ETV Bharat / city

ದೇವೇಗೌಡ್ರ ಬಗ್ಗೆ ಮಾತಾಡಲ್ಲ, ಹೆಚ್​ಡಿಕೆ ಬಗ್ಗೆಯೂ ಏನೂ ಹೇಳಲ್ಲ: ಚೆಲುವರಾಯಸ್ವಾಮಿ

ಮಂಡ್ಯ ಹಾಲು ಒಕ್ಕೂಟ ಸ್ಥಳೀಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯ ಅನರ್ಹತೆಗೆ ನಾನು ಕಾರಣ ಎಂದು ದೇವೇಗೌಡರು ಆರೋಪಿಸಿದ್ದಾರೆ. ಅವರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ. ಆದರೆ ನಮಗೆ ಕಲಿಸಿಕೊಟ್ಟಿದ್ದೇ ಕುಮಾರಸ್ವಾಮಿ, ರೇವಣ್ಣ. ಯಾವ್ಯಾವ ಪಕ್ಷದವರ ಜೊತೆ ಹೇಗೆ, ಯಾವ ಸಂದರ್ಭ ಮಾತನಾಡಬೇಕು ಎನ್ನುವುದನ್ನು ಅವರೇ ನಮಗೆ ಕಲಿಸಿಕೊಟ್ಟಿದ್ದಾರೆ. ಅದರಂತೆಯೇ ನಾವು ಮಾಡಬೇಕಾಗುತ್ತದೆ ಎಂದರು.

ಚೆಲುವರಾಯಸ್ವಾಮಿ
author img

By

Published : Sep 26, 2019, 2:59 AM IST

ಬೆಂಗಳೂರು: ದೇವೇಗೌಡರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ. ಇಷ್ಟು ದಿನ ಕುಮಾರಸ್ವಾಮಿ ಬಗ್ಗೆ ಮಾತಾಡ್ತಾ ಇದ್ದೆ. ಇನ್ಮುಂದೆ ಕುಮಾರಸ್ವಾಮಿ ಬಗ್ಗೆಯೂ ಏನೂ ಮಾತನಾಡಲ್ಲ ಎಂದು ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ಬಳಿಕ ಮಾತನಾಡಿದ ಅವರು, ಮಂಡ್ಯ ಹಾಲು ಒಕ್ಕೂಟ ಸ್ಥಳೀಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿಯ ಅನರ್ಹತೆಗೆ ನಾನು ಕಾರಣ ಎಂದು ದೇವೇಗೌಡರು ಆರೋಪಿಸಿದ್ದಾರೆ. ಅವರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತನಾಡಲ್ಲ. ಆದರೆ ನಮಗೆ ಕಲಿಸಿಕೊಟ್ಟಿದ್ದೇ ಕುಮಾರಸ್ವಾಮಿ, ರೇವಣ್ಣ. ಇದೇ ನಮ್ಮ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್​ನ ಹತ್ತು ಜನರನ್ನು ಅಮಾನತುಗೊಳಿಸಿ ಚುನಾವಣೆಗೆ ನಿಲ್ಲದಂತೆ ಮಾಡಿದ್ದರು. ಸಹಕಾರ ಸಂಸ್ಥೆಗಳಲ್ಲಿ ಅವರಿಗೊಂದು ಕಾನೂನು ನಮಗೊಂದು ಕಾನೂನು ಅಂತ ಬೇರೆ ಇರಲ್ಲ. ಅವರಿಗೆ ಇರುವ ಕಾನೂನು ನಮಗೂ ಇರುತ್ತದೆ ಎಂದರು.

