ETV Bharat / city

ರಾಜೀನಾಮೆ ಕೊಟ್ಟವರ ಮನವೊಲಿಸುತ್ತೇವೆ, ಪ್ರವೀಣ್ ಮನೆಗೆ ಇಂದು ಸಿಎಂ ಜೊತೆ ಭೇಟಿ: ಕಟೀಲ್

author img

By

Published : Jul 28, 2022, 4:00 PM IST

ಪ್ರವೀಣ್ ಮನೆಗೆ ಇಂದು ನಾನು ಮತ್ತು ಸಿಎಂ ಭೇಟಿ ನೀಡಲಿದ್ದೇವೆ- ಪಕ್ಷವು ಅವರಿಗೆ ಸಾಂತ್ವನ ಹೇಳುವುದಲ್ಲದೆ, ಸರ್ಕಾರ ಅವರ ಆಶಯಗಳನ್ನು ಈಡೇರಿಸಲಿದೆ- ನಳೀನ್ ಕುಮಾರ್ ಕಟೀಲ್

kateel
kateel

ಬೆಂಗಳೂರು: ಪಕ್ಷದ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಪಕ್ಷಕ್ಕೆ ರಾಜೀನಾಮೆ ಕೊಟ್ಟವರನ್ನು ಕರೆದು ಮಾತನಾಡಿ ಸಮಸ್ಯೆ ಬಗೆಹರಿಸಲಾಗುತ್ತದೆ. ಈಗಾಗಲೇ ಕೆಲವರ ಜೊತೆ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದ್ದೇವೆ ಎಂದು ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸುದ್ದಿಗಾರರಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದರು.

ನಿನ್ನೆ ದುಃಖ ಮತ್ತು ಭಾವನೆ ಹೊರಹಾಕುವ ಸಂದರ್ಭದಲ್ಲಿ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಸಹಜವಾಗಿ ಕಾರ್ಯಕರ್ತರಿಗೆ ಆಕ್ರೋಶ ಇರುತ್ತದೆ. ಆದರೆ ನಮ್ಮ ಹೋರಾಟ ಏನಿದ್ದರೂ ಜಿಹಾದಿಗಳ ವಿರುದ್ಧ. ಜಿಹಾದಿ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವ ಕೆಲಸ ಆಗುತ್ತಿದೆ. ಇಂತಹ ಶಕ್ತಿಗಳ ದಮನಕ್ಕೆ ಎಲ್ಲರೂ ಒಂದಾಗಬೇಕಿದೆ. ರಾಜೀನಾಮೆ ಕೊಟ್ಟಿರುವ ಕಾರ್ಯಕರ್ತರ ಜೊತೆ ಈಗಾಗಲೇ ನಾವು ಮಾತಾಡಿದ್ದೇವೆ. ಕಾರ್ಯಕರ್ತನನ್ನು ನಾವು ಕಳೆದುಕೊಂಡಿದ್ದು, ಈ ಸಾವಿಗೆ ಸರ್ಕಾರದಿಂದ ತಕ್ಕ ಉತ್ತರ ಕೊಡುತ್ತೇವೆ, ತನಿಖೆ ಪೂರ್ಣವಾಗಿ ಆಗಲಿ. ಏನೇನೋ ಮಾತಾಡಿ ತನಿಖೆಯು ದಾರಿ ತಪ್ಪಿಸೋದು ಬೇಡ ಎಂದು ಮನವಿ ಮಾಡಿದರು.

ಯುವ ಮೋರ್ಚಾದ ಜವಾಬ್ದಾರಿ ಇರುವ, ಸರಳ ಸಜ್ಜನಿಕೆಯ ಪ್ರವೀಣ್ ಹತ್ಯೆಯಾಗಿದೆ. ಹತ್ಯೆಯ ಆರೋಪಿಗಳನ್ನು ಗುರುತಿಸಿ ಬಂಧಿಸುವ ಪ್ರಕ್ರಿಯೆ ಪೊಲೀಸರಿಂದ ನಡೆಯುತ್ತಿದೆ. ಇದರ ಹಿಂದಿನ ಶಕ್ತಿಗಳನ್ನು ಮಟ್ಟ ಹಾಕುವ ಕೆಲಸ ಮಾಡಬೇಕಿದೆ ಮತ್ತು ಅದನ್ನು ಸರ್ಕಾರ ಮಾಡಲಿದೆ. ಇದರ ಹಿಂದೆ ಪಿಎಫ್‌ಐ ಕೈವಾಡ ಕಂಡುಬರುತ್ತಿದೆ. ಪಿಎಫ್‌ಐ ನಿಯಂತ್ರಣ ಮತ್ತು ನಿಷೇಧದ ವಿಚಾರ ಕೇಂದ್ರ ಸರ್ಕಾರದ ಮುಂದಿದೆ. ಅದಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಕೇಂದ್ರ ಕೈಗೊಳ್ಳಲಿದೆ. ಆದರೂ ನಾವು ಪಿಎಫ್‌ಐ ನಿಷೇಧಿಸಲು ಒತ್ತಾಯಿಸುವುದಾಗಿ ತಿಳಿಸಿದರು.

ಪ್ರವೀಣ್ ಮನೆಗೆ ಇಂದು ನಾನು ಮತ್ತು ಸಿಎಂ ಭೇಟಿ ನೀಡಲಿದ್ದೇವೆ. ಪಕ್ಷವು ಅವರಿಗೆ ಸಾಂತ್ವನ ಹೇಳುವುದಲ್ಲದೆ, ಅವರ ಕುಟುಂಬಕ್ಕೆ ಬೇಕಾದ ಜವಾಬ್ದಾರಿಯನ್ನು ವಹಿಸಲಿದೆ. ಸರ್ಕಾರ ಅವರ ಆಶಯಗಳನ್ನು ಈಡೇರಿಸಲಿದೆ. ರಾಜ್ಯದಲ್ಲೂ ಕಠಿಣ ಕಾನೂನಿನ ಅವಶ್ಯಕತೆ ಇದೆ. ಕೇಂದ್ರವು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಕೈಗೊಂಡ ತೀರ್ಮಾನದ ಮಾದರಿಯಲ್ಲೇ ಇಲ್ಲಿ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಅಂಥ ನಿರ್ಣಯಗಳನ್ನು ನಮ್ಮ ಸರ್ಕಾರ ತೆಗೆದುಕೊಳ್ಳಲಿದೆ ಎಂದು ನಳಿನ್​ ಕುಮಾರ್​ ಭರವಸೆ ನೀಡಿದ್ದಾರೆ.

(ಇದನ್ನೂ ಓದಿ: Praveen murder case: ಅಂತಿಮ ದರ್ಶನಕ್ಕೆ ಬಂದಿದ್ದ ಕಟೀಲ್​ ವಿರುದ್ಧ ಹಿಂದೂ ಕಾರ್ಯಕರ್ತರ ಆಕ್ರೋಶ: ಕಲ್ಲು ತೂರಾಟ, ಲಾಠಿಚಾರ್ಜ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.