ETV Bharat / city

ಬೆಂಗಳೂರು : ಮನೆಗೆ ಬೀಗ ಹಾಕಿ‌ ಎರಡು ಗಂಟೆಯಲ್ಲೇ 40 ಗ್ರಾಂ ಚಿನ್ನಾಭರಣ ಕದ್ದ ಖದೀಮರು

author img

By

Published : Nov 14, 2021, 10:18 PM IST

Updated : Nov 14, 2021, 10:27 PM IST

ಹೊರಗೆ ಹೋಗಿದ್ದ ಮನೆಯವರು ವಾಪಸ್ ಬಂದು, ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ..

House theft in Bangalore
ಮನೆ ಕಳ್ಳತನ

ಬೆಂಗಳೂರು : ರಾಮಮೂರ್ತಿನಗರದ ಎನ್​ಐ​ಆರ್ ಲೇಔಟ್​ನಲ್ಲಿ ಮನೆಯೊಂದರಲ್ಲಿ ಹಾಡಹಗಲೇ ಖದೀಮರು ಕೈಚಳಕ ತೋರಿದ್ದಾರೆ. 40 ಗ್ರಾಂ ಚಿನ್ನಾಭರಣ ಕದ್ದು (Gold theft in Bangalore) ಪರಾರಿಯಾಗಿದ್ದಾರೆ‌.

ಕಲ್ಕೆರೆ ರಸ್ತೆಯಲ್ಲಿರುವ ಮನೆ ಮಾಲೀಕರಾದ ಶಿವಾನಂದ್, ವೇದಾವತಿ ಎಂಬುವರು ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಬೀಗ ಹಾಕಿಕೊಂಡು ಹೊರ ಹೋಗಿದ್ದಾರೆ‌.‌

ಮನೆ ಕಳ್ಳತನ

ಮನೆಯಲ್ಲಿ ಯಾರು ಇಲ್ಲದಿರುವುದನ್ನು ಅರಿತಿದ್ದ ಖದೀಮರು ಮಧ್ಯಾಹ್ನ 12 ಗಂಟೆ ವೇಳೆ ಬೀಗ ಒಡೆದು ಮನೆಗೆ‌‌ ನುಗ್ಗಿದ್ದಾರೆ. ಮನೆಯಲ್ಲಿದ್ದ 40 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ‌‌.

ಹೊರಗೆ ಹೋಗಿದ್ದ ಮನೆಯವರು ವಾಪಸ್ ಬಂದು, ನೋಡಿದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲನೆ ನಡೆಸಿ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೃತ್ಯ ನಡೆದ ಜಾಗದಲ್ಲಿ ಸಿಸಿಟಿವಿ ಇರಲಿಲ್ಲ. ಅಕ್ಕಪಕ್ಕದ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಕೆಯಾಗಿದ್ದು, ಖದೀಮರ ಚಲನವಲನ ಸೆರೆಯಾಗಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Last Updated : Nov 14, 2021, 10:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.