ನಮ್ಮ ಮಾಗಡಿ ಬಾಲಕೃಷ್ಣ ಕ್ಷೇತ್ರದಲ್ಲೂ ಈ ರೀತಿ ಆಯ್ತು. ಕಾಂಗ್ರೆಸ್​ನಿಂದ ಆಯ್ಕೆಯಾಗಿದ್ದ 8 ಮಂದಿ ಅಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರನ್ನು ರಾತ್ರೋರಾತ್ರಿ ಅಮಾನತುಗೊಳಿಸಲಾಯಿತು. ಮೂರ್ತಿ ಎಂಬುವರು ಒಂದು ಅವಕಾಶ ಕಳೆದುಕೊಂಡಿದ್ದರು. ಎಲ್ಲವನ್ನೂ ನಮ್ಮ ನಾಯಕರೇ ನಮಗೆ ಕಲಿಸಿಕೊಟ್ಟಿದ್ದಾರೆ. ಇವರ ಸಹೋದರ ಒಕ್ಕೂಟದಲ್ಲಿ ಕಾರ್ಯದರ್ಶಿಯಾಗಿರುವ ಹಿನ್ನೆಲೆ ಕುಟುಂಬದ ಮತ್ತೊಬ್ಬ ಸದಸ್ಯ ಸ್ಪರ್ಧೆ ಮಾಡಬಾರದು ಎನ್ನುವ ಕಾರಣ ನೀಡಿ ಅಮಾನತುಗೊಳಿಸಲಾಗಿದೆ. ಇಲ್ಲಿ ನನ್ನ ಕೈವಾಡವೇನು ಇಲ್ಲ ಎಂದರು.

ಚೆಲುವರಾಯಸ್ವಾಮಿ, ಮಾಜಿ ಸಚಿವ

ಯಾವ್ಯಾವ ಪಕ್ಷದವರ ಜೊತೆ ಹೇಗೆ, ಯಾವ ಸಂದರ್ಭ ಮಾತನಾಡಬೇಕು ಎನ್ನುವುದನ್ನು ಅವರೇ ನಮಗೆ ಕಲಿಸಿಕೊಟ್ಟಿದ್ದಾರೆ. ಅದರಂತೆಯೇ ನಾವು ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಕಾಲೆಳೆಯುವ ಪ್ರಯತ್ನ ಮಾಡಿದರು.

ಸ್ನೇಹ-ವಿಶ್ವಾಸ ಎಲ್ಲರೊಂದಿಗೂ ಇದೆ...

ನನಗೆ ಸ್ನೇಹ ಹಾಗೂ ವಿಶ್ವಾಸ ಎಲ್ಲರೊಂದಿಗೂ ಇದೆ. ಎಲ್ಲಾ ಪಕ್ಷದಲ್ಲಿ ನನ್ನ ಆಪ್ತರಿದ್ದಾರೆ. ನಾವು ಬಿಜೆಪಿ ಅವರ ಜೊತೆ ಮಾತಾಡಿದ್ರೆ ಬಿಜೆಪಿಗೆ ಹೋಗ್ತೀವಿ ಅಂತಾ ಅರ್ಥನಾ? ನಾನು ಕಾಂಗ್ರೆಸ್ಸಿಗ. ಬಿಜೆಪಿಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಬಿಜೆಪಿಯವರು ನನ್ನನ್ನು ಕರೆದಿಲ್ಲ. ಸ್ನೇಹ, ವಿಶ್ವಾಸದಿಂದ ಎಲ್ಲರ ಜೊತೆ ಇದೇ ರೀತಿ ಇದ್ದೇನೆ. ಇವರು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿಲ್ಲವಾ. ದೊಡ್ಡವರ ಬಗ್ಗೆ ಚರ್ಚೆ ಬೇಕಾ? ಇದರಿಂದಾಗಿ ಇನ್ನು ಮುಂದೆ ಅವರು ಮಾತನಾಡಿದ್ದನ್ನು ಕೇವಲ ಕೇಳಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ಅವರ ಬಗ್ಗೆ ಮಾತನಾಡುವುದಿಲ್ಲ ಎಂದರು.

Intro:newsBody:ದೇವೇಗೌಡ್ರ ಬಗ್ಗೆ ಮಾತನಾಡಲ್ಲ, ಇನ್ನು ಮೇಲೆ ಕುಮಾರಸ್ವಾಮಿ ಬಗ್ಗೆಯೂ ಮಾತನಾಡಬಾರದು ಎಂದು ಕೊಂಡಿದ್ದೇನೆ: ಚೆಲುವರಾಯಸ್ವಾಮಿ

