ETV Bharat / city

ಮನ್ಸೂರ್‌ ಎಲ್ಲೇ ಅವಿತಿದ್ರೂ ಬಂಧಿಸಿ ತನ್ನಿ.. ಗೃಹ ಸಚಿವ ಎಂ ಬಿ ಪಾಟೀಲ ಖಾಕಿಗೆ ಫುಲ್‌ ಫ್ರೀ ಹ್ಯಾಂಡ್‌..

ಇವತ್ತು ಕಾರ್ಖಾನೆಗಳಿಗೆ ಭೂಮಿ ಕೊಟ್ಟಾಗ ಒಂದು ಬೆಲೆ ಇರುತ್ತದೆ. 10 ವರ್ಷದ ಬಳಿಕ ಬೆಲೆ ಬದಲಾವಣೆ ಆಗಬಹುದು. ಹಾಗಂತ ಜಿಂದಾಲ್ ಒಂದಕ್ಕೆ ಈ ರೀತಿ ಮಾಡಿದರೆ, ಎಲ್ಲ ಕೈಗಾರಿಕೆಗಳಿಗೂ ಇದು ಅನ್ವಯವಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

MBPATIL
author img

By

Published : Jun 15, 2019, 9:08 PM IST

ಬೆಂಗಳೂರು: ಐ ಮಾನಿಟರಿ ಅಡ್ವೈಸರಿ (ಐಎಂಎ) ಹಗರಣ ತನಿಖೆಗೆ ವಿಶೇಷ ತನಿಖಾ ದಳ (ಎಸ್​ಐಟಿ) ರಚಿಸಲಾಗಿದ್ದು, ಸಂಸ್ಥೆಯ ಮಾಲೀಕ ಆರೋಪಿ ಮನ್ಸೂರ್ ಖಾನ್​ ಎಲ್ಲೇ ಅವಿತುಕೊಂಡಿದ್ದರೂ ಬಂಧಿಸಿ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಎಂ ಬಿ ಪಾಟೀಲ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ ಬಿ ಪಾಟೀಲ

ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರೋಪಿ ಮನ್ಸೂರ್​ ಬಂಧಿನಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದ್ದೇನೆ. ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದೇನೆ. ಎಸ್ಐಟಿ ತನಿಖಾಧಿಕಾರಿ ರವಿಕಾಂತೇಗೌಡ ಅವರಿಗೆ ಅಗತ್ಯವಾದ ಸಹಕಾರ ನೀಡಲು ಸರ್ಕಾರ ಸಿದ್ಧ ಎಂದು ಹೇಳಿದ್ದಾರೆ.

ಈಗಾಗಲೇ ಐಎಂಎ ನಿರ್ದೇಶಕರ ಮತ್ತು ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಐಎಂಎ ಆಸ್ತಿ ವಶಕ್ಕೆ ಪಡೆಯಲು ಕಾನೂನು ತಿದ್ದುಪಡಿ ಅಗತ್ಯವಿದೆ. ಇದಕ್ಕೆ ವಿವಿಧ ಇಲಾಖೆಗಳ ನಡುವೆ ಸಹಕಾರಬೇಕು. ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇಲಾಖೆಗಳ ನಡುವೆ ಸಮನ್ವಯ ಸಭೆ ಮಾಡಲಾಗುತ್ತದೆ ಎಂದು ವಿವರಿಸಿದರು. ತಮಿಳುನಾಡಿನಲ್ಲಿ ಹಣಕಾಸು ವಂಚನೆ ಸಂದರ್ಭದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಅಲ್ಲಿಯ ಪೊಲೀಸ್ ಇಲಾಖೆಗೆ ಇದೆ.‌ ಇದೇ ಮಾದರಿ ಕಾನೂನನ್ನು ರಾಜ್ಯದಲ್ಲೂ ತರಲು ಮುಂದಾಗಿದ್ದೇವೆ.‌ ಈ ಜವಾಬ್ದಾರಿಯನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗೆ ವಹಿಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಅಹೋರಾತ್ರಿ ಧರಣಿ ಸರಿಯಲ್ಲ: ಜಿಂದಾಲ್​​ಗೆ ಭೂಮಿ‌ಯನ್ನು ಲೀಸ್ ಕಮ್ ಸೇಲ್ ಆಧಾರದ ಮೇಲೆ ಈ ಹಿಂದೆಯೇ ನೀಡಲಾಗಿದೆ. ಇಂದು ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡಬೇಕು. ಇಂದು ಉತ್ತರ ಕರ್ನಾಟಕದಲ್ಲಿ ದೊಡ್ಡ ಉದ್ಯಮವಾಗಿ ಜಿಂದಾಲ್ ಬೆಳೆದಿದೆ. ಈಗಾಗಲೇ ಸಂಪುಟದಿಂದ ಉಪ ಸಮಿತಿ ರಚನೆಯಾಗಿದೆ. ಆದರೂ ಬಿಜೆಪಿ ಅಹೋರಾತ್ರಿ ಧರಣಿ ಮಾಡುವುದು ಸರಿಯಲ್ಲ. ಜಿಂದಾಲ್ ಸಂಸ್ಥೆ ನೀಡಬೇಕಾದ ಕೋಟ್ಯಂತರ ರೂಪಾಯಿ ಬಾಕಿ ಹಣ‌ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್​ ಬಾಕಿ ಕಟ್ಟುವಂತೆ ತೀರ್ಪು ಕೊಟ್ಟರೆ ಕಟ್ಟಬೇಕಾಗುತ್ತದೆ.‌ ಅದಕ್ಕೂ ಭೂಮಿ ಲೀಸ್ ಹಾಗೂ ಪರಭಾರೆಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದರು.

