ETV Bharat / city

ಪರೀಕ್ಷೆ ಬರೆಯದೇ ಹೋದರೆ ನನ್ನ ಭವಿಷ್ಯ ಹಾಳಾಗುತ್ತೆ ; ಹಿಜಾಬ್ ಧರಿಸಿ ಪರೀಕ್ಷಾ ಕೊಠಡಿಯೊಳಗೆ ಬರೋಲ್ಲ.. - Second PUC Exam

ಮನೆಯಿಂದ ಬರುವಾಗ ಹಿಜಾಬ್ ಧರಿಸಿಯೇ ಬಂದಿದ್ದೇನೆ.‌ ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸುವುದಿಲ್ಲ. ಹಿಜಾಬ್ ತೆಗೆದು ಪರೀಕ್ಷೆ ಬರೆಯುತ್ತೇನೆ. ಹಿಜಾಬ್ ಬೇಕು. ಆದರೆ, ಸರ್ಕಾರ ಹೇಳುವ ನಿಯಮವನ್ನೂ ಪಾಲಿಸಬೇಕು ಎಂದಿದ್ದಾರೆ ವಿದ್ಯಾರ್ಥಿನಿ ಆಸಿಯಾ ಬಿ..

Student Asiya B. and Parent saiyyad Arif
ವಿದ್ಯಾರ್ಥಿನಿ ಆಸಿಯಾ ಬಿ. ಹಾಗೂ ಪೋಷಕರಾದ ಸೈಯದ್​ ಆರಿಫ್​
author img

By

Published : Apr 22, 2022, 12:36 PM IST

ಬೆಂಗಳೂರು : ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗ್ತಿದೆ. ಕಳೆದ ಸಲ ಕೋವಿಡ್ ಭೀತಿ ಇದ್ದರೆ, ಈ ಬಾರಿ ಪರೀಕ್ಷಾ ಕೇಂದ್ರದಲ್ಲಿ ಹಿಜಾಬ್ ಕಾವು ಹೆಚ್ಚಾಗಿದೆ. ಪರೀಕ್ಷಾ ಕೇಂದ್ರಕ್ಕೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಗಳು ಆಗಮಿಸಿದ್ದರು. ‌ನಗರದ ಮಲ್ಲೇಶ್ವರಂನ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಬಂದಿದ್ದಾರೆ. ಆದರೆ, ಪರೀಕ್ಷಾ ಕೊಠಡಿಗೆ ಹಿಜಾಬ್​ ತೆಗೆದಿರಿಸಿ ತೆರಳಿದ್ದಾರೆ.

ಬುರ್ಕಾ ತೆಗೆದಿರಿಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು..

ಈ ವೇಳೆ ಮಾತನಾಡಿದ ವಿದ್ಯಾರ್ಥಿನಿ ಆಸಿಯಾ ಬಿ., ಮನೆಯಿಂದ ಬರುವಾಗ ಹಿಜಾಬ್ ಧರಿಸಿಯೇ ಬಂದಿದ್ದೇನೆ.‌ ಪರೀಕ್ಷಾ ಕೊಠಡಿಯಲ್ಲಿ ಹಿಜಾಬ್ ಧರಿಸುವುದಿಲ್ಲ. ಹಿಜಾಬ್ ತೆಗೆದು ಪರೀಕ್ಷೆ ಬರೆಯುತ್ತೇನೆ. ಪರೀಕ್ಷೆ ಬರೆಯದೇ ಹೋದರೆ ನನ್ನ ಭವಿಷ್ಯ ಹಾಳಾಗುತ್ತದೆ. ಹಿಜಾಬ್ ಬೇಕು. ಆದರೆ, ಸರ್ಕಾರ ಹೇಳುವ ನಿಯಮವನ್ನೂ ಪಾಲಿಸಬೇಕು ಎಂದು ತಿಳಿಸಿದರು.

ಬಳಿಕ ಮಾತನಾಡಿದ ಆಸಿಯಾ ಬಿ., ಪೋಷಕರಾದ ಸೈಯದ್ ಆರಿಫ್, ನಮ್ಮ ತಾಯಿ, ಹೆಂಡ್ತಿ ಎಲ್ಲರೂ ಹಿಜಾಬ್ ಹಾಕಿಕೊಂಡೆ ಹೋಗೋದು. ಸ್ಕೂಲ್​ಗೆ ಎಲ್ಲ ಹಿಜಾಬ್ ಹಾಕಿಕೊಂಡೆ ಹೋಗ್ತಾ ಇದ್ದರೂ, ಇದೀಗ ಈ ಪರಿಸ್ಥಿತಿಯಿಂದಾಗಿ ಮಗಳು ಕ್ಲಾಸ್ ರೂಮಿಗೆ ಹೋಗಿ ಹಿಜಾಬ್ ಧರಿಸದೆ ಪರೀಕ್ಷೆ ಬರೆಯುತ್ತಾಳೆ ಎಂದರು.

ನಂತರ‌ ಪರೀಕ್ಷಾ ಮೇಲ್ವಿಚಾರಣೆ ಸಂಬಂಧ ಮಾತಾನಾಡಿದ ಬೆಂಗಳೂರು ಉತ್ತರ ಡಿಡಿಪಿಐ ಶ್ರೀರಾಮ್, ಇಂದಿನಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಪ್ರಾರಂಭವಾಗಿದೆ. ಬೆಂಗಳೂರು ಉತ್ತರದಲ್ಲಿ ಎಲ್ಲಾ ರೀತಿಯ ಪರೀಕ್ಷೆ ಸಿದ್ದತೆ ಮುಗಿದಿದೆ. SOP ಪ್ರಕಾರ ಪರೀಕ್ಷೆ ನಡೆಸಲಾಗುತ್ತಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ. ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ. ಒಂದು ವೇಳೆ ಪಾಸಿಟಿವ್ ಬಂದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಇಂದು ತರ್ಕಶಾಸ್ತ್ರ, ವ್ಯವಹಾರ ಅಧ್ಯಯ‌ನ ಪೇಪರ್ ಪರೀಕ್ಷೆ ನಡೆಯುತ್ತಿದ್ದು, ಶಿಕ್ಷಣ ಇಲಾಖೆ ನಿಯಮಾವಳಿಯಂತೆಯೇ ಪರೀಕ್ಷೆ ಆರಂಭವಾಗಿದೆ.
ಬೆಂಗಳೂರಿನಲ್ಲಿ ಯಾವುದೇ ಹಿಜಾಬ್ ಗೊಂದಲ ಪ್ರಕರಣ ಕಂಡು ಬಂದಿಲ್ಲ ಎಂದರು.

ಇದನ್ನೂ ಓದಿ: ಉಡುಪಿ: ಹಿಜಾಬ್​ ಧರಿಸಿ ಬಂದ ಇಬ್ಬರಿಗೆ ಪರೀಕ್ಷಾ ಕೇಂದ್ರಕ್ಕೆ ನೋ ಎಂಟ್ರಿ..ಎಕ್ಸಾಂ ಬರೆಯದೇ ಹೊರನಡೆದ ವಿದ್ಯಾರ್ಥಿನಿಯರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.