ETV Bharat / city

ಕಣ್ಣಿಗೆ ಸೋಂಕು ತಗುಲಿದ ಕಾರಣ ದೆಹಲಿ ಪ್ರವಾಸ ರದ್ದುಗೊಳಿಸಿದ್ದೇನೆ: ಸಿದ್ದರಾಮಯ್ಯ - ದೆಹಲಿ ಪ್ರವಾಸ

ನಾನು ವೈದ್ಯರ ಸಲಹೆಯಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡಿದ್ದೆ. ಆದ್ರೂ ಸಹ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಣ್ಣಿಗೆ ಸೋಂಕು ಉಂಟಾಗಿದೆ. ಈಗ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದೇನೆ. ದೆಹಲಿ ಪ್ರವಾಸವನ್ನೂ ರದ್ದು ಮಾಡಬೇಕಾಯ್ತು. ವಿಶ್ರಾಂತಿ ಬಳಿಕ ಸೋಮವಾರದಿಂದ ಮತ್ತೆ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಸಿದ್ದರಾಮಯ್ಯ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸಿದ್ದರಾಮಯ್ಯ
author img

By

Published : Aug 22, 2019, 3:11 PM IST

ಬೆಂಗಳೂರು: ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಣ್ಣಿಗೆ ಸೋಂಕು ಉಂಟಾಗಿದೆ. ಹಾಗಾಗಿ ದೆಹಲಿ ಪ್ರವಾಸ ರದ್ದುಗೊಳಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

Siddaramaiah tweet
ಸಿದ್ದರಾಮಯ್ಯ ಟ್ವೀಟ್​

ನಾನು ವೈದ್ಯರ ಸಲಹೆಯಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡಿದ್ದೆ. ಆದ್ರೆ ಈಗ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದೇನೆ. ಜೊತೆಗೆ ಇದೇ ಕಾರಣಕ್ಕೆ ದೆಹಲಿ ಪ್ರವಾಸವನ್ನು ರದ್ದು ಮಾಡಬೇಕಾಯ್ತು. ವಿಶ್ರಾಂತಿ ಬಳಿಕ ಸೋಮವಾರದಿಂದ ಮತ್ತೆ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ತಿಳಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಮೂರು ದಿನ ನಡೆಸಿದ ಪ್ರವಾಸ ಸಂದರ್ಭ ಕಣ್ಣಿನ ಘಾಸಿಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಕಣ್ಣು ಮತ್ತೆ ಸೋಂಕಿಗೆ ತುತ್ತಾಗಿದೆ. ನಿರಂತರ ಓಡಾಟ, ಜನರ ಒಡನಾಟ, ಧೂಳು, ಹೊಗೆ ಮಧ್ಯೆ ಕಣ್ಣಿನ ಸೋಂಕು ಹೆಚ್ಚಾಗಿದೆ. ಇದರಿಂದ ಕಣ್ಣು ಸಮಸ್ಯೆ ಸುಧಾರಿಸುವವರೆಗೂ ಮನೆಯಲ್ಲೇ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.

ಇನ್ನು ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆ ಅಸಮಾಧಾನಗೊಂಡಿದ್ದ ಉಮೇಶ್ ಕತ್ತಿ ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್​ನ ಕೆಲ ನಾಯಕರನ್ನು ಭೇಟಿ ಮಾಡಿ, ಸಮಾಲೋಚಿಸಿದ್ದಾರೆ ಎನ್ನಲಾಗುತ್ತಿದೆ. ಇಂದು ಸಹ ಸಿದ್ದರಾಮಯ್ಯರವರನ್ನು ಭೇಟಿ ಮಾಡಿ ಸಮಾಲೋಚಿಸುವ ಸಾಧ್ಯತೆ ಇತ್ತು. ಆದರೆ ಸಿದ್ದರಾಮಯ್ಯಗೆ ಕಣ್ಣಿನ ಸಮಸ್ಯೆ ಇರುವ ಹಿನ್ನೆಲೆ ಕೇವಲ ದೂರವಾಣಿ ಮೂಲಕ ಉಮೇಶ್ ಕತ್ತಿ ಜೊತೆ ಮಾತುಕತೆ ನಡೆಸಿ ಸುಮ್ಮನಾಗಿದ್ದಾರೆ ಎನ್ನಲಾಗಿದೆ.