Intro:Mb patil Body:KN_BNG_02_15_MBPATIL_PRESSMEET_SCRIPT_VENKAT_7201951

ಆರೋಪಿ ಮನ್ಸೂರ್ ಎಲ್ಲಿದ್ದರೂ ಬಂಧಿಸಿ ತರುವಂತೆ ಸೂಚನೆ ನೀಡಿದ್ದೇವೆ: ಗೃಹ ಸಚಿವ ಎಂ.ಬಿ.ಪಾಟೀಲ್

ಬೆಂಗಳೂರು: ಐಎಂಎ ಹಗರಣ ಬಗ್ಗೆ ಎಸ್ ಐ ಟಿ ರಚನೆ ಮಾಡಲಾಗಿದ್ದು, ಎಲ್ಲಿದ್ದರೂ ಆರೋಪಿಯನ್ನು ಬಂಧಿಸಿ ತರುವಂತೆ ಸೂಚನೆ ನೀಡಿದ್ದೇವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ತನಿಖೆ ಸಂಬಂಧ ಎಲ್ಲಾ ವಿಷಯಗಳು ಹೇಳಲು ಸಾಧ್ಯವಿಲ್ಲ. ಮನ್ಸೂರ್ ಮೊದಲು ಬಂಧಿಸುವಂತೆ ಪ್ಲಾನ್ ಮಾಡಲು ಸೂಚಿಸಿದ್ದೇನೆ. ಅದಕ್ಕೆ ಅಗತ್ಯ ಸಿದ್ಧತೆ ಹಾಗೂ ಪ್ಲಾನ್ ಮಾಡಿದ್ದೇವೆ. ಎಸ್ಐಟಿ ತನಿಖಾಧಿಕಾರಿ ರವಿಕಾಂತೇಗೌಡರಿಗೆ ಏನು ಅಗತ್ಯತೆ ಇದೆ ಅದನ್ನು ಸರ್ಕಾರ ನೀಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.

ತನಿಖೆ ನಾನೂ ಈ ಸಂಬಂಧ ಉನ್ನತ ಮಟ್ಟದ ಅಧಿಕಾರಿಗಳ ಸಭೆ ಮಾಡಿದ್ದೇನೆ. ಈಗಾಗಲೇ ಐಎಂಎ ಡೈರಕ್ಟರ್ ಗಳು ಮತ್ತು ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ಈ ರೀತಿಯ ಹಲವು ಪ್ರಕರಣಗಳು ನಮ್ಮ ಮುಂದೆ ಇದೆ. ಅವುಗಳ ಆಸ್ತಿ ವಶ ಪಡಿಸಿಕೊಳ್ಳಲು ಅಗತ್ಯ ಕಾನೂನು ತಿದ್ದುಪಡಿ ಅಗತ್ಯವಿದೆ. ಈ ಕುರಿತು ವಿವಿಧ ಇಲಾಖೆಗಳ ನಡುವೆ ಸಹಕಾರ ಬೇಕು. ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ಇಲಾಖೆಗಳ ನಡುವೆ ಸಮನ್ವಯತೆ ಮಾಡಲಾಗುತ್ತದೆ ಎಂದು ವಿವರಿಸಿದರು.

