗಿ ಪ್ರೊ.ಬಿಮನ್ ಅವರು ಹೊರಹೊಮ್ಮಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಅಮೆರಿಕನ್ ಕೆಮಿಕಲ್ ಸೊಸೈಟಿಯ ಹಿರಿಯ ಮ್ಯಾನೇಜರ್ ಫೆಲಿಸಿಯಾ ಅವರು ಪ್ರಶಸ್ತಿಗೆ ಆಯ್ಕೆ ಮಾಡಿರುವ ಕುರಿತು ಪ್ರೊ.ಬಿಮನ್ ಅವರಿಗೆ ಈಮೇಲ್ ಕಳುಹಿಸಿದ್ದಾರೆ. 2021ರ ಮಾರ್ಚ್ 23 ರಂದು ಟೆಕ್ಸಾಸ್​ನ ಸ್ಯಾನ್ ಆಂಟೋನಿಯೋದಲ್ಲಿ ನಡೆಯಲಿರುವ ರಾಷ್ಟ್ರೀಯ ಸಭೆ ಹಾಗೂ ಎಕ್ಸ್​ಪೋದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯ ನಡೆಯಲಿದೆ.

ಲಿಕ್ವಿಡ್ಸ್ (ದ್ರವ) ಹಾಗೂ ಅನಿಲಗಳ ಕುರಿತ ಅಧ್ಯಯನದಲ್ಲಿ ಇದು ಮಹತ್ವದ ಪ್ರಶಸ್ತಿಯಾಗಿದ್ದು, ಬಹಳ ವರ್ಷಗಳ ನಂತರ ಭಾರತಕ್ಕೆ ಸಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.