ಬೆಂಗಳೂರು: ಮನೆಕೆಲಸ ಮಾಡುವ ಮಹಿಳೆ ಅನುರಾಧ ಮೇಲೆ ಹಲ್ಲೆ ಹಾಗು ಅವಾಚ್ಯ ಶಬ್ಧಗಳಿಂದ ನಿಂದನೆ ಪ್ರಕರಣ ಸಂಬಂಧ ನಿರ್ಮಾಪಕ ಸೌಂದರ್ಯ ಜಗದೀಶ್ ಮನೆ ಮುಂದೆ ಹೈಡ್ರಾಮ ನಡೆದಿದೆ.
ನಾಪತ್ತೆಯಾಗಿರುವ ಸೌಂದರ್ಯ ಜಗದೀಶ್ ಕುಟುಂಬಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದರೂ ಆರೋಪಿಗಳು ಹಾಜರಾಗದ ಕಾರಣ ಮನೆ ಬಳಿಯೇ ಪೊಲೀಸರು ಆಗಮಿಸಿದ್ದಾರೆ.
ಪ್ರಕರಣ ದಾಖಲಾಗಿ ಎರಡು ದಿನವಾದರೂ ಆರೋಪಿತರನ್ನು ಬಂಧಿಸದ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರ ವಿರುದ್ಧ ಗರಂ ಆಗಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಪ್ರಕರಣ ದಾಖಲಾಗಿ ಮೂರು ದಿನವಾದರೂ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಕೂಡಲೇ ಕ್ರಮ ಕೈಗೊಳ್ಳಿ:
ಐಪಿಸಿ 354 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾದರೂ ಇನ್ನು ಆರೋಪಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ.?. ಯಾರೇ ಇರಲಿ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಿ ಎಂದು ನಗರ ಪೊಲೀಸ್ ಆಯುಕ್ತರು ಖಡಕ್ ಸೂಚನೆ ನೀಡಿದ್ದಾರೆ. ಸೂಚನೆ ಬೆನ್ನಲೇ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಸೌಂದರ್ಯ ಜಗದೀಶ್ ಮನೆ ಬಳಿ ಬಂದಿದ್ದಾರೆ. ಈ ವೇಳೆ ಮನೆಯ ಗೇಟ್ ತೆರೆಯಲು ಮನೆಯವರು ನಿರಾಕರಿಸಿದ್ದಾರೆ. ಪೊಲೀಸಿಂಗ್ ಶೈಲಿಯಲ್ಲಿ ಮಾತನಾಡಿದ ಬಳಿಕ ಗೇಟ್ ತೆರೆದಿದ್ದಾರೆ.
ಹಲ್ಲೆಯಲ್ಲಿ ಸೌಂದರ್ಯ ಜಗದೀಶ್ ಮನೆಯ ಕೆಲಸದಾಕೆ ಭುವನಾ ಸಹ ಭಾಗಿಯಾಗಿದ್ದು ಮನೆಯೊಳಗೆ ಇರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವೆ ಹೊತ್ತಿನಲ್ಲಿ ಪೊಲೀಸರು ಭುವನಾಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೊಳಪಡಿಸಲಿದ್ದಾರೆ.
ಇದನ್ನೂ ಓದಿ: ನಿರ್ದೇಶಕ ಸೌಂದರ್ಯ ಜಗದೀಶ್ ಕುಟುಂಬಕ್ಕೆ ಪೊಲೀಸರ ನೋಟಿಸ್