ಬೆಂಗಳೂರು: ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ ಕೋರಿ ನಾನು ಕೋರ್ಟ್ಗೆ ಅರ್ಜಿ ಹಾಕಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಗೃಹ ಸಚಿವ ಬೊಮ್ಮಾಯಿ ಭೇಟಿಯಾಗಿ ಬಳಿಕ ಮಾತನಾಡಿದ ಅವರು, ನಾನು ಕೋರ್ಟ್ಗೆ ಅರ್ಜಿ ಹಾಕಲ್ಲ. ನನಗೆ ಯಾವುದೇ ಆತಂಕ ಇಲ್ಲ. ನ್ಯಾಯಾಲಯಕ್ಕೆ ಹೋಗುವ ವಿಚಾರದ ಬಗ್ಗೆ ನಾನು ಅವರ ಜತೆ ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.
ಸಚಿವ ಎಸ್.ಟಿ. ಸೋಮಶೇಖರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಮಶೇಖರ್ ಹೇಳಿಕೆ ಬಗ್ಗೆ ಗೊತ್ತಿಲ್ಲ. ನನಗೆ ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಮಾತಾಡಲ್ಲ. ಸೋಮಶೇಖರ್ ಎಷ್ಟರ ಮಟ್ಟಿಗೆ ಮಾಹಿತಿ ಕಲೆ ಹಾಕಿದ್ದಾರೋ ಗೊತ್ತಿಲ್ಲ. ಅವರ ಬಳಿಯೇ ನೀವು ಕೇಳಬೇಕು. ನನಗೆ ಮಾಹಿತಿ ಇರುವ ಹಾಗೆ ಕಾಂಗ್ರೆಸ್ನಲ್ಲಿ ಹಾಗೇನಿಲ್ಲ ಎಂದರು.
ಇದನ್ನೂ ಓದಿ.. CD ಮಾಡಿಸಿದ್ದು "ಅವರೇ": ಸಹಕಾರ ಸಚಿವ ಸೋಮಶೇಖರ್