ETV Bharat / city

ಪ್ರೀತಿಸಿ ಮದುವೆ, ಬಳಿಕ ಹಿಂಸೆ.. ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್​ನಿಂದ ಸುಟ್ಟ ಪತಿ! - ಬೆಂಗಳೂರಿನಲ್ಲಿ ಪತ್ನಿಗೆ ಸಿಗರೇಟ್​ನಿಂದ ಸುಟ್ಟ ಪತಿ ಬಂಧನ

ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿದ ಪತಿ- ಸಿಗರೇಟ್​ನಿಂದ ಸುಟ್ಟು ಕಿರುಕುಳ- ಆರೋಪಿ ಗಂಡ ಅಂದರ್​

Bengaluru man arrested over burned by cigarettes his wife  Husband arrested over showing obscene video to his wife  Bengaluru crime news  ಬೆಂಗಳೂರಿನಲ್ಲಿ ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿದ ಪತಿ ಬಂಧನ  ಬೆಂಗಳೂರಿನಲ್ಲಿ ಪತ್ನಿಗೆ ಸಿಗರೇಟ್​ನಿಂದ ಸುಟ್ಟ ಪತಿ ಬಂಧನ  ಬೆಂಗಳೂರು ಅಪರಾಧ ಸುದ್ದಿ
ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಸಿಗರೇಟ್​ನಿಂದ ಸುಟ್ಟ ಪತಿ
author img

By

Published : Jul 19, 2022, 2:04 PM IST

ಬೆಂಗಳೂರು: ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ ಹಿಂಸೆ ನೀಡುತ್ತಿದ್ದ ಆರೋಪದಡಿ ಪತಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ಬಂಧಿತ ಆರೋಪಿಯಾಗಿದ್ದು, ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ಮದ್ಯ ಕುಡಿಸಿ ದೈಹಿಕ ಹಿಂಸೆ ಕೊಡುತ್ತಿದ್ದರಂತೆ. ಜೊತೆಗೆ ಸಿಗರೇಟ್​ನಿಂದ ಸುಟ್ಟು ಚಿತ್ರಹಿಂಸೆ ನೀಡುತ್ತಿದ್ದರು ಎಂಬ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಪ್ರದೀಪ್ ಮತ್ತು ಗೃಹಿಣಿ ಇಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಆದರೆ ಮದುವೆಯಾದ ಐದು ತಿಂಗಳಿಗೇ ಹೆಂಡತಿಗೆ ಪತಿಯ ಅಸಲಿ ಮುಖದ ಬಗ್ಗೆ ತಿಳಿದಿತ್ತು. ಇಷ್ಟು ಹಿಂಸೆ ಕೊಟ್ಟಿದ್ದಲ್ಲದೇ ಐದು ಬಾರಿ ಗರ್ಭಪಾತ ಮಾಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಪತ್ನಿ ಕಾಡಿ-ಬೇಡಿ‌ ಎರಡು ಮಕ್ಕಳನ್ನು ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಓದಿ: ಕೋಲಾರ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಸುಫಾರಿ ಕಿಲ್ಲರ್ ಕಾಲಿಗೆ ಗುಂಡೇಟು

ಪ್ರದೀಪ್ ಮನೆಗೆ ಸ್ನೇಹಿತರನ್ನು ಕರೆಸಿ ಪಾರ್ಟಿ ಮಾಡಿ ಅವರ ಮುಂದೆ ಹೆಂಡತಿಗೆ ಹಿಂಸೆ ಕೊಡುತ್ತಿದ್ದರಂತೆ. ಈ ಬಗ್ಗೆ ಪ್ರಶ್ನಿಸಿದರೆ ಹಲ್ಲೆ ಮಾಡಿ ವಿಚ್ಛೇದನ ನೀಡುವಂತೆ ಒತ್ತಾಯಿಸಿತ್ತಿದ್ದರು. ಇದರಿಂದ ಬೇಸತ್ತಿದ್ದ ಪತ್ನಿ ತವರು ಸೇರಿದ್ದರು. ಆದರೆ ಪತಿ ಈಗಲೂ ಕಾಟ ಕೊಡುತ್ತಿದ್ದಾರೆ ಎಂದು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ನೊಂದ ಪತ್ನಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿ ಪ್ರದೀಪ್ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.