ದೊಡ್ಡಬಳ್ಳಾಪುರ: ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿಯ ಮಾರಸಂದ್ರ ಟೋಲ್ ಗೇಟ್ ಇಂದು ಹುಚ್ಚ ವೆಂಕಟ್ನ ಹುಚ್ಚಾಟಕ್ಕೆ ಸಾಕ್ಷಿಯಾಯಿತು. ಟೋಲ್ ಗೇಟ್ ಬಳಿ ಬಸ್ಗೆ ಕಾಯುತ್ತಿದ್ದ ಕಾಲೇಜು ಹುಡುಗಿಗೆ ಲವ್ ಪ್ರಪೋಸ್ ಮಾಡಿ ವೆಂಕಟ್ ಹುಚ್ಚಾಟ ಮೆರೆದಿದ್ದಾನೆ.
ಇಂದು ಬೆಳಗ್ಗೆ ದೊಡ್ಡಬಳ್ಳಾಪುರದಿಂದ ಬೆಂಗಳೂರು ಕಡೆ ಕಾರಿನಲ್ಲಿ ಹೊರಟ್ಟಿದ್ದ ಹುಚ್ಚ ವೆಂಕಟ್, ಮಾರಸಂದ್ರ ಟೋಲ್ ಬಳಿ ಕಾಲೇಜಿಗೆ ಹೋಗಲೆಂದು ಒಂಟಿ ಹುಡುಗಿ ಬಸ್ಗೆ ಕಾಯುತ್ತಿದ್ದಾಗ, ಅಲ್ಲಿ ಕಾರು ನಿಲ್ಲಿಸಿ, ಹುಡುಗಿ ಐ ಲವ್ ಯೂ.. ಎಂದು ಪ್ರಪೋಸ್ ಮಾಡಿದ್ದಾನೆ.
ಹುಚ್ಚ ವೆಂಕಟನ ಬಗ್ಗೆ ಮೊದಲೇ ತಿಳಿದಿದ್ದ ಹುಡುಗಿ ಮೊದಲಿಗೆ ಕಾಮಿಡಿ ಮಾಡ್ತಾ ಇದ್ದಾನೆ ಎಂದುಕೊಂಡು ಸುಮ್ಮನಾಗಿದ್ದಳು. ಆದರೆ, ವೆಂಕಟ್ ಯಾವಾಗ ಆಕೆಯನ್ನ ಹಿಂಬಾಲಿಸಿ ಪ್ರೀತಿಸುವಂತೆ, ತನ್ನ ಮದುವೆಯಾಗುವಂತೆ ಕಾಡಲು ಶುರು ಮಾಡಿದನೋ ಆಗ ಆ ಹುಡುಗಿ ಹೆದರಿ ತನ್ನ ಸಂಬಂಧಿಕರಿಗೆ ಪೋನ್ ಮಾಡಿ ಅಲ್ಲಿಂದ ತೆರಳಿದ್ದಾಳೆ.
ಇದರಿಂದ ಕೋಪಗೊಂಡ ವೆಂಕಟ್ ತನ್ನ ಕಾರಿನ ಮುಂಭಾಗದ ಗ್ಲಾಸ್ಗೆ ಕಲ್ಲಿನಿಂದ ಹೊಡೆದಿದ್ದಾನೆ. ಅಷ್ಟೊತ್ತಿಗೆ ಆತನ ಹುಚ್ಚಾಟ ನೋಡಲು ಜನ ಸಾಗರವೇ ಅಲ್ಲಿ ಸೇರಿತ್ತು. ತನ್ನ ಪರ್ಸ್ ಕಳ್ಕೊಂಡಿದ್ದ ವೆಂಕಟ್ಗೆ ಜನರೇ ಹಣ ಕೊಟ್ಟರು. ಸ್ಥಳಕ್ಕೆ ಬಂದ ರಾಜನುಕುಂಟೆ ಪೊಲೀಸರು ಅಲ್ಲಿಂದ ಹುಚ್ಚ ವೆಂಕಟ್ನನ್ನ ಕರೆದುಕೊಂಡು ಹೋದರು.