ಈಗಾಗಲೇ ಆಸ್ತಿ ಜಪ್ತಿ ಮಾಡುತ್ತಿದ್ದೇವೆ. ಹಣಕಾಸು ವಿಚಾರಗಳು ಪೊಲೀಸ್ ಇಲಾಖೆಗೆ ಬರುವುದಿಲ್ಲ. ವಂಚನೆ ಆದಾಗ ಮಾತ್ರ ನಮ್ಮ ವ್ಯಾಪ್ತಿಗೆ ಬರುತ್ತದೆ. ಆದರೆ ತಮಿಳುನಾಡಿನಲ್ಲಿ ಹಣಕಾಸು ವಂಚನೆ ಸಂದರ್ಭದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಅಲ್ಲಿಯ ಪೊಲೀಸ್ ಇಲಾಖೆಗೆ ಇದೆ.‌ ಇದೇ ಮಾದರಿ ಕಾನೂನನ್ನು ರಾಜ್ಯದಲ್ಲೂ ತರಲು ಮುಂದಾಗಿದ್ದೇವೆ.‌ಈ ಜವಾಬ್ದಾರಿಯನ್ನು ಸರಕಾರದ ಮುಖ್ಯ ಕಾರ್ಯದರ್ಶಿಗೆ ವಹಿಸಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ಅಹೋರಾತ್ರಿ ಧರಣಿ ಮಾಡೋದು ಸರಿಯಲ್ಲ:

ಜಿಂದಾಲ್ ಗೆ ಭೂಮಿ‌ಯನ್ನು ಲೀಸ್ ಕಮ್ ಸೇಲ್ ಆಧಾರದ ಮೇಲೆ ಈ ಹಿಂದೆಯೇ ನೀಡಲಾಗಿದೆ. ಇವತ್ತು ರಾಜ್ಯದಲ್ಲಿ ಕೈಗಾರಿಕೆಗಳ ಬೆಳೆಯಬೇಕು. ಇವತ್ತು ಉತ್ತರ ಕರ್ನಾಟಕದಲ್ಲಿ ಬಹಳ ದೊಡ್ಡ ಉದ್ಯಮವಾಗಿ ಜಿಂದಾಲ್ ಬೆಳೆದಿದೆ. ಈಗಾಗಲೇ ಕ್ಯಾಬಿನೆಟ್ ಸಬ್ ಕಮಿಟಿ ರಚನೆಯಾಗಿದೆ. ಹಾಗಿದ್ದರೂ ಬಿಜೆಪಿ ಅಹೋರಾತ್ರಿ ಧರಣಿ ಮಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.

ಇವತ್ತು ಜಿಂದಾಲ್ ಸಂಸ್ಥೆ ನೀಡಬೇಕಾದ ಕೋಟ್ಯಂತರ ರೂಪಾಯಿ ಬಾಕಿ ಹಣ‌ ಕುರಿತು ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟ್ ಬಾಕಿ ಕಟ್ಟುವಂತೆ ತೀರ್ಪು ಕೊಟ್ಟರೆ ಕಟ್ಟಬೇಕಾಗುತ್ತದೆ.‌ ಅದಕ್ಕೂ ಭೂಮಿ ಲೀಸ್ ಹಾಗೂ ಪರಭಾರೆಗೂ ಯಾವುದೇ ಸಂಬಂಧವಿಲ್ಲ ಎಂದು ವಿವರಿಸಿದರು.

ಇವತ್ತು ಕಾರ್ಖಾನೆಗಳಿಗೆ ಭೂಮಿ ಕೊಟ್ಟಾಗ ಒಂದು ಬೆಲೆ ಇರುತ್ತದೆ. 10 ವರ್ಷ ಆದ ಮೇಲೆ ಬೇರೆ ಬೆಲೆ ಇರುತ್ತದೆ. ಹಾಗಂತ ಜಿಂದಾಲ್ ಒಂದಕ್ಕೆ ಈ ರೀತಿ ಮಾಡಿದರೆ, ಎಲ್ಲಾ ಕೈಗಾರಿಗಳಿಗೂ ಇದು ಅನ್ವಯವಾಗುತ್ತದೆ. ಇದು ಕೈಗಾರಿಕೆಗಳ ಬೆಳವಣಿಗೆಗೆ ಮಾರಕವಾಗಲಿದೆ. ಇವತ್ತು ಕೈಗಾರಿಕೆಗಳು ನಮ್ಮ ರಾಜ್ಯಕ್ಕೆ ಬರಲು ಹಿಂದೇಟು ಹಾಕುತ್ತಿದೆ. ಇತರೆ ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಉಚಿತ ಭೂಮಿ ಹಾಗು ನೀರು ನೀಡಲಾಗುತ್ತಿದೆ. ಈಗಾಗಲೆ ಹಲವು ಕಾರ್ಖಾನೆಗಳು ಬಾಗಿಲು ಹಾಕಿವೆ ಎಂದು ವಿವರಿಸಿದರು.Conclusion:Venkat
ETV Bharat Logo

Copyright © 2024 Ushodaya Enterprises Pvt. Ltd., All Rights Reserved.