ಬೆಂಗಳೂರು: ದೇವೇಗೌಡರು ದೊಡ್ಡವರಿದ್ದಾರೆ. ಅವರ ಬಗ್ಗೆ ಮಾತಾಡಲ್ಲ. ಇಷ್ಟು ದಿನ ಕುಮಾರಸ್ವಾಮಿ ಬಗ್ಗೆ ಮಾತಾಡ್ತಾ ಇದ್ದೆ. ಇನ್ಮುಂದೆ ಕುಮಾರಸ್ವಾಮಿ ಬಗ್ಗೆನು ಏನು ಮಾತಾಡಲ್ಲ ಎಂದು ಮಾಜಿ ಸಚಿವ ಎನ್ ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ ಸಭೆಯಲ್ಲಿ ಪಾಲ್ಗೊಂಡು ತೆರಳಿದ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿ, ಮಂಡ್ಯ ಹಾಲು ಒಕ್ಕೂಟ ಸ್ಥಳೀಯ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಅನರ್ಹತೆಗೆ ನಾನು ಕಾರಣ ಎಂದು ದೇವೇಗೌಡರು ಆರೋಪ ಮಾಡಿದ್ದಾರೆ. ಅವರು ದೊಡ್ಡವರಿದ್ದಾರೆ ದೇವೇಗೌಡರ ಬಗ್ಗೆ ಮಾತಾಡಲ್ಲ. ಆದರೆ ನಮಗೆ ಕಲಿಸಿಕೊಟ್ಟಿದ್ದೆ ಕುಮಾರಸ್ವಾಮಿ, ರೇವಣ್ಣ. ಇದೇ ನಮ್ಮ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್ನ ಹತ್ತು ಜನರನ್ನ ಅಮಾನತುಗೊಳಿಸಿ ಚುನಾವಣೆಗೆ ನಿಲ್ಲದಂತೆ ಮಾಡಿದ್ದರು. ಸಹಕಾರ ಸಂಸ್ಥೆಗಳಲ್ಲಿ ಅವರಿಗೊಂದು ಕಾನೂನು ನಮಗೊಂದು ಕಾನೂನು ಅಂತ ಬೇರೆ ಇರಲ್ಲ. ಅವರಿಗೆ ಇರುವ ಕಾನೂನು ನಮಗೂ ಇರುತ್ತದೆ ಎಂದರು.
ನಮ್ಮ ಮಾಗಡಿ ಬಾಲಕೃಷ್ಣ ಕ್ಷೇತ್ರದಲ್ಲೂ ಈ ರೀತಿ ಆಯ್ತು. ಕಾಂಗ್ರೆಸ್ನಿಂದ ಆಯ್ಕೆಯಾಗಿದ್ದ 8ಮಂದಿ ಅಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರನ್ನು ರಾತ್ರೋರಾತ್ರಿ ಅಮಾನತುಗೊಳಿಸಲಾಯಿತು. ಮೂರ್ತಿ ಎಂಬವರು ಒಂದು ಅವಕಾಶ ಕಳೆದುಕೊಂಡಿದ್ದರು. ಎಲ್ಲವನ್ನೂ ನಮ್ಮ ನಾಯಕರೇ ನಮಗೆ ಕಲಿಸಿಕೊಟ್ಟಿದ್ದಾರೆ. ಇವರ ಸೋದರ ಒಕ್ಕೂಟದಲ್ಲಿ ಕಾರ್ಯದರ್ಶಿಯಾಗಿರುವ ಹಿನ್ನೆಲೆ ಕುಟುಂಬದ ಮತ್ತೊಬ್ಬ ಸದಸ್ಯ ಸ್ಪರ್ಧೆ ಮಾಡಬಾರದು ಎನ್ನುವ ಕಾರಣ ನೀಡಿ ಅಮಾನತು ಗೊಳಿಸಲಾಗಿದೆ. ಇಲ್ಲಿ ನನ್ನ ಕೈವಾಡವೇನು ಇಲ್ಲ ಎಂದರು.
ಯಾವ್ಯಾವ ಪಾರ್ಟಿ ಅವರ ಜೊತೆ ಹೇಗೆ ಯಾವ ಸಂದರ್ಭ ಮಾತನಾಡಬೇಕು ಎನ್ನುವುದನ್ನು ಅವರೇ ನಮಗೆ ಕಳಿಸಿಕೊಟ್ಟಿದ್ದಾರೆ ಹಾಗೆ ನಾವು ಒಂಚೂರು ಮಾಡಬೇಕಾಗುತ್ತದೆ ಎಂದು ಪರೋಕ್ಷವಾಗಿ ದೇವೇಗೌಡರ ಹಾಗೂ ಕುಮಾರಸ್ವಾಮಿಯವರ ಕಾಲೆಳೆಯುವ ಕಾರ್ಯ ಮಾಡಿದರು.
