ಬೆಂಗಳೂರು: ಕರ್ನಾಟಕದ ಎಂಎಲ್ಎ ಮತ್ತು ರಾಜಕಾರಣಿಗಳ ಹನಿ ಹನಿಟ್ರ್ಯಾಪ್ ಪ್ರಕರಣದ ತನಿಖೆಯಲ್ಲಿ ಬಗೆದಷ್ಟು ರೋಚಕ ಸಂಗತಿಗಳು ಹೊರ ಬರುತ್ತಿದ್ದು,ಇದೀಗ ಇಬ್ಬರು ಅನರ್ಹ ಶಾಸಕರು ಕೂಡಾ ಟ್ರ್ಯಾಪ್ ಆಗಿದ್ದಾರೆ ಎನ್ನುವುದು ಸಿಸಿಬಿ ಮೂಲಗಳಿಂದ ತಿಳಿದುಬಂದಿದೆ.
ಬಂಧಿತ ಆರೋಪಿಗಳಾದ ರಾಘವೇಂದ್ರ ಹಾಗೂ ಪುಷ್ಪಾ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈವರೆಗೂ ಹತ್ತಕ್ಕಿಂತ ಹೆಚ್ಚು ಹನಿಟ್ರ್ಯಾಪ್ ಮಾಡಿರುವುದಾಗಿ ಸಿಬಿಐಗೆ ತಿಳಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣದಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದುಕೊಂಡಿರುವ ಪೆನ್ಡ್ರೈವ್ನಲ್ಲಿ ಸಂಬಂಧಿಸಿದ ವಿಡಿಯೋಗಳು ಸಿಸಿಬಿಗೆ ಲಭ್ಯವಾಗಿದ್ದು, ಹನಿಟ್ರ್ಯಾಪ್ಗೆ ಒಳಗಾದ ಉಳಿದ ಶಾಸಕರು ಸಹಿತ ದೂರು ನೀಡಿದರೆ, ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಕೈಗೊಳ್ಳಲಾಗುವುದು ಎಂದಿದ್ದಾರೆ.
ಇನ್ನೂ,ಆರೋಪಿ ರಘು ಅಲಿಯಾಸ್ ರಾಘವೇಂದ್ರನ ಮನೆಯಲ್ಲಿ ಸಿಸಿಬಿ ಶೋಧ ನಡೆಸಿ ಸಿಡಿ, ಪೆನ್ಡ್ತೈವ್ ಹಾರ್ಡ್ ಡಿಸ್ಕ್ ಹಾಗೂ ಮೊಬೈಲ್ಗಳ ಜಪ್ತಿ ಮಾಡಿದೆ. ಆರೋಪಿ 200 ಕಿರುತೆರೆ ನಟಿಯರ ಜೊತೆ ಸಂಪರ್ಕದಲ್ಲಿದ್ದ ಎನ್ನುವುದು ತಿಳಿದುಬಂದಿದ್ದು, ಅವರನ್ನು ಬಳಸಿಕೊಂಡು ರಾಜಕಾರಣಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ. ಸೀರಿಯಲ್ನಲ್ಲಿ ಚಾನ್ಸ್ ಸಿಗದ ನಟಿಯನ್ನೇ ಟಾರ್ಗೆಟ್ ಮಾಡಿದ್ದ ಆರೋಪಿ ರಾಘವೇಂದ್ರ, ಅವರನ್ನು ಬಳಸಿಕೊಂಡು ಅವರಿಂದ ರಾಜಕಾರಣಿಗಳನ್ನ ಟ್ರ್ಯಾಪ್ ಮಾಡುತ್ತಿದ್ದ. ನಟಿಯರ ವ್ಯಾನಿಟಿ ಬ್ಯಾಗ್ನಲ್ಲಿ ಕ್ಯಾಮೆರಾಗಳನ್ನ ಇಟ್ಟು ರಾಜಕಾರಣಿಗಳ ರಾಸಲೀಲೆ ಸೆರೆಹಿಡಿಯುತ್ತಿದ್ದ ಎಂದು ತಿಳಿದುಬಂದಿದೆ.