Intro:newsBody:ದೆಹಲಿ ಪ್ರವಾಸ ರದ್ದುಗೊಳಿಸಿದ್ದೇನೆ ಎಂದು ಟ್ವಿಟ್ ಮಾಡಿದ ಸಿದ್ದರಾಮಯ್ಯ, ಉಮೇಶ್ ಕತ್ತಿ ಭೇಟಿಗೂ ಸಿಗದ ಅವಕಾಶ

ಬೆಂಗಳೂರು: ಶಸ್ತ್ರಚಿಕಿತ್ಸೆಗೀಡಾಗಿರುವ ಕಣ್ಣಿಗೆ ಸೋಂಕು ಉಂಟಾಗಿದೆ. ಇದರಿಂದ ದಿಲ್ಲಿ ಪ್ರವಾಸ ರದ್ಧುಗೊಳಿಸಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಸಂಬಂಧ ಇಂದು ಟ್ವೀಟ್ ಮಾಡಿರುವ ಅವರು, ವೈದ್ಯರ ಸಲಹೆಯಂತೆ ಪ್ರವಾಹಪೀಡಿತ ಪ್ರದೇಶದಲ್ಲಿ ಪ್ರವಾಸ ಮಾಡಿದ್ದೆ. ಈ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದು ಮಾಡಿದ್ದೇನೆ. ಜೊತೆಗೆ ಇದೇ ಕಾರಣಕ್ಕೆ ದೆಹಲಿ ಪ್ರವಾಸವನ್ನು ರದ್ದು ಮಾಡಬೇಕಾಯ್ತು ಎಂದು ತಿಳಿಸಿದ್ದಾರೆ.
ವಿಶ್ರಾಂತಿ ಬಳಿಕ ಸೋಮವಾರದಿಂದ ಮತ್ತೆ ಪ್ರವಾಸ ಕೈಗೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರ ಬಿಡುಗಡೆ
ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ಮೂರು ದಿನ ನಡೆಸಿದ ಪ್ರವಾಸ ಸಂದರ್ಭ ಕಣ್ಣಿನ ಘಾಸಿಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ಕಣ್ಣು ಮತ್ತೆ ಸೋಂಕಿಗೆ ತುತ್ತಾಗಿದೆ. ನಿರಂತರ ಓಡಾಟ, ಜನರ ಒಡನಾಟ, ಧೂಳು, ಹೊಗೆ ಮಧ್ಯೆ ಕಣ್ಣಿನ ಸೋಂಕು ಹೆಚ್ಚಾಗಿದೆ. ಇದರಿಂದ ಸಿದ್ದರಾಮಯ್ಯ ಕಣ್ಣಿಗೆ ಆದ ಘಾಸಿಯ ಚಿತ್ರ ಕೂಡ ಬಿಡುಗಡೆಯಾಗಿದೆ. ಕಣ್ಣು ಸಮಸ್ಯೆ ಸುಧಾರಿಸುವವರೆಗೂ ಮನೆಯಲ್ಲೇ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
ಉಮೇಶ್ ಕತ್ತಿ ಮಾತುಕತೆ?
ಸಿದ್ದರಾಮಯ್ಯ ಕಣ್ಣಿನ ಸಮಸ್ಯೆ ಹಿನ್ನೆಲೆ ಇಂದು ಅವರನ್ನು ಭೇಟಿಯಾಗಬೇಕಿತ್ತು ಉಮೇಶ್ ಕತ್ತಿ ಕೇವಲ ದೂರವಾಣಿ ಮೂಲಕ ಮಾತುಕತೆ ನಡೆಸಿ ಸುಮ್ಮನಾಗಿ ದ್ದಾರೆ ಎನ್ನಲಾಗಿದೆ. ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಉಮೇಶ್ ಕತ್ತಿ ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಕೆಲ ನಾಯಕರನ್ನು ಭೇಟಿ ಮಾಡಿ ಸಮಾಲೋಚಿಸಿ ಇದ್ದಾರೆ ಎಂಬ ಮಾಹಿತಿ ಇದ್ದು, ಇದೇ ನಿಟ್ಟಿನಲ್ಲಿ ಇಂದು ಸಿದ್ದರಾಮಯ್ಯರನ್ನು ಭೇಟಿ ಮಾಡಿ ಸಮಾಲೋಚಿಸುವ ಸಾಧ್ಯತೆ ಇತ್ತು. ಆದರೆ ಸಿದ್ದರಾಮಯ್ಯ ಕೊನೆಯಾಗುವ ಹಿನ್ನೆಲೆ ಭೇಟಿಗೆ ನಿರಾಕರಿಸಿದ್ದಾರೆ. ಹೀಗಾಗಿ ದೂರವಾಣಿ ಮೂಲಕವೇ ಉಮೇಶ್ ಕತ್ತಿ ಮಾತನಾಡಿದ್ದಾರೆ ಎಂಬ ಮಾಹಿತಿ ಇದೆ.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.