ಸ್ನೇಹ ವಿಶ್ವಾಸ ಎಲ್ಲರೊಂದಿಗೂ ಇದೆ
ನನಗೆ ಸ್ನೇಹ ಹಾಗೂ ವಿಶ್ವಾಸ ಎಲ್ಲರೊಂದಿಗೂ ಇದೆ. ಎಲ್ಲಾ ಪಕ್ಷದಲ್ಲಿ ನನ್ನ ಆಪ್ತ ರಿದ್ದಾರೆ. ನಾವು ಬಿಜೆಪಿ ಅವರ ಜೊತೆ ಮಾತಾಡಿದ್ರೆ ಬಿಜೆಪಿಗೆ ಹೋಗ್ತಿವಿ ಅಂತಾ ಅರ್ಥನಾ? ನಾನು ಕಾಂಗ್ರೆಸ್ಸಿಗ ಬಿಜೆಪಿಗೆ ಹೋಗುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ ಬಿಜೆಪಿಯವರು ನನ್ನನ್ನು ಕರೆದಿಲ್ಲ. ಸ್ನೇಹ ವಿಶ್ವಾಸದಿಂದ ಎಲ್ಲರಜೊತೆ ಇದೇ ರೀತಿ ಇದ್ದೇನೆ. ಇವರು ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಸರ್ಕಾರ ಮಾಡಿಲ್ಲವಾ ದೊಡ್ಡವರ ಬಗ್ಗೆ ಚರ್ಚೆ ಬೇಕಾ? ಇದರಿಂದಾಗಿ ಇನ್ನು ಮುಂದೆ ಅವರು ಮಾತನಾಡಿದ್ದನ್ನು ಕೇವಲ ಕೇಳಿಸಿಕೊಳ್ಳಬೇಕು ಎಂದುಕೊಂಡಿದ್ದೇನೆ. ಅವರ ಬಗ್ಗೆ ಮಾತನಾಡುವುದಿಲ್ಲ. ನಿನ್ನೆ ಅವರು ಸಿದ್ಧರಾಮಯ್ಯ ಅವರ ಬಗ್ಗೆ ಕೊಡ ಮಾತನಾಡಿದ್ದು ಅನಗತ್ಯವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಸಿದ್ದರಾಮಯ್ಯ ಚುನಾವಣೆ ಸಂದರ್ಭ ಮಾತನಾಡಿದ್ದಾರೆ ಹೊರತಾಗಿ ಇದನ್ನು ಚುನಾವಣೆ ಸಂದರ್ಭದಲ್ಲಿ ದುರ್ಬಳಕೆ ಮಾಡಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಎಲ್ಲವನ್ನು ಸದ್ಯ ಸ್ವೀಕರಿಸೋಣ ಸಮಯ ಬಂದಾಗ ಕಾಲವೇ ಉತ್ತರಿಸುತ್ತದೆ ಎಂದರು.
ಒಂದಿಬ್ಬರು ಆಕಾಂಕ್ಷಿಗಳು ಇದ್ದಾರೆ
ಕೆ.ಆರ್ ಪೇಟೆ ಉಪಚುನಾವಣೆ ಬಗ್ಗೆನೆ ಮಾತಾಡೊಕೆ ಬಂದಿದ್ವಿ. ಇನ್ನೂ ಮೂರು ದಿನದಲ್ಲಿ ಕ್ಲಾರಿಫೈ ಆಗುತ್ತೆ. ಕೆ.ಆರ್ ಪೇಟೆಯಲ್ಲಿ ಸೀನಿಯರ್ ಚಂದ್ರ ಶೇಖರ್ ಅಂತಾ ಇದಾರೆ, ಮತ್ತೆ ಕೃಷ್ಣ ಮೂರ್ತಿ ಅಂತಾ ಇದಾರೆ. ಇನ್ನೂ ಮೂರು ದಿನದಲ್ಲಿ ಇದರ ಬಗ್ಗೆ ಕ್ಲಿಯರ್ ಆಗುತ್ತೆ. ಮಾಗಡಿ ಬಾಲಕೃಷ್ಣ ಯಶವಪುರದಿಂದ ನಿಲ್ಲುವ ವಿಚಾರ ಇಲ್ಲ ಬಾಲಕೃಷ್ಣ ಎಲ್ಲೂ ಸ್ಪರ್ದೆ ಮಾಡಲ್ಲ ಎಂದಿದ್ದೇವೆ ಎಂದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.