ಬೆಂಗಳೂರು: ಕುಮಾರಸ್ವಾಮಿಯವರೇ, ನಿಮಗೆ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ ಕಳಕಳಿ, ಪ್ರಾಮಾಣಿಕತೆ ಇದ್ದರೆ ದಯಮಾಡಿ ಈಗಲೇ ರಾಜೀನಾಮೆ ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಮಡಾ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಎಸ್ವೈ, ವಿಶ್ವಾಸಮತ ತೆಗೆದುಕೊಳ್ಳದೆ ಕಾರ್ಯಕಲಾಪ ನಡೆಸುವುದಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ವಿಶ್ವ ಪ್ರಯತ್ನ ಮಾಡಿದರೂ ಸಹ ಎಂಟಿಬಿ ನಾಗರಾಜ್ ಹಾಗೂ ಸುಧಾಕರ್ ನಿಮ್ಮ ಜೊತೆ ಇರಲ್ಲ ಅಂತ ಹೋಗಿದ್ದಾರೆ. ಅವರನ್ನೂ ಸೇರಿಸಿ ಈಗಾಗಲೇ 15 ಜನ ಶಾಸಕರು ಸುಪ್ರೀಂಕೋರ್ಟ್ಗೆ ಹೋಗಿದ್ದಾರೆ. ಹೀಗಾಗಿ ನೀವು ವಿಶ್ವಾಸ ಮತ ಯಾಚಿಸದೇ ನಾಳಿನ ಸದನದಲ್ಲಿ ಬೇರೆ ಕಲಾಪಕ್ಕೆ ಅವಕಾಶ ಇಲ್ಲ ಎಂದರು.
ಮಂಗಳವಾರ ತೀರ್ಪು ಪ್ರಕಟವಾಗಲಿದೆ. ಸೋಮವಾರ ಕಾನ್ಫಿಡೆನ್ಸ್ ಮೋಷನ್ ವೇಳೆ ನೀವು ರಾಜೀನಾಮೆ ನೀಡಬೇಕಾಗುತ್ತೆ ಎಂದು ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.